ಅಬ್ಬಬ್ಬಾ, ಇದೆಂಥಾ ಪವಾಡ! ಕಣ್ಣು ಬಿಟ್ಟ ಶಿವಲಿಂಗ!

First Published Nov 26, 2022, 10:26 AM IST

ಮಾಗಡಿಯಲ್ಲಿ ಕಣ್ಣು ಬಿಟ್ಟ ಶಿವಲಿಂಗ
ನೋಡೋಕೆ ಭಕ್ತಸಾಗರ
ಶಿವಲಿಂಗದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಶಿವನಿಗೇ ಕಣ್ಣು ಕೊಟ್ಟ ಬೇಡರ ಕಣ್ಣಪ್ಪನನ್ನು ಚಲನಚಿತ್ರದಲ್ಲಿ ನೋಡಿಯೇ ಇರುತ್ತೀವಿ. ಇದಲ್ಲದೆ, ಇನ್ನೂ ಹಲವು ಪವಾಡಗಳನ್ನು ಭಕ್ತಿಪ್ರಧಾನ ಚಿತ್ರಗಳಲ್ಲಿ ನೋಡಿರುತ್ತೇವೆ. 

ಆದರೆ, ಈ ಕಲಿಯುಗದಲ್ಲಿ ಇಂಥದ್ದೆಲ್ಲ ಆಗಲು ಸಾಧ್ಯವಿಲ್ಲ. ಏಕೆಂದರೆ, ಈಗ ನಿಜ ಭಕ್ತರೇ ಇಲ್ಲ ಎಂಬ ಮಾತುಗಳನ್ನು ಕೇಳಿರುತ್ತೇವೆ.

Latest Videos


ಇದಕ್ಕೊಂದು ಅಪವಾದವೆಂಬಂಥ, ಎಲ್ಲ ಭಕ್ತರ ಅಚ್ಚರಿಗೆ ಕಾರಣವಾಗುವಂಥ ಘಟನೆಯೊಂದು ಬೆಂಗಳೂರು ಸಮೀಪದ ಮಾಗಡಿಯ ಶಿವ ದೇವಾಲಯದಲ್ಲಿ ನಡೆದಿದೆ.

ಹೌದು, ಮಾಗಡಿಯ ಸರ್ಕಾರಿ ಬಸ್ ನಿಲ್ಧಾಣದ ಬಳಿ ಇರುವ ಈಶ್ವರ ದೇವಾಲಯದಲ್ಲಿ ಶಿವಲಿಂಗ ಕಣ್ಣು ಬಿಟ್ಟಿದ್ದಾನೆ! ಈ ಪವಾಡಕ್ಕೆ ಸಾವಿರಾರು ಜನ ಸಾಕ್ಷಿಯಾಗಿದ್ದಾರೆ.

ಕಲಿಗಾಲದ ಅಂತ್ಯಕ್ಕೆ ಶಿವ ಕಣ್ಣು ಬಿಟ್ಟಿದ್ದಾನೆಂಬ ಸುದ್ದಿ ಹಬ್ಬಿರುವ ಹಿನ್ನೆಲೆ ಮಾಗಡಿ ಪಟ್ಟಣದಲ್ಲಿ ಶುಕ್ರವಾರ ಶಿವಲಿಂಗ ನೋಡಲು ಜನಸಾಗರವೇ ಹರಿದು ಬಂದಿತ್ತು.

ಈ ದೇವಾಲಯದ ಶಿವಲಿಂಗ ಸಂಜೆ ಹೊತ್ತಿಗೆ ಕೊಂಚ ಹೊತ್ತು ಕಣ್ಣು ತೆರೆದು, ಕೊಂಚ ಸಮಯದ ಬಳಿಕ ಕಣ್ಣು ಮುಚ್ಚಿಕೊಂಡಿರುವ ಪವಾಡ ನಡೆದಿದೆ.

ಶಿವ ಕಣ್ಣು ಬಿಟ್ಟಿರುವ ಫೋಟೋಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದಂತೆ ದೇವಾಲಯಕ್ಕೆ ಭಕ್ತರ ದಂಡು ಹೆಚ್ಚಾಗಿದೆ. ಅಕ್ಕಪಕ್ಕದ ಊರುಗಳಿಂದ ಜನ ಅಚ್ಚರಿ ನೋಡಲು ಬಂದಿದ್ದಾರೆ. 

ಭಕ್ತರನ್ನು ನಿಯಂತ್ರಿಸಲು ಪೋಲೀಸರು ಹರಸಾಹಸ ಮಾಡಿದ್ದಾರೆ. ಈ ವಿಚಾರವು ಸಧ್ಯ ಹಲವು ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಹಿಂದೆ ಗೋಕಾಕ್‌ನಲ್ಲಿಯೂ ಶಿವಲಿಂಗ ಕಣ್ಣು ಬಿಟ್ಟಿದ್ದು ಸುದ್ದಿಯಾಗಿತ್ತು. 

click me!