ಮೃತ ಪ್ರೀತಿ ಪಾತ್ರರ ನೆನಪಿಗಾಗಿ ಅವರ ಬಟ್ಟೆ ಧರಿಸುವ ತಪ್ಪನ್ನು ಎಂದಿಗೂ ಮಾಡಬೇಡಿ

First Published Sep 7, 2021, 5:54 PM IST

ಹುಟ್ಟಿದ ಮೇಲೆ ಸಾವು ಖಚಿತ. ಎಂದಾದರೂ ನಮಗೆ ಸಾವು ಬಂದೇ ಬರುತ್ತದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೂ  ಕುಟುಂಬದವರಾಗಲಿ, ಸ್ನೇಹಿತರಾಗಲಿ ಅಥವಾ  ಪ್ರೀತಿ ಪಾತ್ರರು ಯಾರೇ ಆದರೂ  ಅಗಲಿದಾಗ, ಮೃತ್ಯು ಅವರನ್ನು ನಮ್ಮಿಂದ ಬೇರ್ಪಡಿಸಿದಾಗ ಆ ಆಘಾತವನ್ನು ಸುಲಭವಾಗಿ ಆರಗಿಸಿಕೊಳ್ಳಲು ಸಾಧ್ಯವಿಲ್ಲ. 

ಕೆಲವರು ತಮ್ಮ ಮೃತ ಪ್ರೀತಿ ಪಾತ್ರರ ನೆನಪಿನಲ್ಲಿ ಅವರ ಬಟ್ಟೆಗಳನ್ನು ಧರಿಸುತ್ತಾರೆ. ಆದರೆ ಎಂದಿಗೂ ಕೂಡ ಇದನ್ನು ಮಾಡಬಾರದು. ಸತ್ತ ವ್ಯಕ್ತಿಯ ಬಟ್ಟೆಗಳನ್ನು ಧರಿಸುವುದನ್ನು ಸನಾತನ ಧರ್ಮದಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಮತ್ತು ಇದರ ಹಿಂದಿನ ಕಾರಣಗಳನ್ನು ಸಹ ನೀಡಲಾಗಿದೆ. 

ಮೃತ ಪ್ರೀತಿ ಪಾತ್ರರ ಬಟ್ಟೆಗಳನ್ನೇಕೆ ಧರಿಸಬಾರದು?
ಸತ್ತವರ ಬಟ್ಟೆಗಳನ್ನು ಧರಿಸದಿರಲು ಒಂದು ದೊಡ್ಡ ಮತ್ತು ಪ್ರಮುಖ ಕಾರಣವೆಂದರೆ ಹಾಗೆ ಮಾಡುವುದರಿಂದ ಅದು ದುರ್ಬಲರನ್ನಾಗಿ ಮಾಡುತ್ತದೆ. ಮೃತ ಪ್ರೀತಿ ಪಾತ್ರರ ಬಟ್ಟೆಗಳನ್ನು ಧರಿಸುವುದು ಅವರ ನೆನಪು ಹೆಚ್ಚು ಹೆಚ್ಚು ಕಾಡುವಂತೆ ಮಾಡುತ್ತದೆ . 

ಮೃತರ ಬಟ್ಟೆ ಧರಿಸಿ ಅವರನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವುದರಿಂದ ಮಾನಸಿಕವಾಗಿ ದುರ್ಬಲಗೊಳ್ಳುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ, ಮೃತ ಕುಟುಂಬ ಸದಸ್ಯರನ್ನು ಮರೆತು ವ್ಯಕ್ತಿ ಮುಂದೆ ಸಾಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಮೃತರ ಬಟ್ಟೆಗಳನ್ನು ನಿರ್ಗತಿಕರಿಗೆ ದಾನ ಮಾಡುವುದು ಉತ್ತಮ.

ಸತ್ತ ಜನರ ಆತ್ಮಗಳು ಸಹ ಪ್ರೀತಿಪಾತ್ರರ ಬಾಂಧವ್ಯವನ್ನು ಬಿಡಲು ಸಾಧ್ಯವಾಗುವುದಿಲ್ಲ, ಅಂತಹ ಪರಿಸ್ಥಿತಿಯಲ್ಲಿ, ಸತ್ತವರ ವಸ್ತುಗಳನ್ನು ಇಟ್ಟುಕೊಳ್ಳುವುದು ಅವರನ್ನು ತಮ್ಮೊಂದಿಗೆ ಕಟ್ಟಿ ಹಾಕಿದಂತೆ ಎಂದು ಹೇಳಲಾಗುತ್ತದೆ. ಆದರೆ ಆತ್ಮಗಳು ಅಲೆದಾಡಬಾರದು, ಆದಷ್ಟು ಬೇಗ ಹೊಸ ದೇಹವನ್ನು ಪ್ರವೇಶಿಸಬೇಕು ಎಂದು ಹೇಳಲಾಗುತ್ತದೆ.

ಕುಟುಂಬದ ಸದಸ್ಯನ ಮರಣದ ನಂತರ, ಆತನ ಆತ್ಮಕ್ಕೆ ಶಾಂತಿಗಾಗಿ ದಾನವನ್ನು ಮಾಡಲಾಗುತ್ತದೆ. ಈ ಸಮಯದಲ್ಲಿ, ಸತ್ತವರ ಬಟ್ಟೆ ಮತ್ತು ವಸ್ತುಗಳನ್ನು ಸಹ ದಾನ ಮಾಡಿದರೆ ಉತ್ತಮ, ಇದರಿಂದ ಅಗತ್ಯವಿರುವವರಿಗೆ ಆ ವಸ್ತುಗಳನ್ನು ಬಳಸಲೂ ಕೂಡ ಅವಕಾಶ ಸಿಗಲಿದೆ. ನಿಮಗೂ ಮಾನಸಿಕ ನೆಮ್ಮದಿ ಸಿಗುತ್ತದೆ. 

ಕುಟುಂಬದ ಸದಸ್ಯರ ಮರಣದ ನಂತರ, ಆತನ ಆತ್ಮಕ್ಕೆ ಶಾಂತಿಗಾಗಿ ದಾನವನ್ನು ಮಾಡಲಾಗುತ್ತದೆ. ಈ ಸಮಯದಲ್ಲಿ, ಸತ್ತವರ ಬಟ್ಟೆ ಮತ್ತು ವಸ್ತುಗಳನ್ನು ಸಹ ದಾನ ಮಾಡಿದರೆ ಉತ್ತಮ, ಇದರಿಂದ ಅಗತ್ಯವಿರುವವರಿಗೆ ಆ ವಸ್ತುಗಳನ್ನು ಬಳಸಲೂ ಕೂಡ ಅವಕಾಶ ಸಿಗಲಿದೆ. ನಿಮಗೂ ಮಾನಸಿಕ ನೆಮ್ಮದಿ ಸಿಗುತ್ತದೆ. 
 

ವೈಜ್ಞಾನಿಕ ಕಾರಣ 
ಯಾವುದೇ ಸಾಂಕ್ರಾಮಿಕ ರೋಗದಿಂದಾಗಿ ವ್ಯಕ್ತಿಯು ಸತ್ತರೆ, ಕೆಲವು ವೈರಸ್‌ಗಳು ಬಟ್ಟೆಯಲ್ಲಿ ಸೇರಿಕೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಸಾವನ್ನಪ್ಪಿದ ಬಟ್ಟೆಗಳನ್ನು ಧರಿಸುವ ಮೂಲಕ ವೈರಸ್ ಅಥವಾ ಬ್ಯಾಕ್ಟೀರಿಯಾಗಳು ನಿಮಗೆ ಹರಡಬಹುದು. ಇದರಿಂದ ನಿಮಗೂ ರೋಗಗಳು ಕಾಡಬಹುದು ಎಂದು ಹೇಳಲಾಗುತ್ತದೆ. 
 

click me!