ಮುಂಜಾನೆ ಮನೆ ಮೇಲೆ ಕುಳಿತು ಕಾಗೆ ಕೂಗುತ್ತಿದ್ದರೇನರ್ಥ?

Published : May 30, 2024, 06:01 PM IST

ಮನೆಗೆ ಕಾಗೆಯ ಆಗಮನವು ಏನನ್ನು ಸೂಚಿಸುತ್ತದೆ? ಇದು ಕೆಟ್ಟ ಪರಿಣಾಮವನ್ನು ಮಾತ್ರವಲ್ಲದೆ, ಶುಭ ಶಕುನವೂ ಇರಬಹುದು? ಒಟ್ಟಲ್ಲಿ, ಕಾಗೆ ಬಂದರೆ, ಕೂಗಿದರೆ, ಅದರ ಅರ್ಥವೇನು? ಅನ್ನೋದನ್ನು ನೋಡೋಣ.   

PREV
17
ಮುಂಜಾನೆ ಮನೆ ಮೇಲೆ ಕುಳಿತು ಕಾಗೆ ಕೂಗುತ್ತಿದ್ದರೇನರ್ಥ?

ಹಿಂದೂ ಧರ್ಮದಲ್ಲಿ, ಅನೇಕ ಪ್ರಾಣಿಗಳು ಮತ್ತು ಪಕ್ಷಿಗಳು ಶುಭ ಅಥವಾ ಅಶುಭ ಚಿಹ್ನೆಗಳೊಂದಿಗೆ ಸಂಬಂಧ ಹೊಂದಿವೆ. ಇದರಲ್ಲಿ, ಕಾಗೆ ಕೂಡ ಅನೇಕ ನಂಬಿಕೆಗಳನ್ನು ಹೊಂದಿದೆ. ಅನೇಕ ಸಂದರ್ಭಗಳಲ್ಲಿ, ಕಾಗೆಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಕೆಲವು ಸಂದರ್ಭಗಳಲ್ಲಿ ಇದು ಅಶುಭವಾದದ್ದನ್ನು ಸೂಚಿಸುತ್ತದೆ.  
 

27

ಸನಾತನ ನಂಬಿಕೆಗಳ ಪ್ರಕಾರ, ಪಿತೃಪಕ್ಷದಲ್ಲಿ ಕಾಗೆಗಳಿಗೆ ಆಹಾರ ನೀಡುವುದು ಶುಭ. ಯಾಕಂದ್ರೆ ನಮ್ಮ ಪಿತೃಗಳು ಕಾಗೆಯ ರೂಪದಲ್ಲಿ ಬಂದು ಆಹಾರ ಸೇವಿಸುತ್ತವೆ ಎನ್ನುವ ನಂಬಿಕೆ ಇದೆ. ಇದು ಪಿತೃಗಳನ್ನು ಸಂತೋಷಪಡಿಸುತ್ತದೆ ಮತ್ತು ಅವರಿಗೆ ಸಂತೋಷ ಮತ್ತು ಸಮೃದ್ಧಿಯನ್ನು ಆಶೀರ್ವದಿಸುತ್ತದೆ. ಇದರೊಂದಿಗೆ, ಕಾಗೆಗೆ ಸಂಬಂಧಿಸಿದ ಇನ್ನೂ ಅನೇಕ ನಂಬಿಕೆಗಳಿವೆ.  ಅವುಗಳಲ್ಲಿ ಮನೆಗೆ ಕಾಗೆಯ ಆಗಮನ (Crow enters to the house) ಅಥವಾ ಕಾಗೆ ಮನೆಯ ಬಳಿ ಬಂದು ಕೂಗುವುದು ಏನನ್ನು ಸೂಚಿಸುತ್ತದೆ ಎಂದು ನಿಮಗೆ ತಿಳಿದಿದೆ. 

37

ಕಾಗೆ ಮನೆಗೆ ಬರುತ್ತಿದ್ದರೆ
ಕಾಗೆ ಮುಂಜಾನೆ ಬಂದು ನಿಮ್ಮ ಮನೆಯ ಛಾವಣಿಯ ಮೇಲೆ ಕುಳಿತರೆ, ಅತಿಥಿ (arrival of the guest) ನಿಮ್ಮ ಮನೆಗೆ ಬರಲಿದ್ದಾರೆ ಎಂದರ್ಥ ಎನ್ನುವ ನಂಬಿಕೆ ಇದೆ. ಇದಲ್ಲದೇ, ಬೆಳಿಗ್ಗೆ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಕಾಗೆ ಕೂಗುತ್ತಿದ್ದರೆ, ಅದು ಸಹ ಅತಿಥಿಯ ಆಗಮನವನ್ನು ಸೂಚಿಸುತ್ತದೆ. ಅಥವಾ ನೀವು ಹಳೆಯ ಸ್ನೇಹಿತನನ್ನು ಭೇಟಿಯಾಗಬಹುದು ಎನ್ನುವ ಸೂಚನೆ ನೀಡುತ್ತಂತೆ.

47

ಕಾಗೆಗಳ ಹಿಂಡು ಬಂದರೆ ಜಾಗರೂಕರಾಗಿರಿ
ನಿಮ್ಮ ಮನೆಗೆ ಕಾಗೆಗಳ ಹಿಂಡು (group of crow) ಬರುತ್ತಿರುವುದು ಕಂಡುಬಂದರೆ, ಜಾಗರೂಕರಾಗಿರಬೇಕು. ಏಕೆಂದರೆ ಇದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ. ಇದರರ್ಥ ನಿಮ್ಮ ಕುಟುಂಬದಲ್ಲಿ ಕೆಲವು ಅಹಿತಕರ ಘಟನೆಗಳು ಸಂಭವಿಸಬಹುದು. 
 

57

ದಕ್ಷಿಣ ದಿಕ್ಕಿನಲ್ಲಿ ಕಾಗೆ 
ನಿಮ್ಮ ಮನೆಯ ದಕ್ಷಿಣ ದಿಕ್ಕಿನಲ್ಲಿ ಕಾಗೆ ಕುಳಿತರೆ, ಅದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುವುದಿಲ್ಲ. ಇದು ಮನೆಯಲ್ಲಿ ಪಿತ್ರ ದೋಷವನ್ನು ಸೂಚಿಸುತ್ತದೆ.  ಒಂದು ವೇಳೆ ಹೀಗಾದರೆ, ಕೂಡಲೇ ಪಿತೃ ದೋಷವನ್ನು ಸರಿಪಡಿಸಿಕೊಳ್ಳುವುದು ಉತ್ತಮ. 

67

ಈ ನಂಬಿಕೆಯೂ ಇದೆ
ಪಿತೃಪಕ್ಷದಲ್ಲಿ (Pitru Paksha), ಕಾಗೆಗೆ ಆಹಾರವನ್ನು ನೀಡುವುದು ಶುಭವೆಂದು ಪರಿಗಣಿಸಲಾಗಿದೆ. ಅದೇ ಸಮಯದಲ್ಲಿ, ಧಾರ್ಮಿಕ ನಂಬಿಕೆಗಳ ಪ್ರಕಾರ, ನೀವು ಪ್ರಯಾಣಕ್ಕೆ ಹೋಗುವ ಮೊದಲು ಕಾಗೆಗೆ ಮೊಸರು ಮತ್ತು ಅನ್ನವನ್ನು ಅರ್ಪಿಸಿದರೆ, ಪ್ರಯಾಣ ಯಶಸ್ವಿಯಾಗುತ್ತದೆ ಎಂದು ಹೇಳುತ್ತಾರೆ. 

77

ಮನೆಯೊಳಗೆ ಬರುವ ಕಾಗೆ 
ಒಂದು ವೇಳೆ ಕಾಗೆ ಮನೆಯೊಳಗೆ ಹಾರಿ ಬಂದು ಧಾನ್ಯ ತೆಗೆದುಕೊಂಡು ಹೋಗುವುದನ್ನು ನೀವು ನೋಡಿದರೆ, ಮುಂದೆ ನಿಮ್ಮ ಜೀವನದಲ್ಲಿ ಏನಾದರೂ ಸಮಸ್ಯೆ ಉಂಟಾಗುತ್ತದೆ ಎನ್ನುವುದನ್ನು ಸೂಚಿಸುತ್ತದೆಯಂತೆ. 

Read more Photos on
click me!

Recommended Stories