ದೀರ್ಘಕಾಲ ಔಷಧಿ ತೆಗೆದುಕೊಂಡ ನಂತರವೂ ರೋಗ ಗುಣವಾಗದಿದ್ದರೆ… ಹೀಗೆ ಮಾಡಿ!

First Published | Feb 28, 2024, 1:42 PM IST

ಒಂದು ರೋಗವು ಔಷಧಿಗಳನ್ನು ತೆಗೆದುಕೊಂಡ ನಂತರವೂ ಗುಣವಾಗದಿದ್ದರೆ, ಚಿಂತೆ ಮಾಡುವುದು ಸಹಜ. ಅಂತಹ ಪರಿಸ್ಥಿತಿಯಲ್ಲಿ, ದೇಹ ಮಾತ್ರವಲ್ಲದೆ ಮನಸ್ಸು ಸಹ ಒಡೆಯುತ್ತದೆ. ಏನೇ ಮಾಡಿದ್ರು ರೋಗ ಕಡಿಮೆ ಆಗಲ್ಲ ಅಂದ್ರೆ ನೀವು ಈ ಟಿಪ್ಸ್ ಟ್ರೈ ಮಾಡಬಹುದು. 
 

ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದುದ್ದಕ್ಕೂ ಆರೋಗ್ಯವಾಗಿರಲು (healthy) ಬಯಸುತ್ತಾನೆ ಆದರೆ ಇದು ಸಾಧ್ಯವಿಲ್ಲ. ಕೆಲವೊಮ್ಮೆ ತನ್ನ ಸ್ವಂತ ನಿರ್ಲಕ್ಷ್ಯದಿಂದಾಗಿ ಮತ್ತು ಕೆಲವೊಮ್ಮೆ ಗ್ರಹಗಳ ಸ್ಥಾನದಿಂದಾಗಿ, ಮನುಷ್ಯ ಜೀವನದಲ್ಲಿ ಒಂದಲ್ಲ ಒಂದು ಸಮಯದಲ್ಲಿ ಕೆಲವು ಕಾಯಿಲೆಗಳಿಂದ ಬಳಲುತ್ತಲೇ ಇರುತ್ತಾರೆ. 
 

ಕೆಲವೊಮ್ಮೆ ಸಣ್ಣ ಪುಟ್ಟ ರೋಗ ಬಂದರೂ ಪರವಾಗಿಲ್ಲ ಔಷಧಿಗಳನ್ನು ತೆಗೆದುಕೊಳ್ಳುವ ಮೂಲಕ ಗುಣವಾಗುತ್ತದೆ. ಆದರೆ ಅದೆಷ್ಟೇ ಔಷಧೋಪಚಾರ-ಚಿಕಿತ್ಸೆ (medicine and treatment) ಮಾಡಿದ ನಂತರವೂ ನಿಮಗೆ ಪರಿಹಾರ ಸಿಗದಿದ್ದರೆ ಆವಾಗ ಏನು ಮಾಡೋದು? ರೋಗ ಕಡಿಮೆ ಆಗಿಲ್ಲ ಅಂದ್ರೆ ಟೆನ್ಶನ್ ಹೆಚ್ಚುತ್ತೆ ಅಲ್ವಾ? 
 

Tap to resize

ಒಂದು ರೋಗವು ದೀರ್ಘಕಾಲದವರೆಗೆ (long term health issues)ಇದ್ದರೆ ಮತ್ತು ಔಷಧಿಗಳನ್ನು ತೆಗೆದುಕೊಂಡ ನಂತರವೂ ಗುಣವಾಗದಿದ್ದರೆ, ಚಿಂತೆ ಉಂಟಾಗುವುದು ಸಹಜ. ಅಂತಹ ಪರಿಸ್ಥಿತಿಯಲ್ಲಿ, ದೇಹ ಮಾತ್ರವಲ್ಲದೆ ಮನಸ್ಸು ಸಹ ಒಡೆಯುತ್ತದೆ. ಯಾವುದೇ ಕ್ರಮಗಳಿಂದ ರೋಗವನ್ನು ಗುಣಪಡಿಸಲಾಗದಿದ್ದಾಗ, ಏನು ಮಾಡಬೇಕೆಂದು ತೋಚದೇ ಇದ್ದಾಗ ನೀವು ಈ ಕೆಳಗಿನ ಟಿಪ್ಸ್ ಮೂಲಕ ಆರೋಗ್ಯ ಸುಧಾರಿಸಬಹುದು.
 

ಈ ಪರಿಹಾರಗಳನ್ನು ಪ್ರಯತ್ನಿಸಿ
ಯಾವುದೇ ರೀತಿಯ ಕಾಯಿಲೆಯ ಸಂದರ್ಭದಲ್ಲಿ, ಚಿಕಿತ್ಸೆಯೂ ನಡೆಯುತ್ತಿರುವಾಗ, ತಿಂಗಳ ಶುಕ್ಲ ಪಕ್ಷದ ಸೋಮವಾರದಂದು (Monday), ಶಿವಲಿಂಗದ ಎದುರು ಔಷಧಿಗಳನ್ನು ಇರಿಸಿ ಮತ್ತು ರುದ್ರಾಕ್ಷಿಯ ಜಪಮಾಲೆಯೊಂದಿಗೆ ಮಹಾಮೃತ್ಯುಂಜಯ ಮಂತ್ರ ಪಠಿಸಿ. ನಂತರ ಔಷಧಿಗಳನ್ನು ತೆಗೆದುಕೊಳ್ಳಿ, ಹೀಗೆ ಮಾಡೋದರಿಂದ ನೀವು ತ್ವರಿತವಾಗಿ ಆರೋಗ್ಯ ಪ್ರಯೋಜನಗಳನ್ನು ಪಡೆಯುವಿರಿ. 

ನಿಮ್ಮ ತೂಕಕ್ಕೆ ಸಮನಾದ ಏಳು ಧಾನ್ಯಗಳನ್ನು ಮಾರುಕಟ್ಟೆಯಿಂದ ತಂದು ರುಬ್ಬಿ ಅದರ ಮೇಲೆ ಬೆಲ್ಲವನ್ನು ಇರಿಸಿ. ಈಗ ರೋಗಿ ಯಾವುದಾದರೂ ದನದ ಕೊಟ್ಟಿಗೆಗೆ ಹೋಗಿ ಸ್ವತಃ ಹಸುಗಳಿಗೆ ಆಹಾರವನ್ನು (food for cow) ನೀಡಬೇಕು. ಆರೋಗ್ಯಕ್ಕಾಗಿ ಪ್ರಾರ್ಥಿಸಬೇಕು. ಹೀಗೆ ಮಾಡಿದ್ರೆ ರೋಗಿಯು ಚೇತರಿಸಿಕೊಳ್ಳಲು ಪ್ರಾರಂಭಿಸುತ್ತಾನೆ, ಆದರೆ ರೋಗವು ತುಂಬಾ ತೀವ್ರವಾಗಿದ್ದರೆ, ಪ್ರತಿ ತಿಂಗಳು ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ, ಕ್ರಮೇಣ ಪ್ರಯೋಜನ ಸಿಗುತ್ತೆ
 

ಮುತ್ತಿನ ಶಂಖದಲ್ಲಿ (pearl conch) ನೀರನ್ನು ತುಂಬಿಸಿ ಮತ್ತು ಅದನ್ನು ನಿಮ್ಮ ಪೂಜಾ ಮನೆಯಲ್ಲಿ ಸುರಕ್ಷಿತವಾಗಿರಿಸಿ ಮತ್ತು ನಂತರ ಈ ಮುತ್ತಿನ ಶಂಖದಿಂದ ತುಂಬಿದ ನೀರಿನಿಂದ ಔಷಧಿಗಳನ್ನು ತೆಗೆದುಕೊಳ್ಳಿ, ಬೇಗ ರೋಗದಿಂದ ಪರಿಹಾರ ಸಿಗುತ್ತೆ ಮತ್ತು ಈ ಪ್ರಕ್ರಿಯೆಯನ್ನು ಪುನರಾವರ್ತಿಸುವ ಮೂಲಕ, ಔಷಧಿಗಳು ವೇಗವಾಗಿ ಪ್ರಯೋಜನಗಳನ್ನು ನೀಡಲು ಪ್ರಾರಂಭಿಸುತ್ತವೆ. 
 

Latest Videos

click me!