ಒಳ್ಳೆ ಮಾತಾನಾಡಿ ಅಂತ ಹೇಳಿ ಎಳ್ಳು ಬೆಲ್ಲ ಕೊಡೋದ್ಯಾಕೆ?

First Published Jan 14, 2021, 2:06 PM IST

ಎಳ್ಳು ಮತ್ತು ಬೆಲ್ಲ ತಿನ್ನದೇ ಮಕರ ಸಂಕ್ರಾಂತಿ ಅಪೂರ್ಣ. ಈ ಕಾಂಬಿನೇಷನ್ನಲ್ಲಿ ಅನೇಕ ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಇದು ಸಂಕ್ರಾಂತಿ ಹಬ್ಬಕ್ಕೆ ಸಮಾನಾರ್ಥಕ. ಆಕಾಶದಲ್ಲಿ ಹಾರಿಸುವ ಗಾಳಿಪಟದಿಂದ ಹಿಡಿದು ಹಳದಿ ಬಣ್ಣದ ಆಹಾರಗಳನ್ನು ತಿನ್ನುವವರೆಗೆ, ಮಕರ ಸಂಕ್ರಾಂತಿ ಭಾರತದ ಬಹುತೇಕ ಭಾಗಗಳಲ್ಲಿ ಆಚರಿಸಲ್ಪಡುವ ಒಂದು ಸಂಭ್ರಮದ ಹಬ್ಬವಾಗಿದೆ. 

ಸಂಕ್ರಾಂತಿಯ ದಿನ ಎಳ್ಳು ಮತ್ತು ಬೆಲ್ಲ ಯಾಕೆ ತಿನ್ನುತ್ತಾರೆ?ಎಳ್ಳು ಮತ್ತು ಬೆಲ್ಲ ಇವೆರಡೂ ಚಳಿಗಾಲದ ಆಹಾರ ಪದಾರ್ಥಗಳಾಗಿವೆ, ಅವುಗಳನ್ನು ಬಳಸಿ ತಯಾರಿಸಿದ ಸಿಹಿತಿಂಡಿಗಳು ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಈ ಕಾರಣಕ್ಕಾಗಿಯೇ ಎಳ್ಳಿನ ಲಾಡು ಮತ್ತು ಚಿಕ್ಕಿಗಳನ್ನು ಸುಲಭವಾಗಿ ಶೇಖರಿಸಿಡಬಹುದು, ಅವು ಕೆಡಬಹುದು ಎಂದು ಚಿಂತಿಸದೆ ದೀರ್ಘಕಾಲ ಶೇಖರಿಸಿಡಬಹುದು.
undefined
ಸಂಕ್ರಾಂತಿಯಂದು ಈ ಸಿಹಿತಿಂಡಿ ತಯಾರಿಸಿ, ಪೂಜೆಯ ಸಮಯದಲ್ಲಿ ನೈವೇದ್ಯವಾಗಿ ಇಟ್ಟು, ಪ್ರಸಾದವಾಗಿ ಹಂಚುತ್ತಾರೆ ಮತ್ತು ಉಳಿದದ್ದನ್ನು ಮುಂದಿನ ಬಳಕೆಗೆ ಸಂಗ್ರಹಿಸುತ್ತಾರೆ.
undefined
ಎಳ್ಳು ಮತ್ತು ಬೆಲ್ಲದ ಪೌಷ್ಟಿಕಮೌಲ್ಯಎಳ್ಳು ದೇಹಕ್ಕೆ ಬಿಸಿಯನ್ನು ಒದಗಿಸುತ್ತಿದ್ದರೆ, ಬೆಲ್ಲವು ಸಕ್ಕರೆಯ ಪರ್ಯಾಯವಾಗಿದೆ. ಎಳ್ಳಿನ ಬೀಜಗಳು ಮೂಳೆಗಳನ್ನು ಬಲಪಡಿಸುತ್ತದೆ, ಕೂದಲಿನ ಗುಣಮಟ್ಟವನ್ನು ಹೆಚ್ಚಿಸುತ್ತದೆ, ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ ಮತ್ತು ಚರ್ಮವು ಆರೋಗ್ಯಕರವಾಗಿರಿಸುತ್ತದೆ, ಏಕೆಂದರೆ ಇದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಮೆಗ್ನೀಷಿಯಂಗಳು ತುಂಬಿರುತ್ತವೆ.
undefined
ಬೆಲ್ಲವು ಜೀರ್ಣಕ್ರಿಯೆಯನ್ನು ಸಕ್ರಿಯಗೊಳಿಸುತ್ತದೆ, ಇದು ದೇಹದ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಇದರಲ್ಲಿ ಕಬ್ಬಿಣಾಂಶ ಅಧಿಕವಾಗಿದ್ದು ರಕ್ತವನ್ನು ಶುದ್ಧೀಕರಿಸುತ್ತದೆ, ಸತು ಮತ್ತು ಸೆಲೆನಿಯಂ ನಂತಹ ಖನಿಜಗಳು ಬೇಗನೆ ವಯಸ್ಸಾಗುವುದನ್ನು ತಡೆಗಟ್ಟುತ್ತವೆ.
undefined
ಎಳ್ಳು ಮತ್ತು ಬೆಲ್ಲದ ಸಂಯೋಜನೆಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಋತುಮಾನದ ಸೋಂಕುಗಳಿಂದ ದೇಹವನ್ನು ಕಾಪಾಡುತ್ತದೆ.
undefined
ಮನೆಯಲ್ಲಿ ಮಾಡಬಹುದಾದ ಎಳ್ಳು ಮತ್ತು ಬೆಲ್ಲದ ಸಿಹಿತಿಂಡಿಗಳುಎಳ್ಳಿನ ಹೋಳಿಗೆಯಿಂದ ಎಳ್ಳಿನ ಲಾಡಿನವರೆಗೂ ಈ ಹಬ್ಬದ ಸೀಸನ್ನಲ್ಲಿ ಪ್ರಯತ್ನಿಸಲು ಸಾಕಷ್ಟು ಸಿಹಿ ತಿಂಡಿಗಳ ಆಯ್ಕೆಗಳಿವೆ.ಎಳ್ಳಿನ ಹೋಳಿಗೆ ಒಂದು ಸಾಂಪ್ರದಾಯಿಕ ಮರಾಠಿ ಭಕ್ಷ್ಯವಾಗಿದ್ದು, ಇದು ಸಂಕ್ರಾಂತಿಯ ಹೈಲೈಟ್. ಇದು ಮೂಲತಃ ಎಳ್ಳು, ಬೆಲ್ಲವನ್ನುಉಂಡೆಗಳನ್ನು ಮಾಡಿ, ನಂತರ ಅದನ್ನು ಲಟ್ಟಿಸಿ ಪರಾಟ ರೀತಿ ಮಾಡಲಾಗುತ್ತದೆ.
undefined
ಎಳ್ಳು, ಬೆಲ್ಲ, ಗೋಧಿ ಹಿಟ್ಟು ಮತ್ತು ಸ್ವಲ್ಪ ಕತ್ತರಿಸಿದ ಕಾಯಿಗಳನ್ನು ಮಿಶ್ರಣ ಮಾಡಿ ಲಡ್ಡು ತಯಾರಿಸಬಹುದು. ಮಕರ ಸಂಕ್ರಾಂತಿಯ ಈ ಶುಭ ಸಂದರ್ಭದಲ್ಲಿ ಚಿಕ್ಕಿ, ಗಜಕ್ ಮತ್ತು ಬರ್ಫಿಯನ್ನು ಸಹ ಮನೆಯಲ್ಲಿ ಮಾಡಬಹುದು.
undefined
click me!