ರಾಮಭಕ್ತ ಹನುಮಂತನನ್ನು ಭಜರಂಗಬಲಿ ಎಂದು ಕರೆಯೋದ್ಯಾಕೆ?

First Published Apr 20, 2024, 2:46 PM IST

ಶನಿವಾರ ಮತ್ತು ಮಂಗಳವಾರ ಹನುಮಂತನಿಗೆ ಸಮರ್ಪಿತವಾದ ದಿನಗಳಾಗಿವೆ. ಈ ಎರಡು ವಿಶೇಷ ದಿನಗಳ ಜೊತೆಗೆ, ಹನುಮಾನ್ ಜಯಂತಿ ಕೂಡ ಬರುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ವಿಶೇಷ ಸಂದರ್ಭದಲ್ಲಿ, ಇಂದು ನಾವು ಹನುಮಂತನ ಹೆಸರಿನ ಅರ್ಥವನ್ನು ನಿಮಗೆ ಹೇಳುತ್ತೇವೆ.
 

ಈ ವರ್ಷ ಹನುಮಾನ್ ಜಯಂತಿಯನ್ನು (Hanuman Jayanti) ಏಪ್ರಿಲ್ 23 ರಂದು ಆಚರಿಸಲಾಗುತ್ತದೆ. ಹನುಮಾನ್ ಜಯಂತಿಯನ್ನು ರಾಮ ಭಕ್ತ ಹನುಮಂತನ ಜನ್ಮ ದಿನದ ನೆನಪಿಗಾಗಿ ಆಚರಿಸಲಾಗುತ್ತದೆ. ಹನುಮಂತನನ್ನು ಪೂಜಿಸೋದರಿಂದ ಜೀವನದ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತಚೆ ಮತ್ತು ಭಕ್ತರ ಎಲ್ಲಾ ಆಸೆಗಳು ಈಡೇರುತ್ತವೆ. 

ಹನುಮಂತನನ್ನು ಮೆಚ್ಚಿಸಲು ಜನರು ಮಂಗಳವಾರ ಮತ್ತು ಶನಿವಾರ ಉಪವಾಸವನ್ನು ಆಚರಿಸುತ್ತಾರೆ. ಇತರ ದೇವರುಗಳು ಮತ್ತು ದೇವತೆಗಳಂತೆ, ಹನುಮಂತನ ಕೂಡ ಅನೇಕ ಹೆಸರುಗಳನ್ನು ಹೊಂದಿದ್ದಾರೆ. ಭಕ್ತರು ಅವನನ್ನು ಸಂಕಟಮೋಚನ್, ಮಹಾವೀರ, ಮಹಾಬಲಿ, ಹನುಮಾನ್, ಆಂಜನೇಯ, ಹನುಮಂತ ಮತ್ತು ಭಜರಂಗಬಲಿ ಸೇರಿ ಅನೇಕ ಹೆಸರುಗಳಿಂದ ಕರೆಯುತ್ತಾರೆ. ಹನುಮಂತನಿಗೆ ಭಜರಂಗಬಲಿ (Bhajragbali) ಎಂಬ ಹೆಸರು ಹೇಗೆ ಬಂತು ಮತ್ತು ಅದರ ಅರ್ಥವೇನು ಅನ್ನೋದರ ಬಗ್ಗೆ ಇಂದು ತಿಳಿಯೋಣ…
 

ಹನುಮಂತನನ್ನು ಭಜರಂಗಬಲಿ ಎಂದು ಏಕೆ ಕರೆಯಲಾಗುತ್ತದೆ?
ಹನುಮಂತನನ್ನು ಭಜರಂಗಬಲಿ ಎಂದು ಕರೆಯುವುದರ ಹಿಂದೆ ಎರಡು ನಂಬಿಕೆಗಳಿವೆ. ಮೊದಲ ನಂಬಿಕೆಗಳ ಪ್ರಕಾರ, ಭಜರಂಗಬಲಿ ಬಹಳ ಶಕ್ತಿಶಾಲಿ, ಅವನ ದೇಹವು ಗುಡುಗಿನಂತೆ, ಆದ್ದರಿಂದ ಭಕ್ತರು ಅವನನ್ನು ಭಜರಂಗಬಲಿ ಎಂದು ಕರೆಯುತ್ತಾರೆ. ಎರಡನೆಯ ನಂಬಿಕೆಯೆಂದರೆ, ಭಗವಾನ್ ರಾಮನನ್ನು ಮೆಚ್ಚಿಸಲು ಹನುಮಂತ ತಮ್ಮ ದೇಹದಾದ್ಯಂತ ಸಿಂಧೂರ ಹಚ್ಚಿದರು, ನಂತರ ಅವರಿಗೆ ಭಜರಂಗಬಲಿ ಎಂದು ಹೆಸರಿಸಲಾಯಿತು. ಈ ಎರಡು ಪ್ರಾಚೀನ ನಂಬಿಕೆಗಳ ಹೊರತಾಗಿ, ಹನುಮಂತನ ಈ ಹೆಸರಿನ ಹಿಂದೆ ಒಂದು ಪುರಾಣ ಕಥೆಯೂ ಇದೆ, ಅದರ ಬಗ್ಗೆ ತಿಳಿದುಕೊಳ್ಳೋಣ ..

ಒಮ್ಮೆ ಸೀತಾಮಾತೆ (Sita Mata) ತನ್ನ ಹಣೆಗೆ ಕುಂಕುಮವನ್ನು ಹಚ್ಚುತ್ತಿದ್ದಳು. ಈ ಸಂದರ್ಭದಲ್ಲಿ ಹನುಮಂತನು ಅಲ್ಲಿಗೆ ತಲುಪಿ, ನೀವು ಹಣೆಗೆ ಕುಂಕುಮವನ್ನು ಏಕೆ ಹಚ್ಚುತ್ತಿದ್ದೀರಿ ಎಂದು ಸೀತಾ ಮಾತೆಯನ್ನು ಕೇಳಿದರು. ಆಗ ತಾಯಿ ಸೀತೆ ಹನುಮಂತನ ಬಳಿ ತನ್ನ ಪತಿ ಶ್ರೀ ರಾಮನ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ತಾನು ಕುಂಕುಮವನ್ನು ಹಚ್ಚುತ್ತಿರೋದಾಗಿ ಹೇಳಿದಳು. 
 

ಕುಂಕುಮದ ವಿಶೇಷ ಮಹತ್ವವನ್ನು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಪುರಾಣಗಳ ಪ್ರಕಾರ, ವಿವಾಹಿತ ಮಹಿಳೆ ಹಣೆಯಲ್ಲಿ ಕುಂಕುಮ ಹಚ್ಚೋದರಿಂದ ಗಂಡನ ಆಯಸ್ಸು ದೀರ್ಘವಾಗಿರುತ್ತೆ, ಆರೋಗ್ಯ ಚೆನ್ನಾಗಿರುತ್ತೆ ಎನ್ನುವ ನಂಬಿಕೆ ಇದೆ. ಇದು ಮಹಿಳೆಯರ ಶೃಂಗಾರಗಳಲ್ಲಿ ಕೂಡ ಒಂದಾಗಿದೆ.
 

ಸೀತಾಮಾತೆಯ ಈ ಮಾತನ್ನು ಕೇಳಿದ ಹನುಮಂತ, ಕುಂಕುಮವನ್ನು ಹಚ್ಚೊದರಿಂದ ರಾಮನು ಸಂತೋಷಪಡುತ್ತಾನೆ ಎಂದು ಯೋಚಿಸಲು ಪ್ರಾರಂಭಿಸಿದರು, ಆದ್ದರಿಂದ ಭಗವಾನ್ ಶ್ರೀ ರಾಮನನ್ನು (Sri Ram) ಮೆಚ್ಚಿಸಲು ನಾನು ಮೈ ಪೂರ್ತಿ ಕುಂಕುಮವನ್ನು ಏಕೆ ಹಚ್ಚಬಾರದು ಎಂದು ಯೋಚಿಸಿ ಹನುಮಾನ್ ತಕ್ಷಣ ಸಾಕಷ್ಟು ಕುಂಕುಮವನ್ನು ತೆಗೆದುಕೊಂಡು ಇಡೀ ದೇಹಕ್ಕೆ ಹಚ್ಚಿದರು. 
 

ಭಗವಾನ್ ಶ್ರೀ ರಾಮ ಇದನ್ನು ನೋಡಿ ಹನುಮಂತನ ಭಕ್ತಿ ಮತ್ತು ಪ್ರೀತಿ ನೋಡಿ ಸಂತೋಷಪಟ್ಟರು. ಇಂದಿನಿಂದ ನಿಮ್ಮನ್ನು ಭಜರಂಗಬಲಿ ಎಂದೂ ಕರೆಯಲಾಗುತ್ತದೆ ಎಂದು ಭಗವಾನ್ ಶ್ರೀ ರಾಮ ಹನುಮಂತನಿಗೆ ಆಶೀರ್ವಾದ ಮಾಡುತ್ತಾರೆ. ಭಜರಂಗಬಲಿಯಲ್ಲಿ ಭಜರಂಗ್ ಎಂದರೆ ಕೇಸರಿ ಮತ್ತು ಬಲಿ ಎಂದರೆ ಬಲಶಾಲಿ. ಒಟ್ಟಲ್ಲಿ ಹೇಳೊದಾದರೆ ಭಜರಂಗಬಲಿ ಎಂದರೆ ಕೇಸರಿ ಬಣ್ಣವನ್ನು ಮೈಪೂರ್ತಿ ಹಚ್ಚಿದ ಬಲಶಾಲಿ (strongest) ವ್ಯಕ್ತಿ ಹನುಮಂತ ಎನ್ನುವ ಅರ್ಥವನ್ನು ಇದು ನೀಡುತ್ತದೆ. 
 

click me!