ಯಾರನ್ನಾದರೂ ಭೇಟಿಯಾದಾಗ ರಾಮ್-ರಾಮ್ ಎಂದು ಎರಡು ಸಾರಿ ಹೇಳೋದ್ಯಾಕೆ ಗೊತ್ತಾ?

First Published Nov 26, 2022, 7:50 PM IST

ನಾವು ಸಾಮಾನ್ಯವಾಗಿ ಯಾರನ್ನಾದರೂ ಭೇಟಿಯಾದಾಗ ರಾಮ್ ರಾಮ್ ಎಂದು ಹೇಳುತ್ತೇವೆ. ಇದು ಒಬ್ಬರನ್ನೊಬ್ಬರು ಗ್ರೀಟ್ ಮಾಡಲು ನಮಸ್ಕಾರದ ಬದಲು ಹೇಳುತ್ತೇವೆ ಅನ್ನೋದು ನಮಗೆ ಗೊತ್ತು. ಆದರೆ ರಾಮ್ ರಾಮ್ ಎಂದು ಎರಡು ಬಾರಿ ಯಾಕೆ ಹೇಳುತ್ತಾರೆ ಅನ್ನೋದು ನಿಮಗೆ ಗೊತ್ತೇ? ಇಲ್ಲಿದೆ ಆ ಬಗ್ಗೆ ಸಂಪೂರ್ಣ ಮಾಹಿತಿ. 

'ರಾಮ್ ರಾಮ್' ಎಂದು ಎರಡು ಬಾರಿ ಹೇಳುವುದರ ಹಿಂದೆ ಒಂದು ದೊಡ್ಡ ರಹಸ್ಯವಿದೆ, ಏಕೆಂದರೆ ಅದು ಅನಾದಿ ಕಾಲದಿಂದಲೂ ನಡೆಯುತ್ತಿದೆ.  ಹಿಂದಿ ಶಬ್ಧಕೋಶದಲ್ಲಿ(ಕನ್ನಡದಲ್ಲೂ ಹೀಗೆಯೇ) ‘ರ’ ಇಪ್ಪತ್ತೇಳನೆಯ ಅಕ್ಷರವಾಗಿದ್ದರೆ (ವ್ಯಂಜನ), 'ಆ' ಎರಡನೇ ಅಕ್ಷರವಾಗಿದೆ (ಸ್ವರ) ಮತ್ತು ‘ಮ’ ಇಪ್ಪತ್ತೈದನೆಯ ಅಕ್ಷರವಾಗಿದೆ(ವ್ಯಂಜನ). ನಾವು ಈ ಮೂರು ಅಂಕಿಗಳನ್ನು ಒಟ್ಟುಗೂಡಿಸಿದರೆ, ಅಂದರೆ 27 + 2 + 25 = 54 ಸಂಖ್ಯೆಯನ್ನು ಪಡೆಯುತ್ತೇವೆ, ಅಂದರೆ ಒಂದು ರಾಮ ಪದದ ಒಟ್ಟು ಮೊತ್ತ 54 ಆಗಿದೆ. 

ಅಂತೆಯೇ, ಎರಡು 'ರಾಮ್ ರಾಮ್' ಗಳ ಒಟ್ಟು ಮೊತ್ತವು 108 ಆಗಿರುತ್ತದೆ. ನಾವು ಒಂದು ಮಂತ್ರವನ್ನು ಹೇಳುವಾಗ, ಅದನ್ನು 108 ಮಣಿಗಳ ಹಾರವನ್ನು ಎಣಿಸುವ ಮೂಲಕ ಹೇಳುತ್ತೇವೆ. ಹಾಗಾಗಿ 'ರಾಮ್ ರಾಮ್' ಎಂಬ ಎರಡು ಪದ ಹೇಳುವುದು ಎಂದರೆ ಮಂತ್ರವನ್ನು 108 ಸಲ ಪಠಿಸಿದಂತೆ. ಆದ್ದರಿಂದಲೇ ಯಾರು ಯಾರನ್ನಾದರೂ ಭೇಟಿಯಾದಾಗಲೆಲ್ಲಾ ರಾಮನನ್ನು ಎರಡು ಬಾರಿ 'ರಾಮ್ ರಾಮ್' ಎಂದು ಕರೆಯಲಾಗುತ್ತದೆ. ಇದರಿಂದ ಪುಣ್ಯ ಪ್ರಾಪ್ತಿಯಾಗುತ್ತೆ ಎನ್ನಲಾಗುತ್ತೆ.

ಹಿಂದೂ ಧರ್ಮದಲ್ಲಿ ಇತರರನ್ನು ರಾಮ್ -ರಾಮ್ ಎಂದು ಸ್ವಾಗತಿಸುವ ಸಾಮಾನ್ಯ ಅಭ್ಯಾಸವಿದೆ. ಹರಿಯೋಮ್, ಜೈ ಶ್ರೀ ಕೃಷ್ಣ, ಜೈ ರಾಮ್ ಜಿ ಕಿ, ಓಂ ಶಾಂತಿ, ಜೈ ಮಾತಾ ದಿ, ಹರ್ ಹರ್ ಮಹಾದೇವ್ ನಂತಹ ಇನ್ನೂ ಅನೇಕ ಪದಗಳನ್ನು ಸಹ ಬಳಸಲಾಗುತ್ತದೆ. ಆದರೆ ರಾಮ್-ರಾಮ್ ಪದ ಬಳಕೆಯು ಅತ್ಯಂತ ಸಾಮಾನ್ಯವಾಗಿದೆ. 

ರಾಮ್ ರಾಮ್ ಎಂಬುದು ವಿಷ್ಣುವಿನ ಏಳನೇ ಅವತಾರವಾದ ಹಿಂದೂ ದೇವರು ಶ್ರೀ ರಾಮನೊಂದಿಗೆ ಸಂಬಂಧ ಹೊಂದಿದೆ. ಭಗವಾನ್ ರಾಮನ ನೀತಿ, ಉತ್ತಮ ಚಾರಿತ್ರ್ಯ ಮತ್ತು ಶೌರ್ಯದಿಂದಾಗಿ ಅವನನ್ನು ಪೂಜಿಸಲಾಗುತ್ತದೆ. ಆದುದರಿಂದ ಜನರು ಭೇಟಿ ನೀಡಿದಾಗ ಮತ್ತು ಬೇರೆಯಾಗುವಾಗ ಅಥವಾ ಹೊರಡುವಾಗ ರಾಮ್ ರಾಮ್ ಎನ್ನುತ್ತಾರೆ.

ಹಿಂದೂ ಪುರಾಣಗಳ ಪ್ರಕಾರ, ರಾಮಾಯಣವನ್ನು ವಾಲ್ಮೀಕಿ ಮಹರ್ಷಿಗಳು (Valmiki Maharshi) ಬರೆದಿದ್ದಾರೆ, ಅವರು ತಮ್ಮ ಹಿಂದಿನ ಜನ್ಮದಲ್ಲಿ ಕಳ್ಳ ಅಥವಾ ದರೋಡೆಕೋರರಾಗಿದ್ದರು ಎನ್ನಲಾಗಿದೆ. ಋಷಿ ನಾರದ ಮುನಿಯು ಅವರಿಗೆ ಜ್ಞಾನೋದಯ ನೀಡುವುದಕ್ಕಾಗಿ ರಾಮ ನಾಮ ಜಪಿಸುವಂತೆ ಹೇಳಿದರು. ಮುಂದೆ ಅವರು ಜ್ಞಾನೋದಯ ಹೊಂದಿ ಜನರನ್ನು ದೋಚುವುದು ಮತ್ತು ಕೊಲ್ಲುವುದನ್ನು ನಿಲ್ಲಿಸಿದನು ಮತ್ತು ಪಾಪಗಳಿಂದ ಮುಕ್ತರಾದರು ಎನ್ನಲಾಗಿದೆ.. 

ನಂತರ ಅವರು ಸತ್ಯ, ಪ್ರಾಮಾಣಿಕತೆ ಮತ್ತು ದಯೆಯ ಮಾರ್ಗವನ್ನು ಅನುಸರಿಸುವುದನ್ನು ಮುಂದುವರಿಸಿದರು ಮತ್ತು ಹಿಂದೂ ಮಹಾಕಾವ್ಯ-ರಾಮಾಯಣವನ್ನು ಬರೆದರು. ರಾಮ ಎಂಬ ಪದವು ಯಾವ ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿದೆ ಮತ್ತು ದೇವರ ನಾಮವನ್ನು ಉಚ್ಚರಿಸುವ ಸಕಾರಾತ್ಮಕ ಪರಿಣಾಮಗಳು ಯಾವುವು ಅನ್ನೋದಕ್ಕೆ ಇದೊಂದು ಬೆಸ್ಟ್ ಉದಾಹರಣೆಯಾಗಿದೆ.

ರಾಮ-ರಾಮ ಎಂಬ ಪದವನ್ನು ಪಠಿಸುವುದರಿಂದ ನಾವು ಪಾಪಗಳನ್ನು ಮಾಡುವುದನ್ನು ತಡೆಯುತ್ತದೆ ಮತ್ತು ಪಾಪಗಳ ನಕಾರಾತ್ಮಕ ಪರಿಣಾಮವನ್ನು ನಿವಾರಿಸುತ್ತದೆ. ಇದು ಬ್ರಹ್ಮಾಂಡದಲ್ಲಿರುವ ನಕಾರಾತ್ಮಕ ಶಕ್ತಿಗಳಿಂದ ಮತ್ತು ಪಾಪಿಗಳು ಮಾಡುವ ಬ್ಲ್ಯಾಕ್ ಮ್ಯಾಜಿಕ್ (black magic) ನಂತರ ಇತರ ಶಕ್ತಿಗಳಿಂದ ನಮ್ಮನ್ನು ರಕ್ಷಿಸುತ್ತದೆ.
 

click me!