ಅರಿಶಿನವನ್ನು ಭಾರತೀಯ ಪಾಕಪದ್ಧತಿಯಲ್ಲಿ ಸಾಕಷ್ಟು ಮಹತ್ವದ ಮಸಾಲೆ ಎಂದು ಪರಿಗಣಿಸಲಾಗುತ್ತದೆ. ಇದರ ಹೊರತಾಗಿ ಅರಿಶಿನವು ಚರ್ಮದ ಸಮಸ್ಯೆಗಳಿಗೆ ಮದ್ದಾಗಿ ಬಳಕೆಯಾಗುತ್ತದೆ. ಸಾಮಾನ್ಯವಾಗಿ ವಧು ಮತ್ತು ವರನ ಮನೆಯಲ್ಲಿ, ಮದುವೆಯ ದಿನದ ಮೊದಲು ಅಥವಾ ಬೆಳಿಗ್ಗೆ ವಧು ಮತ್ತು ವರನ ಮುಖ, ಕುತ್ತಿಗೆ, ಕೈ ಮತ್ತು ಪಾದಗಳಿಗೆ ಅವರ ಪ್ರೀತಿಪಾತ್ರರು ಅರಿಶಿನ ಹಚ್ಚುತ್ತಾರೆ.