ಭಗವಂತ ವಿಷ್ಣು: ವಿಷ್ಣು ತ್ರಿಮೂರ್ತಿಗಳಲ್ಲಿ ಒಬ್ಬನಾಗಿದ್ದು, ಸಕಲ ಲೋಕಗಳ ಪಾಲಕ ಎಂದು ಹಿಂದೂ ಧರ್ಮ ನಂಬುತ್ತದೆ. ವಿಷ್ಣುವನ್ನು ಲಕ್ಮಿನಾರಾಯಣ, ಹರಿ, ಜನಾರ್ದನ, ಮಾಧವ, ಕೇಶವ, ಅಚ್ಯುತ, ಶ್ರೀನಿವಾಸ ಎಂದೂ ಕರೆಯುತ್ತಾರೆ. ಕಮಲ, ಮೌಲ್ಸಿರಿ, ಜೂಹಿ, ಕದಂಬ, ಕೇದಿಗೆ,ಮಲ್ಲಿಗೆ, ಅಶೋಕ, ಮಾಲ್ತಿ, ವಸಂತಿ, ಚಂಪಾ (ಸಂಪಿಗೆ) , ವೈಜಯಂತಿ ಹೂವುಗಳು ವಿಷ್ಣುವಿಗೆ ಬಹಳ ಪ್ರಿಯವಾದವು. ಹೂವುಗಳನ್ನು ಹೊರತುಪಡಿಸಿ, ತುಳಸಿ ದಳವನ್ನು ಮುಖ್ಯವಾಗಿ ಅವರಿಗೆ ಅರ್ಪಿಸಲಾಗುತ್ತದೆ.