ನೀವು ಹುಟ್ಟಿದ ಸಮಯ ಬಿಚ್ಚಿಡುತ್ತೆ ನಿಮ್ಮ ರಹಸ್ಯ, ಯಾವಾಗ ಹುಟ್ಟಿದರೆ ಹೇಗಿರ್ತಾರೆ?

First Published | Jun 11, 2024, 1:32 PM IST

ನಮ್ಮ ರಾಶಿ, ನಕ್ಷತ್ರ, ಹೇಗೆ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆಯೋ ಅದೇ ರೀತಿ ನಾವು ಹುಟ್ಟಿದ ಸಮಯ ಕೂಡ ನಮ್ಮ ಜೀವನದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಯಾಕಂದ್ರೆ ಹುಟ್ಟಿದ ಸಮಯದಿಂದಲೇ ಅಲ್ವಾ? ನಮ್ಮ ಬಗ್ಗೆ ತಿಳಿಯೋದಕ್ಕೆ ಸಾಧ್ಯ. 
 

ನೀವು ಜೋತಿಷ್ಯವನ್ನು (Astrology) ನಂಬುವವರೇ? ರಾಶಿ, ಭವಿಷ್ಯವನ್ನೆಲ್ಲಾ ನಂಬ್ತೀರಾ? ಹಾಗಿದ್ರೆ ನೀವಿದನ್ನು ಓದ್ಲೇ ಬೇಕು. ಯಾಕೆ ಅಂದ್ರೆ ಇಲ್ಲಿ ನಾವು ನೀವು ಹುಟ್ಟಿದ ಸಮಯದಿಂದ ನಿಮ್ಮ ಗುಣ, ಸ್ವಭಾವ ಹೇಗಿರುತ್ತೆ ಅನ್ನೋದನ್ನು ತಿಳಿಸುತ್ತೇವೆ. ನಿಮಗೂ ಈ ಬಗ್ಗೆ ತಿಳಿಯೋ ಕುತೂಹಲ ಇದ್ರೆ, ಖಂಡಿತವಾಗಿಯೂ ಪೂರ್ತಿಯಾಗಿ ಓದಿ. 
 

ಮಧ್ಯರಾತ್ರಿ 12.00 ರಿಂದ  2.00 (ಮುಂಜಾನೆ)
ಬುದ್ಧಿವಂತರು, ಫ್ಯಾಮಿಲಿಗೆ ಹತ್ತಿರ ಆಗಿರೋರು, ಸುಲಭವಾಗಿ ಪ್ರೇರಣೆಗೊಳ್ಳುತ್ತಾರೆ, ಜನಪ್ರಿಯತೆ ಪಡೆಯುವಂತವರು, ತನ್ನ ಶ್ರಮದಿಂದಲೇ ಯಶಸ್ಸು ಪಡೆಯುವವರು. 

ಮುಂಜಾನೆ 2.00 ರಿಂದ 4.00 (ಮುಂಜಾನೆ)
ಮಧುರ ಮಾತಿನವರು, ಬೇಗನೆ ಶ್ರೀಮಂತಿಕೆ ಪಡೆಯುತ್ತಾರೆ, ಸಾಹಸಪ್ರಿಯರು, ಪ್ರಕೃತಿಯಲ್ಲಿ ಒಂದಾಗಿರುವವರು. 

Latest Videos


ಮುಂಜಾನೆ 4.00 ರಿಂದ 6.00 (ಮುಂಜಾನೆ)
ಅತ್ಯುತ್ತಮ ವ್ಯಕ್ತಿತ್ವ, ನಾಯಕ, ಕೆಲವೊಮ್ಮೆ ಹಠಮಾರಿ, ಚಾಲೆಂಜ್ ಸ್ವೀಕರಿಸೋದನ್ನು ಇಷ್ಟಪಡುವವರು, ನಂಬಿಕಸ್ಥರು. 

ಬೆಳಗ್ಗೆ 6.00 ರಿಂದ 8.00 (ಬೆಳಗ್ಗೆ)
ರಹಸ್ಯಮಯ ವ್ಯಕ್ತಿತ್ವ, ಪ್ರಬಲ ವ್ಯಕ್ತಿ, ಉಸ್ತುವಾರಿ ವಹಿಸೋದು ಇಷ್ಟ, ಮನೋಧರ್ಮ ಪಾಲಿಸುವವರು

ಬೆಳಗ್ಗೆ 8.00 ರಿಂದ 10.00 (ಬೆಳಗ್ಗೆ)
ಫಿಲಾಸಫರ್, ಶಾಂತಿಯುತ ವ್ಯಕ್ತಿ, ಎಂಪಥಿಕ್, ಸ್ನೇಹ ಸ್ವಭಾವ, ಜನರನ್ನು ಬೇಗನೆ ಹೀಲ್ ಮಾಡ್ತಾರೆ, ಟ್ರಾವೆಲಿಂಗ್ ಮಾಡೋವಾಗ ಖುಷಿ ಪಡ್ತಾರೆ. 

ಬೆಳಗ್ಗೆ 10.00 ರಿಂದ 12.00 (ಮಧ್ಯಾಹ್ನ)
ಆಶಾವಾದಿ, ಶಿಸ್ತುಬದ್ಧ, ಸೂಕ್ಷ್ಮ ಸ್ವಭಾವದ, ನಾಯಕ, ಆರ್ಥಿಕವಾಗಿ ಸಬಲರಾಗಿರ್ತಾರೆ. 

ಮಧ್ಯಾಹ್ನ 12.00 ರಿಂದ 2.00 (ಮಧ್ಯಾಹ್ನ)
ಎನರ್ಜಿಟಿಕ್, ಮಹಾತ್ವಕಾಂಕ್ಷಿ, ಸಮೃದ್ಧಿ, ಪ್ರಯಾಣವನ್ನು ಪ್ರೀತಿಸುವವರು, ಶಿಕ್ಷಕ, ವಯಸ್ಸಾದಂತೆ ಅತ್ಯುತ್ತಮರಾಗುವವರು. 

ಮಧ್ಯಾಹ್ನ 02.00 ರಿಂದ 4.00 (ಸಂಜೆ)
ಕುತೂಹಲಕಾರಿ, ಸ್ಪಾಂಟೇನಿಯಸ್, ಸಾಹಸಮಯ ವ್ಯಕ್ತಿತ್ವ, ಗುಣಮಟ್ಟವನ್ನು ಪ್ರೀತಿಸುವ ವ್ಯಕ್ತಿ, ಎಲ್ಲವನ್ನು ಗೆಲ್ಲುವವನು, ಜನರಿಂದ ಪ್ರೀತಿಸಲ್ಪಡುವ ವ್ಯಕ್ತಿ. 
 

ಸಂಜೆ 4.00 ರಿಂದ 6.00 (ಸಂಜೆ)
ಲವಿಂಗ್, ಸೆನ್ಸಿಟೀವ್, ಕೇರಿಂಗ್, ಅಂತರ್ಮುಖಿ, ಪ್ರೊಟೆಕ್ಟಿವ್, ಉತ್ತಮ ಶಿಕ್ಷಕ, ಜೀವನದಿಂದ ಕಲಿಯುವಂತವರು. 

ಸಂಜೆ 6.00 ರಿಂದ 8.00(ರಾತ್ರಿ)
ಸರಳ ಜೀವಿ, ಅನುಕಂಪ ಉಳ್ಳವರು, ಸಹಾನುಭೂತಿ, ನಿಸ್ವಾರ್ಥ ಸ್ವಭಾವ, ಅರ್ಥ ಮಾಡಿಕೊಳ್ಳುವವರು, ಉತ್ತಮ ನಾಯಕ. 

ರಾತ್ರಿ 8.00 ರಿಂದ 10.00 (ರಾತ್ರಿ)
ಆತ್ಮವಿಶ್ವಾಸ, ಸ್ವಾವಲಂಬಿ, ಪರ್ಫೆಕ್ಷನಿಸ್ಟ್, ಸೃಜನಶೀಲ, ಸಹಾಯ ಮಾಡುವ ಸ್ವಭಾವ, ಶ್ರೀಮಂತರಾಗಲು ಇಷ್ಟಪಡುವ ವ್ಯಕ್ತಿ. 

ರಾತ್ರಿ 10.00 ರಿಂದ 12.00 (ಮಧ್ಯರಾತ್ರಿ)
ಭವಿಷ್ಯದ ಬಗ್ಗೆ ಯೋಚನೆಯುಳ್ಳವರು, ಗುರಿಯುಳ್ಳವರು, ಸಂತೋಷವಾಗಿರೋರು, ಸಮೃದ್ಧಿಯನ್ನು ಬಯಸುವವರು.

click me!