ಇಂತಹ ಸ್ನೇಹಿತರ ಜೊತೆ ಇರೋದಕ್ಕಿಂತ ದೂರ ಇದ್ರೆನೆ ಬೆಸ್ಟ್: ಚಾಣಕ್ಯ

First Published Oct 28, 2023, 1:30 PM IST

ಚಾಣಕ್ಯ ನೀತಿಯಲ್ಲಿ ನಮ್ಮ ಜೀವನದ ಏಳಿಗೆಗೆ ಬೇಕಾದಂತಹ ಹಲವಾರು ವಿಷ್ಯಗಳನ್ನು ತಿಳಿಸಿದ್ದಾರೆ. ಅದರಲ್ಲಿ ತಿಳಿಸಿದಂತೆ ನಡೆದರೆ ನಮ್ಮ ಜೀವನದಲ್ಲಿ ಎಂದಿಗೂ ಸೋಲು ಅನುಭವಿಸಲು ಸಾಧ್ಯವೇ ಇಲ್ಲ. 
 

ಚಾಣಕ್ಯ ನೀತಿಯಲ್ಲಿ (Chanakya Niti), ನಮ್ಮ ಜೀವನದ ಪ್ರತಿಯೊಂದೂ ಅಂಶವನ್ನು ವಿವರವಾಗಿ ಚರ್ಚಿಸಲಾಗಿದೆ. ಸಂತೋಷ ಮತ್ತು ಸಮೃದ್ಧವಾಗಿರಲು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಬಗ್ಗೆ ನಾವು ವಿವರವಾದ ಮಾಹಿತಿಯನ್ನು ಪಡೆಯುತ್ತೇವೆ. ಚಾಣಕ್ಯ ನೀತಿಯಲ್ಲಿ ಸ್ನೇಹದ ಬಗ್ಗೆಯೂ ವಿವರವಾದ ಮಾಹಿತಿ ಇದೆ. ಚಾಣಕ್ಯ ನಮ್ಮ ಜೀವನದಲ್ಲಿ ನಾವು ಸ್ನೇಹಿತರನ್ನು ಹೇಗೆ ಇಟ್ಟುಕೊಳ್ಳಬೇಕು ಮತ್ತು ಯಾವ ರೀತಿ ಸ್ನೇಹಿತರಿಂದ ದೂರ ಇರಬೇಕು ಎಂದು ಬಹಿರಂಗವಾಗಿ ಹೇಳಿದ್ದಾನೆ. 
 

ಸ್ನೇಹಿತರಾಗಿದ್ದು (bad friends) ಕೊಂಡೇ ಮೋಸ ಮಾಡೋ ಜನರಿಂದ ದೂರ ಇರಿ ಎನ್ನುತ್ತಾರೆ ಚಾಣಕ್ಯ ಹಾಗಿದ್ರೆ ಎಂತಹ ಜನರಿಂದ ದೂರ ಇರಬೇಕು. ಹಾಗಿದ್ದರೆ ಏನಾಗುತ್ತೆ ಅನ್ನೋದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ. ಇದನ್ನ ಅರ್ಥ ಮಾಡಿಕೊಂಡ್ರೆ ನಿಜವಾಗ್ಲೂ ನಿಮ್ಮ ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುತ್ತೆ.

Latest Videos


ಬೆನ್ನ ಹಿಂದೆ ಮಾತನಾಡೋ ಸ್ನೇಹಿತ
ಚಾಣಕ್ಯನ ಪ್ರಕಾರ, ನಿಮ್ಮ ಬೆನ್ನ ಹಿಂದೆ ನಿಮ್ಮ ಕೆಲಸವನ್ನು ಹಾಳುಮಾಡುತ್ತಿರುವ, ಆದರೆ ನಿಮ್ಮ ಮುಂದೆ ನಿಮ್ಮವರಾಗುತ್ತಿರುವ ಜನರೊಂದಿಗಿನ ಸ್ನೇಹವನ್ನು (fake friends) ತಕ್ಷಣ ಮುರಿಯಬೇಕು. ಯಾಕಂದ್ರೆ ಇಂತಹ ಸ್ನೇಹಿತರಿಂದ ನಿಮ್ಮ ಜೀವನವೇ ಹಾಳಾಗಿ ಹೋಗುತ್ತೆ. 

ನಿಮ್ಮ ಒಳ್ಳೆತನದ ಬಗ್ಗೆ ಯೋಚಿಸೋದೆ ಇಲ್ಲ

ನಿಮ್ಮ ಬೆನ್ನ ಹಿಂದೆ ಪಿತೂರಿ ಮಾಡುವ ಜನರಿಗಾಗಿ ನೀವು ಎಷ್ಟೇ ಮಾಡಿದರೂ, ಅವರು ನಿಮ್ಮ ಆಸಕ್ತಿಯ ಬಗ್ಗೆ ಎಂದಿಗೂ ಯೋಚಿಸುವುದಿಲ್ಲ ಎಂದು ಚಾಣಕ್ಯ ಹೇಳುತ್ತಾನೆ. ಇವರೊಂದಿಗಿದ್ದರೆ ನಿಮ್ಮ ಜೀವನ ಮತ್ತಷ್ಟು ಹಾನಿಯಾಗುತ್ತೆ. 

ಬಣ್ಣದ ಮಾತನಾಡುವ ಜನರು
ಚಾಣಕ್ಯ ನೀತಿಯ ಪ್ರಕಾರ, ನಿಮ್ಮನ್ನು ಮೆಚ್ಚಿಸುವ ಬಣ್ಣದ ಮಾತನಾಡುವ ಜನರಿಂದ ದೂರವಿರಿ. ಏಕೆಂದರೆ ಈ ಜನರು ನಿಮ್ಮ ಯೋಗ ಕ್ಷೇಮದ ಬಗ್ಗೆ ಎಂದಿಗೂ ಯೋಚಿಸಲು ಸಾಧ್ಯವಿಲ್ಲ. ಅವರು ಕೇವಲ ತಮ್ಮ ಕೆಲಸ ಸಾಧಿಸಲು ಬಣ್ಣದ ಮಾತುಗಳನ್ನಾಡುತ್ತಾರೆ. 

ಸತ್ಯವನ್ನು ಬೆಂಬಲಿಸುವ ವ್ಯಕ್ತಿ
ಯಾವುದೇ ವ್ಯಕ್ತಿಯು ಸತ್ಯಕ್ಕೆ ಸದಾ ಬೆಂಬಲ ನೀಡುತ್ತಿದ್ದರೆ, ಅಂತಹ ವ್ಯಕ್ತಿಯೊಂದಿಗೆ ಯಾವಾಗಲೂ ಸ್ನೇಹಿತರಾಗಿರಬೇಕು ಎಂದು ಚಾಣಕ್ಯ ನಂಬುತ್ತಾನೆ. ಇದರಿಂದ ನಿಮ್ಮ ಜೀವನವೂ ಉತ್ತಮವಾಗುತ್ತೆ. 
 

ಉತ್ತಮ ಮಾರ್ಗದಲ್ಲಿ ನಡೆಯುವವರು
ಉತ್ತಮ ಸ್ನೇಹಿತ ಯಾವಾಗಲೂ ಉತ್ತಮ ಮಾರ್ಗಗಳನ್ನು ಅನುಸರಿಸಲು ನಿಮ್ಮನ್ನು ಪ್ರೇರೇಪಿಸುತ್ತಾನೆ. ಆದರೆ ಕೆಟ್ಟ ಸ್ನೇಹಿತ ಯಾವಾಗಲೂ ನಿಮ್ಮನ್ನು ದುಷ್ಟತನಕ್ಕೆ ಕರೆದೊಯ್ಯುತ್ತಾನೆ. ಹಾಗಾಗಿ ಯಾರು ನಿಮ್ಮ ಉತ್ತಮ ಸ್ನೇಹಿತ ಅನ್ನೋದನ್ನು ತಿಳಿಯಲು ಪ್ರಯತ್ನಿಸೋದು ಉತ್ತಮ. 
 

click me!