ಇಡೀ ಉತ್ತರ ಭಾರತವನ್ನು ಆವರಿಸಿದ ಬಿಸಿಗಾಳಿ
ಜೂನ್ ತಿಂಗಳಲ್ಲಿ ಹೆಚ್ಚುತ್ತಿರುವ ಶಾಖದಿಂದಾಗಿ (Heat wave) ಎಲ್ಲರೂ ತೊಂದರೆಗೀಡಾಗಿದ್ದಾರೆ. ಇಡೀ ಉತ್ತರ ಭಾರತ ಬಿಸಿಲಿನ ತಾಪಕ್ಕೆ ತತ್ತರಿಸುತ್ತಿದೆ. ಬಿಸಿಲಿನ ಕೆನ್ನಾಲಿಗೆಯಿಂದಾಗಿ, ಜನರು ತಮ್ಮ ಮನೆಗಳಿಂದ ಹೊರಬರಲು ಹಿಂಜರಿಯುತ್ತಿದ್ದಾರೆ. ಹವಾಮಾನ ಇಲಾಖೆಯ ಪ್ರಕಾರ, ರಾಜಸ್ಥಾನ, ಪಂಜಾಬ್, ಹರಿಯಾಣ, ದೆಹಲಿ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಮೇ 29 ರವರೆಗೆ ತೀವ್ರ ಶಾಖದ ಅಲೆ ಮುಂದುವರಿಯುವ ಸಾಧ್ಯತೆಯಿದೆ. ಈ ಎಲ್ಲಾ ಆತಂಕಗಳ ನಡುವೆ, ವಿಷ್ಣು ಪುರಾಣದ ಭವಿಷ್ಯವಾಣಿಗಳು ನಿಜವಾಗುತ್ತಿರುವಂತೆ ತೋರುತ್ತದೆ.