ಸಾವಿನ ಸಮಯದಲ್ಲಿ ಶಬ್ದ ಏಕೆ ನಿಲ್ಲುತ್ತದೆ? ಗರುಡ ಪುರಾಣ ಏನು ಹೇಳುತ್ತೇ?

First Published Jan 25, 2024, 4:05 PM IST

ಜೀವನ ಮತ್ತು ಮರಣ ಪರಸ್ಪರ ಪೂರಕವಾಗಿವೆ. ಗೀತೆಯಲ್ಲಿಯೂ ಸಹ, ಶ್ರೀ ಕೃಷ್ಣನು ಹುಟ್ಟಿದ ಪ್ರತಿಯೊಂದು ಜೀವಿಯ ಕೊನೆಯು ಖಚಿತ ಎಂದು ಹೇಳಿದ್ದಾನೆ. ಸಾವು ತುಂಬಾನೆ ನೋವಿಂದ ಕೂಡಿರುತ್ತೆ ಎನ್ನಲಾಗುತ್ತೆ, ಅದಕ್ಕಾಗಿಯೇ ಜನರು ಸಾವಿಗೆ ಹೆದರುತ್ತಾರೆ, ಆದರೆ ಧಾರ್ಮಿಕ ಗ್ರಂಥಗಳಲ್ಲಿ ಸಾವನ್ನು ಸಾಮಾನ್ಯ ಪ್ರಕ್ರಿಯೆ ಎಂದು ವಿವರಿಸಲಾಗಿದೆ.

ಜನರು ಸಾವಿನ (death) ಬಗ್ಗೆ ಸಾಕಷ್ಟು ಭಯವನ್ನು ಹೊಂದಿದ್ದಾರೆ, ಅದರ ಹಿಂದಿನ ಕಾರಣವೆಂದರೆ ಸಾವಿನ ಸಮಯದಲ್ಲಿ ಉಂಟಾಗುವ ನೋವು. ಸಾವಿನ ಸಮಯದಲ್ಲಿ, ಅನೇಕ ಜನರ ಧ್ವನಿ ನಿಲ್ಲುತ್ತದೆ, ವ್ಯಕ್ತಿಯು ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸುತ್ತಾನೆ. ಗೀತೆ, ಗರುಡ ಪುರಾಣ, ಕಠೋಪನಿಷತ್ ನಂತಹ ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ಸಾವಿನ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದೆ. 

ಗೀತೆಯ ಪ್ರಕಾರ, ಸಾವು ದೇಹವನ್ನು ಬದಲಾಯಿಸುವ ಪ್ರಕ್ರಿಯೆಯಾಗಿದೆ. ಒಬ್ಬ ವ್ಯಕ್ತಿಯ ದೇಹವು ವಯಸ್ಸಾದಾಗ, ಆತ್ಮವು ಸಾವಿನ ಮೂಲಕ ತನ್ನ ದೇಹವನ್ನು ಬದಲಾಯಿಸುತ್ತದೆ. ಸಾವಿನ ಸಮಯದಲ್ಲಿ ಒಬ್ಬ ವ್ಯಕ್ತಿಗೆ ಯಾವ ರೀತಿ ಅನುಭವ ಆಗುತ್ತದೆ?, ಆ ವ್ಯಕ್ತಿಯು ಬಾಯಿಂದ ಶಬ್ಧ ಯಾಕೆ ಹೊರ ಬರೋದಿಲ್ಲ ಅನ್ನೋದನ್ನು ತಿಳಿಯೋಣ. 
 

Latest Videos


ಯಮರಾಜನ ದೂತರು ವ್ಯಕ್ತಿಯ ಜೀವವನ್ನು ತೆಗೆದುಕೊಳ್ಳುತ್ತಾರೆ: ಗರುಡ ಪುರಾಣದ (Garuda Purana) ಪ್ರಕಾರ, ಪಾಪಿ ವ್ಯಕ್ತಿಯ ಜೀವನವು ಕೆಳಗಿನ ಮಾರ್ಗದಿಂದ ಹೊರಬರುತ್ತದೆ. ವ್ಯಕ್ತಿಯ ಸಾವು ಹತ್ತಿರ ಬಂದಾಗ, ಯಮರಾಜನ ಇಬ್ಬರು ದೂತರು ಅವನ ಬಳಿಗೆ ಬರುತ್ತಾರೆ. ಯಮದೂತನು ನೋಡಲು ತುಂಬಾ ಭಯಾನಕ ಮತ್ತು ದೊಡ್ಡ ಕಣ್ಣುಗಳನ್ನು ಹೊಂದಿದ್ದಾನೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಅಂತಹ ಯಮರಾಜನ ದೂತರನ್ನು ನೋಡಿ, ಪಾಪ ಮಾಡಿದ ಜೀವಿ ಭಯಭೀತನಾಗಿ ಮಲವಿಸರ್ಜನೆ ಮಾಡಲು ಪ್ರಾರಂಭಿಸುತ್ತಾನೆ. 

ಮರಣದ ಸಮಯದಲ್ಲಿ, ಯಮರಾಜನ (Yam Raja) ದೂತರು ವ್ಯಕ್ತಿಯ ಬಳಿಗೆ ಬಂದು ಅವನ ಪ್ರಾಣವನ್ನು ತೆಗೆದುಕೊಂಡ ತಕ್ಷಣ ಆ ವ್ಯಕ್ತಿ 100 ಚೇಳುಗಳಿಂದ ಕಚ್ಚಲ್ಪಟ್ಟಷ್ಟೇ ನೋವನ್ನು ಅನುಭವಿಸುತ್ತಾನೆ. ಇದರೊಂದಿಗೆ, ವ್ಯಕ್ತಿಯ ಬಾಯಿ ಒಳಗಿನಿಂದ ಒಣಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ಬಾಯಿಂದ ಶಬ್ಧ ಹೊರಬರೋದಿಲ್ಲ. 

ಯಮರಾಜನ ದೂತರು ಯಮಲೋಕಕ್ಕೆ ಕರೆದೊಯ್ಯುತ್ತಾರೆ: ಸಾವಿನ ಸಮಯದಲ್ಲಿ, ಹೆಬ್ಬೆರಳಿನ ಗಾತ್ರದಷ್ಟು ಆತ್ಮವು ದೇಹದಿಂದ ಹೊರಬರುತ್ತದೆ. ಅದನ್ನು ಯಮರಾಜನ ದೂತರು ಹಿಡಿಯುತ್ತಾರೆ. ಯಮರಾಜನ ದೂತರು ಆ ಆತ್ಮವನ್ನು ಹಿಡಿದು ಯಮಲೋಕಕ್ಕೆ ಗೆ ಪ್ರಯಾಣ ಬೆಳೆಸುತ್ತಾರೆ. ದೂತರು ಆ ಆತ್ಮವನ್ನು ಕಟ್ಟಿ ತಮ್ಮೊಂದಿಗೆ ಕರೆದೊಯ್ಯುತ್ತಾರೆ. 

ಮರಣದ ನಂತರ (After death) ನರಕಕ್ಕೆ ಪ್ರಯಾಣಿಸುವಾಗ ವ್ಯಕ್ತಿಯು ದಣಿದಾಗ, ಯಮರಾಜನ ದೂತರು ಅವನನ್ನು ಹೆದರಿಸುತ್ತಾರೆ ಮತ್ತು ನರಕದ ದುಃಖಗಳ ಬಗ್ಗೆ ಆ ಜೀವಿಗೆ ಹೇಳುತ್ತಾರೆ. ಈ ಸಮಯದಲ್ಲಿ ವ್ಯಕ್ತಿಯು ತನ್ನ ಎಲ್ಲಾ ಪಾಪಗಳನ್ನು ನೆನಪಿಸಿಕೊಂಡು ನಡೆಯುತ್ತಾನೆ. ಅದರ ಬಗ್ಗೆ ಯೋಚಿಸುತ್ತಾ ಅವರ ಹೃದಯ ನಡುಗಲು ಪ್ರಾರಂಭಿಸುತ್ತದೆ.
 

ವ್ಯಕ್ತಿಯು ಎಲ್ಲವನ್ನೂ ನೆನಪಿಸಿಕೊಳ್ಳುತ್ತಾನೆ: ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯು ಸತ್ತಾಗ, ಆ ವ್ಯಕ್ತಿಯಲ್ಲಿ ದೈವಿಕ ದೃಷ್ಟಿ ಉಂಟಾಗುತ್ತದೆ. ಆ ಸಮಯದಲ್ಲಿ, ವ್ಯಕ್ತಿಯು ಪ್ರಪಂಚದಾದ್ಯಂತ ಏನೆಲ್ಲಾ ನಡೆಯುತ್ತದೆ ಅನ್ನೋದನ್ನು ನೋಡಲು ಪ್ರಾರಂಭಿಸುತ್ತಾನೆ ಮತ್ತು ಅವನು ತನ್ನ ಇಡೀ ಜೀವನದ ಘಟನೆಗಳನ್ನು ನೆನಪಿಸಿಕೊಳ್ಳುತ್ತಾನೆ. ಒಂದು ಕ್ಷಣದಲ್ಲಿ, ಅವನ ಇಡೀ ಜೀವನವು ವ್ಯಕ್ತಿಯ ಕಣ್ಣುಗಳ ಮುಂದೆ ಪುನರಾವರ್ತನೆಯಾಗುತ್ತದೆ. ನಂತರ ಅವನು ಹೊಸ ಜೀವನಕ್ಕೆ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತಾನೆ.

click me!