ಧರ್ಮ ಸ್ಥಾಪನ ಮಾರ್ಗದಲ್ಲಿ ಶ್ರೀಕೃಷ್ಣ ಏನೆಲ್ಲಾ ಶಾಪ ಎದುರಿಸಿದ?

First Published | Feb 21, 2024, 1:38 PM IST

ಒಂದೆಡೆ, ದ್ವಾಪರ ಯುಗವು ಕೃಷ್ಣ ಲೀಲೆಗಳಿಂದ ತುಂಬಿದೆ. ಆದರೆ ಶ್ರೀ ಕೃಷ್ಣನು ತನ್ನ ಲೀಲೆಗಳು ಮತ್ತು ಧರ್ಮವನ್ನು ಸ್ಥಾಪಿಸುವ ಮಾರ್ಗದಲ್ಲಿ ಏನೆಲ್ಲಾ ಶಾಪ ಪಡೆದಿದ್ದಾರೆ ಅನ್ನೋದು ಗೊತ್ತಾ? 
 

ದ್ವಾಪರ ಯುಗದಲ್ಲಿ (Dwaparyug) ವಿಷ್ಣು ಶ್ರೀಕೃಷ್ಣನಾಗಿ ಜನಿಸಿದನು. ಇದು ವಿಷ್ಣುವಿನ ಎಂಟನೇ ಅವತಾರ. ಒಂದೆಡೆ, ದ್ವಾಪರ ಯುಗವು ಕೃಷ್ಣ ಲೀಲೆಗಳಿಂದ ತುಂಬಿದ್ದರೆ, ಶ್ರೀ ಕೃಷ್ಣನು ತನ್ನ ಲೀಲೆಗಳು ಮತ್ತು ಧರ್ಮವನ್ನು ಸ್ಥಾಪಿಸುವ ಮಾರ್ಗದಲ್ಲಿ ಕೆಲವು ಶಾಪಗಳನ್ನು ಸಹ ಎದುರಿಸಬೇಕಾಗಿ ಬಂದಿತ್ತು. ಆ ಶಾಪವನ್ನು ತೆಗೆದುಕೊಂಡು ಸಮಸ್ಯೆಗೆ ಸಿಲುಕಿ ಹಾಕಿಕೊಂಡಿದ್ದೂ ನಿಜ. 
 

 ಶ್ರೀ ಕೃಷ್ಣನು ಶಾಪ ಅಥವಾ ಯಾವುದೇ ಲೌಕಿಕ ಭಾವನೆಗಿಂತ ತುಂಬಾನೆ ದೊಡ್ಡೋನು ಅನ್ನೋದು ನಿಜ, ಆದರೂ ಸಹ, ಅವನು ಮಾನವ ದೇಹದಲ್ಲಿ ಬಂಧಿಸಲ್ಪಟ್ಟಿದ್ದರಿಂದ ಈ ಶಾಪಗಳನ್ನು  ತೆಗೆದುಕೊಂಡನು ಮತ್ತು ಅವುಗಳ ಪರಿಣಾಮಗಳನ್ನು ಅನುಭವಿಸಿದನು. ಶ್ರೀ ಕೃಷ್ಣ (Lord Shri Krishna)ಯಾವೆಲ್ಲ ಶಾಪವನ್ನು ಎದುರಿಸಬೇಕಾಗಿಯಿತು ಅನ್ನೋದನ್ನು ನೋಡೋಣ. 
 

Latest Videos


ದುರ್ವಾಸ ಮುನಿಗಳಿಂದ ಪಡೆದ ಶಾಪ
ಶ್ರೀ ಕೃಷ್ಣನು ತನ್ನ ಬಾಲ್ಯದಲ್ಲಿ ಮೊದಲ ಶಾಪವನ್ನು ಪಡೆದನು. ಒಮ್ಮೆ ಋಷಿ ದುರ್ವಾಸನು (Durvasa) ಗೋಕುಲದ ಹೊರಗೆ ತಪಸಿಗೆ ಕುಳಿತಿದ್ದರು. ಆವಾಗ ಶ್ರೀ ಕೃಷ್ಣನು ತನ್ನ ಕಿಡಿಗೇಡಿತನ ಮತ್ತು ಬಾಲ ಲೀಲೆಗಳ ಮೂಲಕ ದುರ್ವಾಸ ಮುನಿಯ ತಪಸ್ಸನ್ನು ಕೆಡಿಸಿದನು. 

ಇದರಿಂದ ಕೋಪಗೊಂಡ ದುರ್ವಾಸ ಮುನಿಗಳು ಶ್ರೀ ಕೃಷ್ಣನಿಗೆ ಯಾವ ತಾಯಿಯ ಅತಿಯಾದ ಮುದ್ದಿನಿಂದ ನೀನು ಇಷ್ಟೊಂದು ತುಂಟನಾಗಿರುವೆಯೋ, ಆ ತಾಯಿಯಿಂದ ನೀವು ದೂರ ಆಗಬೇಕು ಎಂದು ಶಾಪ ನೀಡಿದರು.  ಋಷಿಯೊಬ್ಬರು ನೀಡಿದ ಈ ಶಾಪವನ್ನು (curse) ಪೂರೈಸಲು ಶ್ರೀ ಕೃಷ್ಣನು ಗೋಕುಲವನ್ನು ತ್ಯಜಿಸಿದನು.  
 

ಗಾಂಧಾರಿ ಕೊಟ್ಟ ಶಾಪ
ಶ್ರೀ ಕೃಷ್ಣನು ಕೌರವ ಮಾತಾ ಗಾಂಧಾರಿಯಿಂದ (Gandhari) ಎರಡನೇ ಶಾಪವನ್ನು ಪಡೆದ. ಮಹಾಭಾರತ ಗ್ರಂಥದ ಪ್ರಕಾರ, ಗಾಂಧಾರಿ ಯುದ್ಧದ ಬಳಿಕ ಕೌರವ ರಾಜವಂಶದ ವಧುಗಳು ಅಳುತ್ತಿರುವುದನ್ನು  ಕೇಳಿ, ಶ್ರೀ ಕೃಷ್ಣನನ್ನು ಕುರಿತು ನೀನು ಭಗವಂತ , ನೀನು ಬಯಸಿದರೆ ಈ ವಿಪತ್ತನ್ನು ನಿಲ್ಲಿಸಬಹುದಿತ್ತು. ಯುದ್ಧವಿಲ್ಲದೆಯೂ ಧರ್ಮವನ್ನು ಸ್ಥಾಪಿಸಬಹುದಿತ್ತು, ಆದರೆ ನೀನು ಹಾಗೆ ಮಾಡಿಲ್ಲ ಎಂದು ಹೇಳುತ್ತಾ ಗಾಂಧಾರಿ ಯುದುವಂಶದ ನಾಶವಾಗಲಿ ಎಂದು ಶ್ರೀ ಕೃಷ್ಣನನ್ನು ಶಪಿಸಿದಳು. ಶ್ರೀ ಕೃಷ್ಣನು ಸಹ ಈ ಶಾಪವನ್ನು ಸ್ವೀಕರಿಸಿದನು ಮತ್ತು ತನ್ನ ಕುಲದ ನಾಶವನ್ನು ಸ್ವತಃ ನೋಡಿದನು. 
 

ಯಮರಾಜನಿಂದ ಶಾಪ
ಶ್ರೀ ಕೃಷ್ಣನು ಯಮರಾಜನಿಂದ ಮೂರನೇ ಶಾಪವನ್ನು ಪಡೆದನು. ಇದು ಸಂಪೂರ್ಣವಾಗಿ ಶಾಪದ ವರ್ಗಕ್ಕೆ ಸೇರದಿದ್ದರೂ, ಶ್ರೀ ಕೃಷ್ಣನು ಸಹ ಈ ಶಾಪವನ್ನು ಸ್ವೀಕರಿಸಿದನು. ಶಾಪವೆಂದರೆ ಶ್ರೀ ಕೃಷ್ಣನು ಸಂದೀಪನಿ ಮುನಿಯ ಮಗನನ್ನು ಯಮರಾಜನಿಂದ ಜೀವಂತವಾಗಿ ಮರಳಿ ತೆಗೆದುಕೊಳ್ಳಲು ಹೋದಾಗ, ಯಮರಾಜನು ಶ್ರೀ ಕೃಷ್ಣನೊಂದಿಗೆ ಹೋರಾಡಿದ. ಆದರೆ ಅವನು ಯುದ್ಧದಲ್ಲಿ ಸೋತನು. ಇದರಿಂದ ಕೋಪಗೊಂಡ ಯಮರಾಜನು (Yamraj) ಶ್ರೀ ಕೃಷ್ಣನನ್ನು ಕೊಲ್ಲಲು ಸಮಯಕ್ಕಿಂತ ಮುಂಚಿತವಾಗಿ ಬರುತ್ತೇನೆ ಎಂದು ಮಾತು ತಪ್ಪಿ ಹೇಳಿದನು, ಹಾಗೆಯೇ ಆಯಿತು. 

click me!