Chanakya Niti : ನರಕದಲ್ಲಿ ಶಿಕ್ಷೆ ಅನುಭವಿಸಿ, ಬಳಿಕ ಭೂಮಿ ಮೇಲೆ ಹುಟ್ಟೋ ಜನರ ಸ್ಥಿತಿ ಹೇಗಿರುತ್ತೆ?

First Published | Apr 20, 2024, 6:02 PM IST

ಆಚಾರ್ಯ ಚಾಣಕ್ಯನ ನೀತಿಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಚಾಣಕ್ಯ ನೀತಿಗಳನ್ನು ಅನುಸರಿಸುವ ವ್ಯಕ್ತಿಯು ಖಂಡಿತವಾಗಿಯೂ ಜೀವನದ ಹಾದಿಯಲ್ಲಿ ಯಶಸ್ಸನ್ನು ಸಾಧಿಸುತ್ತಾನೆ. ಚಾಣಕ್ಯ ನೀತಿಯ ಪ್ರಕಾರ, ನರಕದಲ್ಲಿ ಹಲವು ಕಷ್ಟಗಳನ್ನು ಅನುಭವಿಸಿದ ಬಳಿಕ ಕೆಲವರು ಭೂಮಿ ಮೇಲೆ ಮತ್ತೆ ಜನಿಸುತ್ತಾರೆ. ಅವರ ಗುಣಗಳು ಹೇಗಿರಲಿದೆ ಅನ್ನೋದನ್ನು ತಿಳಿಸಿದ್ದಾರೆ. 
 

ಭಾರತದ ಇತಿಹಾಸದ ಬಗ್ಗೆ ಮಾತನಾಡುವಾಗ, ಆಚಾರ್ಯ ಚಾಣಕ್ಯನನ್ನು(Acharya Chanakya) ಅವರಲ್ಲಿ ಪ್ರಮುಖ ವ್ಯಕ್ತಿ ಎಂದು ಪರಿಗಣಿಸಲಾಗಿದೆ. ಭಾರತೀಯ ಸಾಮ್ರಾಜ್ಯವನ್ನು ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಆಚಾರ್ಯ ಚಾಣಕ್ಯನನ್ನು ಕೌಟಿಲ್ಯ ಮತ್ತು ವಿಷ್ಣು ಗುಪ್ತ ಎಂದೂ ಕರೆಯಲಾಗುತ್ತದೆ. ಆಚಾರ್ಯ ಚಾಣಕ್ಯ ಮೌರ್ಯ ಸಾಮ್ರಾಜ್ಯದ ಚಂದ್ರಗುಪ್ತ ಮೌರ್ಯನ ಅತ್ಯಂತ ವಿಶ್ವಾಸಾರ್ಹ ಸಲಹೆಗಾರ ಮತ್ತು ಮಂತ್ರಿಯಾಗಿದ್ದ.
 

ಚಾಣಕ್ಯ ಶಾಸ್ತ್ರೀಯ ಗ್ರಂಥಗಳ ಮೂಲಕ ಜೀವನದ ಅನೇಕ ಪ್ರಮುಖ ತತ್ವಗಳನ್ನು ವಿವರಿಸಿದ್ದಾನೆ. ಇಂದಿಗೂ, ಜನರು ಚಾಣಕ್ಯನ ನೀತಿಗಳನ್ನು (Chanakya Niti) ಅನುಸರಿಸುವ ಮೂಲಕ ಯಶಸ್ಸನ್ನು ಸಾಧಿಸುತ್ತಿದ್ದಾರೆ. ಅವರ ಪ್ರತಿಯೊಂದು ಧರ್ಮೋಪದೇಶಕ್ಕೂ ತನ್ನದೇ ಆದ ಮಹತ್ವವಿದೆ.
 

Latest Videos


ಈ ಬೋಧನೆಗಳಲ್ಲಿ, ನಾವು ಇಂದು ಮಾತನಾಡಲಿರುವ ವಿಷಯವೆಂದರೆ, ಯಾವ ವ್ಯಕ್ತಿಯು ನರಕವನ್ನು ಅನುಭವಿಸಿದ ನಂತರ ಭೂಮಿಯ ಮೇಲೆ ಜನಿಸುತ್ತಾನೆ ಎಂದು ಹೇಗೆ ತಿಳಿಯುವುದು. ಆಚಾರ್ಯ ಚಾಣಕ್ಯ ನೀತಿಯಲ್ಲಿ ಅಂತಹ ವ್ಯಕ್ತಿಯ ಕೆಟ್ಟ ಅಭ್ಯಾಸಗಳ (bad habbits) ವಿವರವಾಗಿ ನೀಡಲಾಗಿದೆ, ಅವುಗಳ ಬಗ್ಗೆ ತಿಳಿಯೋಣ.
 

ಸದ್ಗುಣಶೀಲ ವ್ಯಕ್ತಿಯನ್ನು ಗುರುತಿಸುವುದು ಹೇಗೆ?
ಆಚಾರ್ಯ ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ, ಸ್ವರ್ಗದ  (heaven) ಸಂತೋಷವನ್ನು ಅನುಭವಿಸಿದ ನಂತರ ಭೂಮಿ ಮೇಲೆ ಜನಿಸಿದ ವ್ಯಕ್ತಿಯನ್ನು ಈ ಗುಣಗಳಿಂದ ಗುರುತಿಸಬಹುದು ಎಂದು ಏಳನೇ ಅಧ್ಯಾಯದ 16ನೇ ಶ್ಲೋಕದಲ್ಲಿ ಹೇಳಲಾಗಿದೆ.

ಸ್ವರ್ಗದಿಂದ ಜನಿಸಿದ ಜನರ ಗುಣಗಳು
ಆಚಾರ್ಯ ಚಾಣಕ್ಯನ ಪ್ರಕಾರ, ಸ್ವರ್ಗದ ಸಂತೋಷವನ್ನು ಅನುಭವಿಸಿದ ನಂತರ ಭೂಮಿಯಲ್ಲಿ ಜನಿಸಿದವರ ಮಾತು ತುಂಬಾ ಸಿಹಿಯಾಗಿರುತ್ತದೆ. ಅಂತಹ ಜನರು ದಾನವನ್ನು ತಮ್ಮ ಧರ್ಮವೆಂದು ಪರಿಗಣಿಸುತ್ತಾರೆ. ಈ ಜನರು ದೇವರನ್ನು ಪೂಜಿಸುತ್ತಾರೆ ಮತ್ತು ಆರಾಧಿಸುತ್ತಾರೆ. ಜೊತೆಗೆ ಬ್ರಾಹ್ಮಣರಿಗೆ ದಾನ ಮಾಡುತ್ತಾರೆ.

ಆಚಾರ್ಯ ಚಾಣಕ್ಯನ ನೀತಿಯಲ್ಲಿ, ವ್ಯಕ್ತಿಯ ಗುಣಗಳು ಮತ್ತು ಅವಗುಣಗಳ ಬಗ್ಗೆ ವಿಶೇಷ ಗಮನ ನೀಡಲಾಗಿದೆ. ಚಾಣಕ್ಯನ ಪ್ರಕಾರ, ಅನೇಕ ಜನರು ನರಕದಲ್ಲಿ (hell) ತೊಂದರೆಗಳನ್ನು ಅನುಭವಿಸಿದ ನಂತರ ಭೂಮಿಯ ಮೇಲೆ ಜನಿಸುತ್ತಾರೆ.

ನರಕ ಅನುಭವಿಸಿ ಭೂಮಿ ಮೇಲೆ ಹುಟ್ಟುವ ವ್ಯಕ್ತಿಯ ಗುಣಗಳು
ಮತ್ತೊಂದೆಡೆ, ನರಕದ ದುಃಖವನ್ನು ಅನುಭವಿಸಿದ ನಂತರ ಭೂಮಿಯ ಮೇಲೆ ಜನಿಸಿದ ಜನರನ್ನು ಅವರ ನ್ಯೂನತೆಗಳಿಂದ ಗುರುತಿಸಬಹುದು. ಅವರ ಮಾತು ಕಹಿಯಾಗಿರುತ್ತದೆ. ಅಂತಹ ಜನರು ಕೆಳಮಟ್ಟದ ಜನರೊಂದಿಗೆ ಜೀವಿಸಲು ಇಷ್ಟಪಡುತ್ತಾರೆ, ಅವರು ಕಡು ಬಡವರಾಗಿರುತ್ತಾರೆ ಮತ್ತು  ಕುಟುಂಬ ಅಥವಾ ಸ್ನೇಹಿತರೊಂದಿಗೆ ಹೊಂದಿಕೊಳ್ಳುವುದಿಲ್ಲ. ಅಂತಹ ಜನರು ಯಾವಾಗಲೂ ಜೀವನದಲ್ಲಿ ಅಸಂತುಷ್ಟರಾಗಿರುತ್ತಾರೆ.

click me!