ಕನಸಿನಲ್ಲಿ ಭವ್ಯ ಕಟ್ಟಡವನ್ನು ನೋಡುವುದು
ನಿಮ್ಮ ಕನಸಿನಲ್ಲಿ ಹಚ್ಚ ಹಸಿರಾದ ಗಾರ್ಡನ್ ಹೊಂದಿರುವ ಭವ್ಯವಾದ ಕಟ್ಟಡ ಅಥವಾ ಮನೆಯನ್ನು ನೀವು ನೋಡುತ್ತಿದ್ದರೆ, ಅದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಕನಸು ಎಂದರೆ ನಿಮ್ಮ ಜೀವನದಲ್ಲಿ ಸಮೃದ್ಧಿ ಬರಲಿದೆ. ಅಲ್ಲದೆ, ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ, ಹಾಗೂ ಅಲ್ಲಿ ನೀವು ಉತ್ತಮ ಪ್ರಯೋಜನ ಪಡೆಯುತ್ತೀರಿ. ನಿಮ್ಮ ಕನಸಿನಲ್ಲಿ ನೀವು ಅನೇಕ ಮನೆಗಳನ್ನು ಒಂದೇ ಸಾಲಿನಲ್ಲಿ ನೋಡಿದರೆ, ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಇದರರ್ಥ ಭವಿಷ್ಯದಲ್ಲಿ ನೀವು ನಿಮ್ಮ ಕೆಲಸದಿಂದ ತೃಪ್ತರಾಗುತ್ತೀರಿ.