ವಿಶ್ವಕರ್ಮ ಪುರಾಣದ ಪ್ರಕಾರ, ನಾರಾಯಣನು ಮೊದಲು ಬ್ರಹ್ಮ ಮತ್ತು ನಂತರ ವಿಶ್ವಕರ್ಮ ನನ್ನು ಸೃಷ್ಟಿಸಿದರಂತೆ. ಬ್ರಹ್ಮನ ಸೂಚನೆ ಮೇರೆಗೆ, ವಿಶ್ವಕರ್ಮ ಪುಷ್ಪಕ ವಿಮಾನ, ಇಂದ್ರಪುರಿ, ತ್ರೇತಾಯುಗದಲ್ಲಿ ಲಂಕಾ, ದ್ವಾಪರದಲ್ಲಿ ದ್ವಾರಕಾ ಮತ್ತು ಹಸ್ತಿನಾಪುರ, ಕಲಿಯುಗದಲ್ಲಿ ಜಗನ್ನಾಥ ಪುರಿಯನ್ನು (Puri Jagannath) ನಿರ್ಮಿಸಿದರು. ಇದರೊಂದಿಗೆ, ಭಗವಾನ್ ವಿಶ್ವಕರ್ಮ ಪ್ರಾಚೀನ ಧರ್ಮಗ್ರಂಥಗಳಲ್ಲಿ ವಾಸ್ತು ಶಾಸ್ತ್ರ, ಯಂತ್ರ ನಿರ್ಮಾಣ್, ವಿಮಾನ ವಿದ್ಯೆ ಇತ್ಯಾದಿಗಳ ಜ್ಞಾನದ ಬಗ್ಗೆ ಮಾಹಿತಿಯನ್ನು ಒದಗಿಸಿದ್ದಾರೆ.