ಕೋಪ, ತಾಪ ತರಿಸೋ ಈರುಳ್ಳಿ-ಬೆಳ್ಳುಳ್ಳಿ ಪೂಜಾ ವೇಳೆ ನಿಷಿದ್ಧ!

First Published | Nov 29, 2023, 4:35 PM IST

ಹಿಂದೂ ಧರ್ಮದಲ್ಲಿ ಆಹಾರದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನೋದನ್ನು ನಿಷೇಧಿಸಲಾಗಿದೆ. ಅದರಲ್ಲೂ ಹಬ್ಬಗಳ ಸಂದರ್ಭದಲ್ಲಿ, ದೇವರ ಪೂಜೆಯ ಸಮಯದಲ್ಲೂ ಇದನ್ನು ದೂರ ಇಡಲಾಗುತ್ತೆ. ಇದಕ್ಕೆ ಕಾರಣ ಏನು ಅನ್ನೋದನ್ನು ತಿಳಿಯೋಣ. 
 

ಹಿಂದೂ ಮನೆಗಳಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ (Garlic and Onion) ತಿನ್ನಬಾರದು ಎಂದು ಹೇಳಿರೋದನ್ನು ನೀವು ನೋಡಿರಬಹುದು. ಈ ಎರಡೂ ಆಹಾರಗಳನ್ನು ಸಹ ದೇವರ ಆರಾಧನೆ, ಹಬ್ಬ, ವ್ರತದ ಸಮಯದಲ್ಲಿ ಉಪಯೋಗಿಸೋದೇ ಇಲ್ಲ. ಇದರ ಹಿಂದೆ ಧಾರ್ಮಿಕ ಕಾರಣವಿದೆ. ವಾಸ್ತು ಶಾಸ್ತ್ರಗಳ ಪ್ರಕಾರ, ಈರುಳ್ಳಿ-ಬೆಳ್ಳುಳ್ಳಿ ತಿನ್ನುವುದನ್ನು ಏಕೆ ನಿಷೇಧಿಸಲಾಗಿದೆ ಎಂದು ಜ್ಯೋತಿಷ್ಯ ತಜ್ಞರಿಂದ ತಿಳಿದುಕೊಳ್ಳೋಣ. 
 

ಆಹಾರದ ವಿಧಗಳು 
ಧರ್ಮಗ್ರಂಥಗಳ ಪ್ರಕಾರ, ಮೂರು ರೀತಿಯ ಆಹಾರಗಳಿವೆ (3 types of foods). ಒಂದು ಸಾತ್ವಿಕ ಆಹಾರ, ಎರಡನೇಯದು ರಾಜಸಿಕ್ ಮತ್ತು ಮೂರನೇಯದು ತಾಮಸಿಕ್ ಆಹಾರ.

Tap to resize

ತಾಮಸಿಕ್ ಆಹಾರ ಎಂದರೇನು?   
ಈ ಆಹಾರವನ್ನು ಸೇವಿಸುವ ಮೂಲಕ, ಅಹಂ, ಕೋಪ, ಭಾವೋದ್ರೇಕ ಮತ್ತು ವಿನಾಶದಂತಹ ಅನೇಕ ಗುಣಗಳು ಮನಸ್ಸಿನಲ್ಲಿ ಉದ್ಭವಿಸಲು ಪ್ರಾರಂಭಿಸುತ್ತವೆ. 

ತಾಮಸಿಕ್ ಆಹಾರಗಳು ಯಾವುವು? 
ಈರುಳ್ಳಿ ಮತ್ತು ಬೆಳ್ಳುಳ್ಳಿ ತಾಮಸಿಕ್ ಆಹಾರದ ವರ್ಗಕ್ಕೆ ಸೇರುತ್ತವೆ. ನಂಬಿಕೆಗಳ ಪ್ರಕಾರ, ಇವೆರಡೂ ಭಾವೋದ್ರೇಕ, ಉತ್ಸಾಹ ಮತ್ತು ಅಜ್ಞಾನವನ್ನು ಉತ್ತೇಜಿಸುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿ ಈ ಆಹಾರಗಳನ್ನು ಸೇವಿಸಬಾರದು ಎನ್ನಲಾಗುತ್ತೆ.

ಧರ್ಮದ ಹಾದಿಯಲ್ಲಿ ಅಡೆತಡೆಗಳು 
ಈರುಳ್ಳಿ ಮತ್ತು ಬೆಳ್ಳುಳ್ಳಿ ಈ ಎರಡನ್ನೂ ಸೇವಿಸುವುದರಿಂದ ಆಧ್ಯಾತ್ಮಿಕತೆಯ (spiritual way) ಹಾದಿಗೆ ಅಡ್ಡಿಯಾಗುತ್ತದೆ. ಈ ಕಾರಣಕ್ಕಾಗಿ, ನವರಾತ್ರಿಯ ಸಮಯದಲ್ಲಿಯೂ ಇದನ್ನು ತಿನ್ನುವುದನ್ನು ನಿಷೇಧಿಸಲಾಗಿದೆ. ಜೊತೆಗೆ ಉಪವಾಸ, ಹಬ್ಬ ಹರಿದಿನಗಳ ಸಮಯದಲ್ಲೂ ಇದನ್ನು ತಿನ್ನೋದಿಲ್ಲ. 

ಅಸ್ವಸ್ಥತೆಗಳು ಉದ್ಭವಿಸುತ್ತವೆ 
ಗ್ರಂಥಗಳ ಪ್ರಕಾರ, ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವುದು ದೇಹಕ್ಕೆ ಶಾಖವನ್ನು (body heat) ತರುತ್ತದೆ, ಮನಸ್ಸಿನಲ್ಲಿ ಅನೇಕ ಅಸ್ವಸ್ಥತೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಇದನ್ನು ತಿನ್ನಬಾರದು ಎಂದು ಸಹ ಹೇಳಲಾಗುವುದು. 
 

ಮನಸ್ಸು ಏಕಾಗ್ರತೆ ಸಾಧಿಸಲು ಸಾಧ್ಯವಿಲ್ಲ
ಈರುಳ್ಳಿ ಬೆಳ್ಳುಳ್ಳಿಯನ್ನು ತಿನ್ನುವ ಮೂಲಕ, ವ್ಯಕ್ತಿಯು ತನ್ನನ್ನು ಏಕಾಗ್ರತೆಯನ್ನು (concentration) ಸಾಧಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ, ಅವನು ಪೂಜಾ ಮಾರ್ಗದಿಂದ ವಿಮುಖನಾಗುತ್ತಾನೆ. ಧ್ಯಾನ ಮಾಡಲು ಸಹ ಸಾಧ್ಯವಿಲ್ಲ. 

ವೈಜ್ಞಾನಿಕ ಕಾರಣಗಳು 
ವಿಜ್ಞಾನಿಗಳ (scientific reason) ಪ್ರಕಾರ, ಈರುಳ್ಳಿ ಬೆಳ್ಳುಳ್ಳಿ ತಿನ್ನುವುದು ಆಲಸ್ಯವನ್ನು ಉಂಟುಮಾಡುತ್ತದೆ, ಇದರಿಂದಾಗಿ ವ್ಯಕ್ತಿಯು ಪೂರ್ಣ ನಿದ್ರೆ ಪಡೆಯಲು ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸುತ್ತಾನೆ ಎಂದು ತಿಳಿದು ಬಂದಿದೆ. 

Latest Videos

click me!