ಮಲಗಿರುವ ವ್ಯಕ್ತಿಯ ಪಾದಗಳನ್ನು ಸ್ಪರ್ಶಿಸಬಾರದು ಅಂತಾರಲ್ಲ ದೊಡ್ಡೋರು, ಯಾಕೆ?

First Published Mar 20, 2024, 5:45 PM IST

ಜ್ಯೋತಿಷ್ಯದಲ್ಲಿ ಅನೇಕ ನಿಯಮಗಳಿವೆ, ಅವುಗಳ ಪಾಲನೆಯಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ, ಆದರೆ ಕೆಲವೊಂದು ನಿಯಮಗಳನ್ನು ಅನುಸರಿಸೋದರಿಂದ ಸಮಸ್ಯೆ ಖಚಿತ. ಅವುಗಳಲ್ಲಿ ಒಂದು ಮಲಗಿರುವ ವ್ಯಕ್ತಿಯ ಪಾದಗಳನ್ನು ಮುಟ್ಟುವುದು. 
 

ಜ್ಯೋತಿಷ್ಯದಲ್ಲಿ ಅನೇಕ ನಿಯಮಗಳಿವೆ, ಅವುಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಸಂತೋಷ (Happiness) ಮತ್ತು ಸಮೃದ್ಧಿ (Prosperity) ಬರುತ್ತದೆ, ಆದರೆ ಈ ನಿಯಮಗಳನ್ನು ಅನುಸರಿಸದಿರುವುದು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಜ್ಯೋತಿಷ್ಯದ ನಿಯಮಗಳ ಪ್ರಕಾರ, ಮಲಗಿರುವ ವ್ಯಕ್ತಿಯ ಪಾದಗಳನ್ನು ಸ್ಪರ್ಶಿಸಬಾರದು (touching feet) ಎನ್ನಲಾಗುತ್ತದೆ, ಹಾಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿ (Negative Energy) ರವಾನೆಯಾಗುತ್ತಂತೆ.

ನಮ್ಮ ಸಂಸ್ಕೃತಿಯಲ್ಲಿ ಪಾದಗಳನ್ನು ಸ್ಪರ್ಶಿಸುವುದು ಬಹಳ ಮುಖ್ಯ, ಹಿರಿಯರನ್ನು ಗೌರವಿಸಲು ಪಾದಗಳನ್ನು ಸ್ಪರ್ಶಿಸಲಾಗುತ್ತದೆ ಮತ್ತು ಇದು ಸಕಾರಾತ್ಮಕ ಶಕ್ತಿಯನ್ನು (Positive Vibes) ರವಾನಿಸುತ್ತದೆ ಮತ್ತು ಮೆದುಳಿನ ಮೇಲೆ ಸಕಾರಾತ್ಮಕ ಪರಿಣಾಮ (positive effect)ಬೀರುತ್ತದೆ ಎನ್ನುವ ನಂಬಿಕೆ ಇದೆ. 
 

ಮಲಗಿರುವ ವ್ಯಕ್ತಿಯ ಪಾದಗಳನ್ನು ಮುಟ್ಟಬೇಡಿ 
ಪಾದ ಸ್ಪರ್ಶಿಸಿ ಆಶೀರ್ವಾದ ಪಡೆಯಬೇಕು ನಿಜಾ, ಆದರೆ ಮಲಗಿರುವ ವ್ಯಕ್ತಿಯ ಪಾದಗಳನ್ನು ಸ್ಪರ್ಶಿಸುವುದು ಧರ್ಮಗ್ರಂಥಗಳಲ್ಲಿ ನಿಷಿದ್ಧವಾಗಿದೆ. ಯಾಕೆ ಅನ್ನೋದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

ವ್ಯಕ್ತಿಯ ಪಾದಗಳನ್ನು ಏಕೆ ಸ್ಪರ್ಶಿಸಲಾಗುತ್ತದೆ?  
ಪ್ರಾಚೀನ ಕಾಲದಿಂದಲೂ, ಹಿರಿಯರ ಪಾದಗಳನ್ನು ಸ್ಪರ್ಶಿಸುವ ನಿಯಮವಿದೆ, ಪಾದಗಳನ್ನು ಸ್ಪರ್ಶಿಸುವುದು ಸಕಾರಾತ್ಮಕ ಶಕ್ತಿಯನ್ನು (positive energy) ರವಾನಿಸುತ್ತದೆ ಮತ್ತು ಕಾರ್ಯಗಳಲ್ಲಿ ಯಶಸ್ಸಿಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. 
 

ಮಲಗಿರುವ ವ್ಯಕ್ತಿಯ ಪಾದಗಳನ್ನು ಸ್ಪರ್ಶಿಸುವುದು ನಕಾರಾತ್ಮಕ ಶಕ್ತಿಯನ್ನು ತರುತ್ತದೆ 
ಆದರೆ ಮಲಗಿರುವ ವ್ಯಕ್ತಿಯ ಕಾಲು ಸ್ಪರ್ಶಿಸಬಾರದು. ಯಾಕಂದ್ರೆ ಮಲಗುವಾಗ ವ್ಯಕ್ತಿಯ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ, ಅಂತಹ ಪರಿಸ್ಥಿತಿಯಲ್ಲಿ, ಪಾದಗಳನ್ನು ಸ್ಪರ್ಶಿಸುವುದನ್ನು ನಿಷೇಧಿಸಲಾಗಿದೆ. ಮಲಗಿರುವ ವ್ಯಕ್ತಿಯ ಪಾದಗಳನ್ನು ಸ್ಪರ್ಶಿಸುವುದು ನಕಾರಾತ್ಮಕ ಶಕ್ತಿಯನ್ನು (negative energy) ನೀಡುತ್ತದೆ.

ನಿದ್ರೆ ಮೇಲೆ ಪರಿಣಾಮ ಬೀರುತ್ತದೆ  
ಮಲಗಿರುವ ವ್ಯಕ್ತಿಯ ಪಾದಗಳನ್ನು ಸ್ಪರ್ಶಿಸುವುದು ಮಲಗಿದ ವುಅಕ್ತಿಯ ನಿದ್ರೆಗೆ ಭಂಗ (effect on sleep) ತರುತ್ತದೆ, ಅವರು ನಿದ್ರೆಯಿಂದ ಎಚ್ಚರಗೊಳ್ಳುವ ಸಾಧ್ಯತೆ ಇದೆ, ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ, ಮಲಗಿದ ವ್ಯಕ್ತಿಯ ಪಾದಗಳನ್ನು ಮುಟ್ಟಬಾರದು. 
 

ಪಾದಗಳನ್ನು ಸ್ಪರ್ಶಿಸುವ ಪ್ರಯೋಜನಗಳು 
ಪಾದಗಳನ್ನು ಸ್ಪರ್ಶಿಸುವುದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ, ಏಕೆಂದರೆ ಯಾರಾದರೂ ಬಾಗಿ ಪಾದಗಳನ್ನು ಸ್ಪರ್ಶಿಸಿದಾಗ, ದೇಹದ ಎಲ್ಲಾ ಭಾಗಗಳು ತೆರೆದಿರುತ್ತವೆ, ಇದು ದೇಹವನ್ನು ಆರೋಗ್ಯಕರವಾಗಿರಿಸುತ್ತದೆ.

ಭೂಮಿಯೊಂದಿಗಿನ ಸಂಪರ್ಕ
ಬಾಗಿ ಪಾದಗಳನ್ನು ಸ್ಪರ್ಶಿಸುವುದು ಭೂಮಿಯ ಅಂಶದೊಂದಿಗೆ ಸಂಪರ್ಕವನ್ನು ಸೃಷ್ಟಿಸುತ್ತದೆ ಮತ್ತು ಅಹಂಕಾರಕ್ಕೆ ಕಾರಣವಾಗುವುದಿಲ್ಲ. ಪಾದಗಳನ್ನು ಸ್ಪರ್ಶಿಸುವಾಗ, ಬಲಗೈಯಿಂದ ಪಾದಗಳನ್ನು ಸ್ಪರ್ಶಿಸಬೇಕು ಅನ್ನೋದನ್ನು ಯಾವಾಗಲೂ ನೆನಪಿನಲ್ಲಿಡಿ. 
 

click me!