ಮದುವೆ ದಿನಾಂಕದ ಮೂಲಕ ನಿಮ್ಮ ವೈವಾಹಿಕ ಜೀವನ ಹೇಗಿರಲಿದೆ ತಿಳಿಯಿರಿ
ಸಂಖ್ಯಾಶಾಸ್ತ್ರವು ಸಂಖ್ಯೆಗಳ ಮಹತ್ವವನ್ನು ವಿವರಿಸಿದೆ ಮತ್ತು ಇದರ ಪ್ರಕಾರ, ನಿಮ್ಮ ಮದುವೆಯ ದಿನಾಂಕದಿಂದ ನಿಮ್ಮ ಜೀವನ ಹೇಗಿರುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳಬಹುದು.
ಸಂಖ್ಯಾಶಾಸ್ತ್ರವು ಸಂಖ್ಯೆಗಳ ಮಹತ್ವವನ್ನು ವಿವರಿಸಿದೆ ಮತ್ತು ಇದರ ಪ್ರಕಾರ, ನಿಮ್ಮ ಮದುವೆಯ ದಿನಾಂಕದಿಂದ ನಿಮ್ಮ ಜೀವನ ಹೇಗಿರುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳಬಹುದು.
ಮದುವೆಯ ನಂತರ (after marriage) ನಿಮ್ಮ ಜೀವನ ಹೇಗಿರುತ್ತೆ? ಸಂಗಾತಿಯೊಂದಿಗೆ ಹೊಂದಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದಕ್ಕೆ ಸಂಖ್ಯಾಶಾಸ್ತ್ರದಲ್ಲಿ ಉತ್ತರ ಸಿಗುತ್ತದೆ. ಮದುವೆಯ ದಿನಾಂಕದಿಂದ ನಿಮ್ಮ ಭವಿಷ್ಯ ಹೇಗಿರಲಿದೆ ಅನ್ನೋದನ್ನು ತಿಳಿಯಿರಿ.
1, 10, 19 ಅಥವಾ 28 ರಂದು ಮದುವೆಯಾದವರ ಮೂಲ ಸಂಖ್ಯೆ 1 ಆಗಿರುತ್ತದೆ. ಈ ಜನರ ನಡುವೆ ಕೆಲವು ವಾದಗಳು ನಡೆಯುತ್ತಿರುತ್ತವೆ, ಆದರೆ ಇವರ ಸಂಬಂಧವು ಬಲವಾಗಿರುತ್ತದೆ.
2, 11, 20 ಮತ್ತು 29 ರಂದು ಮದುವೆಯಾದವರ ಮೂಲ ಸಂಖ್ಯೆ 2 ಆಗಿರುತ್ತದೆ. ಈ ಸಂಖ್ಯೆಯ ಜನರು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಾರೆ. ಅನ್ಯೋನ್ಯವಾಗಿ ಜೀವನ ಸಾಗಿಸುತ್ತಾರೆ.
ನಿಮ್ಮ ಮದುವೆ 3, 12, 21 ಅಥವಾ 30 ರಂದು ನಡೆದಿದ್ದರೆ ನಿಮ್ಮ ಮೂಲ ಸಂಖ್ಯೆ 3 ಆಗಿರುತ್ತದೆ. ಸಂಖ್ಯಾಶಾಸ್ತ್ರದ (numerology) ಪ್ರಕಾರ, ಈ ಜನರ ವೈವಾಹಿಕ ಜೀವನವು ತುಂಬಾ ಸಂತೋಷಕರವಾಗಿರುತ್ತದೆ.
4, 13, 22 ಅಥವಾ 31 ರಂದು ಮದುವೆಯಾದ ಜನರ ಮೂಲ ಸಂಖ್ಯೆ 4 ಆಗಿರುತ್ತದೆ. ಈ ವಿವಾಹಿತ ದಂಪತಿಗಳು ಪರಸ್ಪರ ಒಬ್ಬರ ಮಾತನ್ನು ಇನ್ನೊಬ್ಬರು ಕೇಳುವ ಮೂಲಕ ಸಂತೋಷವಾಗಿ ಜೀವನ ಮಾಡ್ತಾರೆ.
ಯಾವುದೇ ತಿಂಗಳ 5, 14 ಅಥವಾ 23 ರಂದು ಮದುವೆಯಾದವರ ಮೂಲ ಸಂಖ್ಯೆ 5. ಈ ಜನರು ತಮ್ಮ ಸಂಗಾತಿಗಳೊಂದಿಗೆ ಕೆಲವು ಭಿನ್ನಾಭಿಪ್ರಾಯಗಳನ್ನು ಹೊಂದಿರುತ್ತಲೇ ಇರುತ್ತಾರೆ.
ನಿಮ್ಮ ಜನ್ಮ ದಿನಾಂಕ 6, 15 ಅಥವಾ 24 ಆಗಿದ್ದರೆ ನಿಮ್ಮ ಮೂಲ ಸಂಖ್ಯೆ 6 ಆಗಿರುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಈ ಜನರು ಉತ್ತಮ ದಾಂಪತ್ಯ ಜೀವನವನ್ನು ಹೊಂದಿರುತ್ತಾರೆ.
ಯಾವುದೇ ತಿಂಗಳ 7, 16 ಅಥವಾ 25 ರಂದು ವಿವಾಹವಾದ ಜನರ ಮೂಲ ಸಂಖ್ಯೆ 7. ಈ ಜನರ ವೈವಾಹಿಕ ಜೀವನವು ಯಶಸ್ವಿಯಾಗಿರುತ್ತದೆ ಮತ್ತು ಸಂತೋಷವಾಗಿರುತ್ತದೆ.
8, 17 ಅಥವಾ 26 ರಂದು ಮದುವೆಯಾದವರ ಮೂಲ ಸಂಖ್ಯೆ 8. ಈ ಜನರು ತಮ್ಮ ತಮ್ಮ ಸಂಗಾತಿಗೆ ಎಲ್ಲಾ ವಿಷಯದಲ್ಲೂ ಬೆಂಬಲವಾಗಿ, ಆಧಾರಸ್ಥಂಭವಾಗಿ ನಿಲ್ಲುತ್ತಾರೆ.
9, 18 ಅಥವಾ 27 ರಂದು ಮದುವೆಯಾದವರ ಮೂಲ ಸಂಖ್ಯೆ 9. ಸಂಖ್ಯಾಶಾಸ್ತ್ರದ ಪ್ರಕಾರ, ಅವರ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗಿರುತ್ತೆ, ಹಾಗೂ ಜೀವನದಲ್ಲಿ ಕಹಿ ಇರುತ್ತದೆ.