ಕಾಲ ಹೆಬ್ಬೆರಳು ಹೀಗಿದ್ದರೆ ನಿಮ್ಮಷ್ಟು ಅದೃಷ್ಟವಂತರು ಮತ್ಯಾರೂ ಇಲ್ಲವೆಂದರ್ಥ!

First Published | Sep 5, 2023, 12:20 PM IST

ನಿಮ್ಮ ಭವಿಷ್ಯ ಮತ್ತು ವ್ಯಕ್ತಿತ್ವದ ಬಗ್ಗೆ ತಿಳಿಯಲು ಅನೇಕ ಮಾರ್ಗಗಳಿವೆ. ಇವುಗಳಲ್ಲಿ ಒಂದು ಸಾಮುದ್ರಿಕ ಶಾಸ್ತ್ರ, ಇದರಲ್ಲಿ ವ್ಯಕ್ತಿಯ ನಡವಳಿಕೆ ಮತ್ತು ಅವನ ಭವಿಷ್ಯದ ಬಗ್ಗೆ ತಿಳಿಯಲಾಗುತ್ತದೆ.
 

ನಿಮ್ಮ ಭವಿಷ್ಯ ಮತ್ತು ವ್ಯಕ್ತಿತ್ವದ ಬಗ್ಗೆ ಕಲಿಯಲು ಅನೇಕ ಮಾರ್ಗಗಳಿವೆ. ಕೆಲವರು ಜ್ಯೋತಿಷ್ಯದ ಮೂಲಕ ತಿಳಿದರೆ, ಕೆಲವರು ತಮ್ಮ ಕೈ ರೇಖೆಗಳಿಂದ ಭವಿಷ್ಯವನ್ನು ಕಂಡು ಕೊಳ್ಳುತ್ತಾರೆ. ಅದೇ ಸಮಯದಲ್ಲಿ, ಕೆಲವರು ನಾಳಿನ ತಮ್ಮ ಜೀವನದ ಬಗ್ಗೆ ತಿಳಿಯಲು ಟ್ಯಾರೋ ಕಾರ್ಡ್ (Tarro card) ಗಳನ್ನು ಆಶ್ರಯಿಸುತ್ತಾರೆ.
 

ಈ ಎಲ್ಲಾ ವಿಧಾನಗಳಲ್ಲಿ, ದೇಹದ ರಚನೆಯನ್ನು ನೋಡುವ ಮೂಲಕ ಭವಿಷ್ಯವನ್ನು ಹೇಳುವ ಸಾಮುದ್ರಿಕ ಶಾಸ್ತ್ರವೂ (Samudrika shastra) ಇದೆ. ಅಂದರೆ, ದೇಹದ ರಚನೆಯಿಂದ, ಒಬ್ಬ ವ್ಯಕ್ತಿಯು ತನ್ನ ಭವಿಷ್ಯ ಮತ್ತು ನಡವಳಿಕೆ ಬಗ್ಗೆ ತಿಳಿದುಕೊಳ್ಳಬಹುದು. ಇಲ್ಲಿ, ನಿಮ್ಮ ಕಾಲಿನ ಹೆಬ್ಬೆರಳು ಉಳಿದ ಎಲ್ಲಾ ಬೆರಳುಗಳಿಗಿಂತ ಚಿಕ್ಕದಾಗಿರುವುದರ ಅರ್ಥವೇನೆಂದು ತಿಳಿಯೋಣ. 
 

Latest Videos


ಸಣ್ಣ ಹೆಬ್ಬೆರಳುಗಳನ್ನು ಹೊಂದಿರುವ ಜನರ ಸ್ವಭಾವ ಏನು ಅನ್ನೋದನ್ನು ತಿಳಿಯೋಣ. 

ಉಳಿದ ಬೆರಳುಗಳಿಗಿಂತ ಹೆಬ್ಬೆರಳು ಚಿಕ್ಕದಾಗಿರುವ ಜನರನ್ನು ತುಂಬಾ ಅದೃಷ್ಟಶಾಲಿ (lucky) ಎಂದು ಪರಿಗಣಿಸಲಾಗುತ್ತದೆ. ಇತರ ಬೆರಳುಗಳಿಗಿಂತ ಚಿಕ್ಕದಾದ ಹೆಬ್ಬೆರಳನ್ನು ಹೊಂದಿರುವ ಜನರು ತಮ್ಮ ಜೀವನದಲ್ಲಿ ಸಂತೋಷವನ್ನು ಹೊಂದಿರುವುದಿಲ್ಲ. 

ಬೆರಳುಗಳಿಗಿಂತ ಚಿಕ್ಕದಾದ ಹೆಬ್ಬೆರಳನ್ನು ಹೊಂದಿರುವ ಜನರು ತಮ್ಮ ಹೆಂಡತಿಯಿಂದ ಸಾಕಷ್ಟು ಪ್ರೀತಿಯನ್ನು ಪಡೆಯುತ್ತಾರೆ. ಅಷ್ಟೇ ಅಲ್ಲ ಇವರ ಹೆಂಡತಿ ತುಂಬಾನೆ ಬುದ್ಧಿವಂತರಾಗಿರ್ತಾರೆ. ಅಲ್ಲದೇ ಹೆಬ್ಬೆರಳು (toe)ಚಿಕ್ಕದಾಗಿರುವ ಜನರು ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಪಡೆಯುತ್ತಾರೆ.

ಬೆರಳುಗಳಿಗಿಂತ ಹೆಬ್ಬೆರಳು ಚಿಕ್ಕದಾಗಿರುವವರ ವೈವಾಹಿಕ ಜೀವನವು (married life) ಸಿಹಿಯಾಗಿ ಉಳಿಯುತ್ತದೆ. ಅಷ್ಟೇ ಅಲ್ಲ ಈ ಜನರು ಅದೃಷ್ಟಶಾಲಿಗಳು ಎನ್ನಬಹುದು. ಯಾಕಂದ್ರೆ ಇವರು ಕೆಲಸದ ಆರಂಭದಲ್ಲಿ ಬಡ್ತಿ ಪಡೆಯುತ್ತಾರೆ.
 

 ಉಳಿದ ಬೆರಳುಗಳಿಗಿಂತ ಚಿಕ್ಕದಾದ ಹೆಬ್ಬೆರಳು ಹೊಂದಿರುವ ಜನರು ತಾಯಿ ಲಕ್ಷ್ಮಿಯಿಂದ  ಆಶೀರ್ವದಿಸಲ್ಪಡುತ್ತಾರೆ. ಅಲ್ಲದೇ ಈ ಜನರ ಮನೆ ಯಾವಾಗಲೂ ಸಂಪತ್ತಿನಿಂದ ತುಂಬಿರುತ್ತದೆ. ಜೊತೆಗೆ ಎಲ್ಲಾ ಸಂದರ್ಭಗಳು ಇವರಿಗೆ ಅನುಕೂಲವಾಗಿರುತ್ತೆ.  ಅಷ್ಟೇ ಅಲ್ಲದೇ ಇಂತಹ ಜನರು ಎಲ್ಲರೊಂದಿಗೆ ಬೆರೆತು ಬಾಳುತ್ತಾರೆ. 

click me!