Evil Eye Bracelet ಕೇವಲ ಸ್ಟೈಲ್ ಮಾತ್ರ ಅಲ್ಲ… ಕೆಟ್ಟ ದೃಷ್ಟಿಯಿಂದಲೂ ನಿಮ್ಮನ್ನ ರಕ್ಷಿಸುತ್ತೆ

Published : Apr 27, 2026, 06:59 AM IST

Evil Eye Bracelet: ಈಗ ಯಾರ ಕೈಯಲ್ಲಿ ನೋಡಿದರೂ ದೃಷ್ಟಿ ಬಳೆಗಳನ್ನು ಕಾಣಬಹುದು. ನೀಲಿ ಮತ್ತು ಬಿಳಿ ಬಣ್ಣದ ಆ ದೃಷ್ಟಿ ಬಳೆ, ಬ್ರೇಸ್ ಲೆಟ್ ನೋಡೋದಕ್ಕೆ ಚೆನ್ನಾಗಿದೆ. ಇದು ಫ್ಯಾಷನ್ ಮತ್ತು ಸ್ಟೈಲ್ ನ ಒಂದು ಭಾಗವಾಗಿದೆ ಎಂದು ಅಂದುಕೊಳ್ಳಬೇಡಿ. ಈ ಬಳೆ ನಿಮ್ಮನ್ನು ದುಷ್ಟ ಕಣ್ಣುಗಳಿಂದ ರಕ್ಷಿಸುತ್ತವೆ. 

PREV
16
ಕೆಟ್ಟ ದೃಷ್ಟಿ ಬೀಳುತ್ತಿದೆಯೆ?

ಹೆಚ್ಚಾಗಿ ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರಿಗೂ ಒಂದಲ್ಲ ಒಂದು ವಿಧದಲ್ಲಿ ದೃಷ್ಟಿಯಾಗಿಯೇ ಆಗುತ್ತೆ. ಯಾವುದೆ ವ್ಯಕ್ತಿಯ ಮೇಲೆ ಕೆಟ್ಟ ದೃಷ್ಟಿಯು ಬಿದ್ದರೆ, ಅದರಿಂದ ನೀವು ಮಾಡುವ ಎಲ್ಲಾ ಕೆಲಸದಲ್ಲಿ ಅಡೆತಡೆಯಾಗುತ್ತದೆ, ಆರೋಗ್ಯ ಸಮಸ್ಯೆಯೂ ಕಾಡಲು ಶುರುವಾಗುತ್ತದೆ. ಕೆಟ್ಟ ದೃಷ್ಟಿಯನ್ನು ತಪ್ಪಿಸಲು ನೀವು ಇವಿಲ್ ಐ ಬ್ರೇಸ್ ಲೆಟ್ ಅಥವಾ ದೃಷ್ಟಿ ಬಳೆ ಅಥವಾ ಬ್ರೇಸ್ ಲೆಟ್ ಧರಿಸಬಹುದು.

26
ಇವಿಲ್ ಐ ಬ್ರೇಸ್ ಲೆಟ್

ಫೆಂಗ್ ಶೂಯಿಯಲ್ಲಿ ಕೆಟ್ಟ ದೃಷ್ಟಿಯನ್ನು ತೆಗೆಯುವುದು ತುಂಬಾನೆ ಮುಖ್ಯವೆಂದು ಪರಿಗಣಿಸಲಾಗಿದೆ. ಹಾಗಾಗಿಯೇ ಇವಿಲ್ ಐ ಬ್ರೇಸ್ ಲೆಟ್ ಗೆ ಹೆಚ್ಚಿನ ಬೇಡಿಗೆ ಕೂಡ ಇದೆ. ಪ್ರಾಚೀನ ನಂಬಿಕೆಗಳ ಪ್ರಕಾರ, ಇದು ಜೀವನದಿಂದ ನಕಾರಾತ್ಮಕತೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರಿಂದ ನೀವು ಅಂದುಕೊಂಡದ್ದನ್ನು ಯಾವುದೇ ಅಡೆ ತಡೆ ಇಲ್ಲದೇ ಸಾಧಿಸಲು ಸಹಾಯ ಮಾಡುತ್ತದೆ.

36
ಯಾಕೆ ದೃಷ್ಟಿಯಾಗುತ್ತದೆ?

ಕೆಲವು ಜನರು ಕೆಟ್ಟ ದೃಷ್ಟಿಯಿಂದ ಸುಲಭವಾಗಿ ಪ್ರಭಾವಿತರಾಗುತ್ತಾರೆ, ಮತ್ತು ಅವರ ಸುತ್ತಲೂ ನಕಾರಾತ್ಮಕ ಪ್ರಭಾವಲಯವು ಸಂಗ್ರಹವಾಗುವುದರಿಂದ ಸಾಮಾನ್ಯವಾಗಿ ದೃಷ್ಟಿಯಾಗುತ್ತದೆ. ಕೆಟ್ಟ ದೃಷ್ಟಿಯಿಂದಾಗಿ ಜನರಿಗೆ ಅನಾರೋಗ್ಯ, ತಲೆನೋವು ಅಥವಾ ಆಯಾಸ ಇವೆಲ್ಲವೂ ಕಾಡೋದಕ್ಕೆ ಶುರು ಮಾಡುತ್ತದೆ.

46
ದೃಷ್ಟಿಯಾಗೋದನ್ನು ತಪ್ಪಿಸಲು ಇವಿಲ್ ಐ ಬ್ರೇಸ್ ಲೆಟ್

ನೀವು ಅಥವಾ ನಿಮ್ಮ ಮನೆಮಂದಿ ಮೇಲೆ ದೃಷ್ಟಿ ಬಿದ್ದಿದ್ದರೆ, ಇದರಿಂದ ನೀವು ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ, ಫೆಂಗ್ ಶೂಯಿಯಲ್ಲಿ ವಿವರಿಸಿದಂತೆ ಇವಿಲ್ ಐ ಬ್ರೇಸ್ ಲೆಟ್ ಧರಿಸೋದು ಉತ್ತಮ. ಈ ಬ್ರೇಸ್ ಲೆಟ್ ಧರಿಸುವುದರಿಂದ ನಕಾರಾತ್ಮಕ ಶಕ್ತಿಯು ದೂರ ಸರಿದು ನಿಮ್ಮ ಬಳಿ ಹೆಚ್ಚು ಪಾಸಿಟಿವ್ ಎನರ್ಜಿ ಸುತ್ತುತ್ತಲೇ ಇರುತ್ತೆ.

56
ಮಾನಸಿಕ ಶಾಂತಿಯನ್ನು ತರುತ್ತದೆ

ಇನ್ನು ಕೆಟ್ಟದ್ದು ಆಗಬಾರದು ಅಂದ್ರೆ, ನೀವು ದೃಷ್ಟಿ ಬಳೆಗಳನ್ನು ಸಹ ಧರಿಸಬಹುದು. ಇವು ದೇಹದ ಏಳು ಚಕ್ರಗಳನ್ನು ಸಮತೋಲನಗೊಳಿಸುತ್ತದೆ, ಮಾನಸಿಕ ಶಾಂತಿಯನ್ನು ನೀಡುತ್ತದೆ ಮತ್ತು ಕೆಟ್ಟ ದೃಷ್ಟಿಯ ಪರಿಣಾಮಗಳನ್ನು ದೂರ ಮಾಡುತ್ತದೆ. ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಜನರು ದೃಷ್ಟಿ ಬಳೆಗಳನ್ನು ಹೆಚ್ಚಾಗಿ ಧರಿಸುತ್ತಾರೆ.

66
ದೃಷ್ಟಿ ಬಳೆಯನ್ನು ಯಾವಾಗ ಮತ್ತು ಹೇಗೆ ಧರಿಸಬೇಕು?

ಫೆಂಗ್ ಶೂಯಿಯಲ್ಲಿ ದೃಷ್ಟಿ ಬಳೆಯನ್ನು ಧರಿಸಲು ಯಾವುದೇ ನಿರ್ದಿಷ್ಟ ಶುಭ ದಿನ ಅಥವಾ ವಿಧಾನ ಯಾವುದೂ ಇಲ್ಲ. ಆದರೆ, ಕೆಲವು ಜ್ಯೋತಿಷಿಗಳು ದೃಷ್ಟಿ ಬಳೆಯನ್ನು ಯಾವಾಗಲೂ ಎಡಗೈಯಲ್ಲಿ ಧರಿಸಬೇಕೆಂದು ತಿಳಿಸಿದೆ. ಏಕೆಂದರೆ ದೇಹದ ಎಡಭಾಗವನ್ನು ಭಾವನಾತ್ಮಕವೆಂದು ಪರಿಗಣಿಸಲಾಗುತ್ತದೆ ಮತ್ತು ಎಡಗೈಯಲ್ಲಿ ಈ ಬಳೆಯನ್ನು ಧರಿಸುವುದರಿಂದ ಕೆಟ್ಟ ದೃಷ್ಟಿಯಿಂದ ದೂರವಿರಲು ಸಹಾಯ ಮಾಡುತ್ತದೆ.

Read more Photos on
click me!

Recommended Stories