ವಯಸ್ಸಾದ ಮೇಲೆ ಸುಖವಾಗಿರಬೇಕು ಅಂದ್ರೆ ಯವ್ವೌನದಲ್ಲಿ ಈ ಕೆಲ್ಸ್ ಮಾಡಿ ಅಂತಾನೆ ಚಾಣಕ್ಯ!

First Published Nov 24, 2023, 3:48 PM IST

ನೀವು ವೃದ್ಧಾಪ್ಯದಲ್ಲಿ ಶಾಂತಿ, ನೆಮ್ಮದಿಯಲ್ಲಿ ಇರಬೇಕು ಎಂದು ಬಯಸಿದ್ರೆ, ಯೌವನದಲ್ಲಿ ನೀವು ಒಂದಿಷ್ಟು ಕೆಲಸಗಳನ್ನು ಮಾಡಬೇಕು ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಅದಕ್ಕಾಗಿ ಏನು ಮಾಡಬೇಕು ಅನ್ನೋದನ್ನು ತಿಳಿಯೋಣ. 
 

ಆಚಾರ್ಯ ಚಾಣಕ್ಯ (Acharya Chanakya) ತನ್ನ ಚಾಣಕ್ಯ ನೀತಿಶಾಸ್ತ್ರದಲ್ಲಿ ಮಾನವ ಜೀವನದ ಎಲ್ಲಾ ತೊಂದರೆಗಳಿಗೆ ಪರಿಹಾರ ನೀಡಿದ್ದಾನೆ. ಒಬ್ಬ ಮನುಷ್ಯನು ಸಂತೋಷ (Happiness), ಶಾಂತಿ (Peace), ಸಂಪತ್ತು (Prosperity) ಮತ್ತು ಗೌರವದಿಂದ ಬದುಕಲು ಬಯಸಿದರೆ, ಈ ಐದು ವಿಷಯಗಳನ್ನು ಅವನ ಯೌವನದಲ್ಲಿ ಮನಸ್ಸಿನಲ್ಲಿಟ್ಟುಕೊಳ್ಳಬೇಕು.
 

ಚಾಣಕ್ಯ ಹೇಳುತ್ತಾನೆ ವೃದ್ಧಾಪ್ಯದಲ್ಲಿ (oldage) ನಿಮ್ಮ ಆಹಾರವನ್ನು ನಿಮ್ಮ ಮಕ್ಕಳು ನೀಡೋದಲ್ಲ, ಬದಲಾಗಿ ನೀವು ರೂಢಿ ಮಾಡಿಕೊಂಡ ಸಂಸ್ಕಾರ ಇದನ್ನೆಲ್ಲಾ ನೀಡುತ್ತದೆ ಎಂದು ಹೇಳಿದ್ದಾರೆ. ಇದನ್ನ ನೆನಪಲ್ಲಿಟ್ಟುಕೊಳ್ಳೋದು ಮುಖ್ಯ. 
 

Latest Videos


ಒಂದು ವೇಳೆ ನೀವು ನಿಮ್ಮ ಮಕ್ಕಳ (be good with your children) ಜೊತೆ ಬಾಲ್ಯದಲ್ಲಿ ಚೆನ್ನಾಗಿ ನಡೆದುಕೊಳ್ಳದಿದ್ದರೆ, ಅವರನ್ನು ಪ್ರೀತಿ ಮಾಡದಿದ್ದರೆ ಅಥವಾ ಅವರ ಬಗ್ಗೆ ಕಾಳಜಿ ಹೊಂದದೇ ಇದ್ದರೆ, ಖಂಡಿತವಾಗಿಯೂ ವೃದ್ಧಾಪ್ಯದಲ್ಲಿ ಅವರು ಸಹ ನಿಮ್ಮ ಚೆನ್ನಾಗಿ ನೋಡಿಕೊಳ್ಳೋದಿಲ್ಲ. 
 

ಚಾಣಕ್ಯ ಹೇಳ್ತಾರೆ, ಈಶ್ವರ ಕೇವಲ ಚಿತ್ರದಲ್ಲಿ ಇರೋದು ಅಲ್ಲ, ಈಶ್ವರ ಇರೋದು ನಿಮ್ಮ ಚಾರಿತ್ರ್ಯದಲ್ಲಿ. ಒಂದು ವೇಳೆ ನಿಮ್ಮ ಚಾರಿತ್ರ್ಯ ಚೆನ್ನಾಗಿದ್ದರೆ, ವೃದ್ಧಾಪ್ಯದಲ್ಲಿ ಪ್ರತಿಯೊಬ್ಬರೂ ನಿಮಗೆ ಗೌರವ (respect) ನೀಡುತ್ತಾರೆ. 
 

ಆಚಾರ್ಯರು ಹೇಳುತ್ತಾರೆ, ಯಾವತ್ತೂ ನಾವು ಪದವಿ ಅಥವಾ ಕುರ್ಚಿಗಾಗಿ ಅಹಂಕಾರ ಪಡಬಾರದು, ಯಾಕಂದ್ರೆ ನಮಗೆ ಗೌರವ ನೀಡೋದು ಆ ಕುರ್ಚಿ ಅಥವಾ ಪದವಿ ಅಷ್ಟೇ, ಆ ಅಧಿಕಾರ (power) ಇಲ್ಲಾಂದ್ರೆ ನೀವು ಶೂನ್ಯ. 
 

ಸಹಾಯ ಮಾಡಲು ನಿಮ್ಮಲ್ಲಿ ತುಂಬಾ ಹಣ ಇರಬೇಕು ಎಂದೇನಿಲ್ಲ. ಬದಲಾಗಿ ನಿಮ್ಮ ಬಳಿ ಎಷ್ಟು ಇದೆಯೋ? ಅಷ್ಟರಲ್ಲಿ ನಿರ್ಗತಿಕರಿಗೆ ಸಹಾಯ ಮಾಡೊದನ್ನು ಕಲಿಯಿರಿ. ಇದರಿಂದ ವೃದ್ಧಾಪ್ಯದಲ್ಲಿ ನಿಮಗೆ ನೆಮ್ಮದಿ ಸಿಗಬಹುದು. 
 

ಯಾವತ್ತೂ ಯಾವ ಜನರೊಂದಿಗೂ ಭೇದ ಭಾವ ಮಾಡಿಕೊಂಡು ಇರಬೇಡಿ. ಎಲ್ಲರೊಂದಿಗೆ ಸೇರಿ ಜೊತೆಯಾಗಿ ಖುಷಿ ಖುಷಿಯಾಗಿರಿ (be around good people). ಹೀಗಿದ್ದರೆ, ಕೊನೆಗಾಲದಲ್ಲಿ ಅವರು ನಿಮ್ಮ ಸಹಾಯಕ್ಕೆ ಬರುವರು. 

click me!