ಆಗ ಸದಾಶಿವನು(Sadashiv) ಅಲ್ಲಿಗೆ ತಲುಪಿ, ಮಕ್ಕಳೇ, ನಾನು ನಿಮ್ಮನ್ನು ಲೋಕ ಸೃಷ್ಟಿಗೆ ಕಳುಹಿಸಿದ್ದೇನೆ ಮತ್ತು ಸೃಷ್ಟಿಯನ್ನು ಲಯಗೊಳಿಸುವ ಕೆಲಸವನ್ನು ಶಿವನಿಗೆ ನೀಡಿದ್ದೇನೆ ಎಂದರಂತೆ. ಹಾಗಾಗಿ ಮಹಾದೇವಿ ಪುರಾಣದ ಪ್ರಕಾರ ಶಿವ, ವಿಷ್ಣು , ಬ್ರಹ್ಮ ಸದಾಶಿವನ ಮಕ್ಕಳು. ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವ ಪ್ರಕಾರ, ಶಿವನ ತಾಯಿಯ ಹೆಸರು ಅಷ್ಟಾಂಗಿ ದೇವಿ ಮತ್ತು ಅವನ ತಂದೆಯ ಹೆಸರು ಸದಾಶಿವ.