Ramayana: ಸೀತೆ ತನ್ನ ಶ್ರೀರಾಮನಿಂದ ದೂರವಾದದ್ದು ಗಿಳಿಯ ಶಾಪವಂತೆ!

First Published May 15, 2023, 4:57 PM IST

ಶ್ರೀ ರಾಮ ಮತ್ತು ತಾಯಿ ಸೀತೆ 14 ವರ್ಷಗಳ ಕಾಲ ವನವಾಸ ಅನುಭವಿಸಿದ್ದರು. ಸೀತಾಮಾತೆ ಮತ್ತು ಶ್ರೀ ರಾಮ ವನವಾಸದ ಸಮಯದಲ್ಲಿ ಬೇರ್ಪಟ್ಟಿದ್ದು ಗಿಳಿಯ ಶಾಪದಿಂದ ಎಂದು ನಂಬಲಾಗಿದೆ. ಗಿಳಿಯೊಂದು ಸೀತಾಮಾತೆಗೆ ಭಯಾನಕ ಶಾಪವನ್ನು ನೀಡಿತ್ತು. ಈ ಬಗ್ಗೆ ತಿಳಿದುಕೊಳ್ಳೋಣ. 

ರಾಮಾಯಣದಲ್ಲಿ (Ramayana) ಕಂಡುಬರುವ ಇಂತಹ ಅನೇಕ ಆಸಕ್ತಿದಾಯಕ ಕಥೆಗಳು ಆಶ್ಚರ್ಯಕರವಾಗಿವೆ. ಈ ಕಥೆಗಳಲ್ಲಿ ಒಂದು ತಾಯಿ ಸೀತಾ ಮತ್ತು ಗಿಳಿಯ ಕಥೆ. ವನವಾಸದ ಸಮಯದಲ್ಲಿ ಮಾತಾ ಸೀತಾ ಮತ್ತು ಶ್ರೀ ರಾಮನ ಪ್ರತ್ಯೇಕತೆಗೆ ಕಾರಣ ಸೀತಾಮಾತೆಗೆ ನೀಡಿದ ಗಿಳಿಯ ಶಾಪ ಎಂದು ನಂಬಲಾಗಿದೆ. ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ. 

ರಾಮಾಯಣವನ್ನು ವಿವಿಧ ಭಾಷೆಗಳಲ್ಲಿ ರಚಿಸಲಾಗಿದೆ. ರಾಮಾಯಣಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ಆಶ್ಚರ್ಯಕರವಾಗಿರುವುದಕ್ಕೆ ಇದು ಕಾರಣವಾಗಿದೆ. ಬೇರೆ ರಾಮಾಯಣದಲ್ಲಿ, ತಾಯಿ ಸೀತಾ ಮತ್ತು ಶ್ರೀ ರಾಮನ ಪ್ರತ್ಯೇಕತೆಯ ಹಿಂದೆ, ಬಾಲ್ಯದಲ್ಲಿ ಗಿಳಿ ತಾಯಿ ಸೀತೆಗೆ ಶಾಪ (curse by Sita) ನೀಡಿತ್ತು ಎಂದು ಉಲ್ಲೇಖಿಸಲಾಗಿದೆ. 

ದಂತಕಥೆಯ ಪ್ರಕಾರ, ಒಮ್ಮೆ ತಾಯಿ ಸೀತಾ ತನ್ನ ಸಹೋದರಿಯರೊಂದಿಗೆ ಆಟವಾಡುತ್ತಿದ್ದಳು. ಆಟವಾಡುವಾಗ, ಅವಳು ತೋಟದಲ್ಲಿನ ಮರದ ಬಳಿ ಬಂದಳು. ಅಲ್ಲಿ ಒಂದು ಜೋಡಿ ಗಿಳಿಗಳು ಕುಳಿತಿದ್ದವು. ಆ ಜೋಡಿ ಶ್ರೀ ರಾಮ ಮತ್ತು ಸೀತಾ (Sri Ram and Sita) ಮಾತೆಯ ಬಗ್ಗೆ ಮಾತನಾಡುತ್ತಿದ್ದರು. ತಾಯಿ ಸೀತಾ ತನ್ನ ಹೆಸರನ್ನು ಕೇಳಿ ಆಘಾತಕ್ಕೊಳಗಾದಳು.

ಸೀತಾ ದೇವಿ ಗಿಳಿಯನ್ನು ತನ್ನ ಹೆಸರು ಹೇಗೆ ತಿಳಿದಿದೆ ಎಂದು ಕೇಳಿದಳು. ಆಗ ಗಿಳಿ ತಾನು ಮತ್ತು ತನ್ನ ಹೆಂಡತಿ ಮಹರ್ಷಿ ವಾಲ್ಮೀಕಿಯ ಆಶ್ರಮದಲ್ಲಿ ವಾಸಿಸುತ್ತಿದ್ದೇವೆ ಎಂದು ಹೇಳಿದೆ. ಆ ಸಂದರ್ಭದಲ್ಲಿ ಗಿಳಿಗಳು ಮಾತಾ ಸೀತಾ ಮತ್ತು ಶ್ರೀ ರಾಮನ ಸಂಪೂರ್ಣ ಕಥೆಯನ್ನು ಕೇಳಿದ್ದಾರೆ 

ಗಿಳಿ ಜೋಡಿ  (Parrot Pair) ಈಗ ಮತ್ತೆ ಆ ಕಥೆಯನ್ನು ಸಂಪೂರ್ಣವಾಗಿ ನೆನಪಿಸಿಕೊಂಡಿರುವುದಾಗಿ ಹೇಳಿತು. ಗಿಳಿಗಳ ಬಾಯಲ್ಲಿ ತನ್ನ ಹೆಸರನ್ನು ಕೇಳಿದಾಗ ಸೀತಾ, ತನ್ನ ಭವಿಷ್ಯದ ಬಗ್ಗೆ ಹೇಳುವಂತೆ ಕೇಳಿದಾಗ ಗಿಳಿಗಳು ನಿರಾಕರಿಸಿದವು. ಸೀತಾ ಗಿಳಿಗಳನ್ನು ಹಿಡಿಯಲು ಹೊರಟಾಗ ಗಂಡು ಗಿಳಿ ಹಾರಿ ಹೋಯಿತು, ಹೆಣ್ಣು ಗಿಳಿ ಆಕೆಯ ಕೈಸೇರಿತು. ನಂತರ ಗಿಳಿ ತನ್ನನ್ನು ಹಾರಲು ಬಿಡುವಂತೆ ಕೇಳಿಕೊಂಡಿತು. ಆದರೆ ಮಗು ಸೀತಾಗೆ ಆ ಗಿಳಿಯನ್ನು ನೋಡಿ ಇಷ್ಟವಾಗಿ ಅದನ್ನು ತನ್ನ ಬಳಿಯೇ ಇಟ್ಟುಕೊಳ್ಳಬೇಕೆಂಬ ಬಯಕೆ ಹೆಚ್ಚಾಯ್ತು.
 

ಗಿಳಿಯನ್ನು ಹಾರಲು ಬಿಡದೇ ಇದ್ದಾಗ, ಹೆಣ್ಣು ಗಿಳಿ ಕೋಪಗೊಂಡು ಸೀತೆಗೆ ಶಾಪ ನೀಡಿತು. ನನ್ನನ್ನು ನನ್ನ ಪತಿಯಿಂದ ಬೇರ್ಪಡಿಸಿದಂತೆ, ನೀವು ನಿಮ್ಮ ಪತಿಯಿಂದ ಬೇರ್ಪಡುತ್ತೀರಿ ಎಂದು ಶಪಿಸಿತು. ಅಷ್ಟೇ ಅಲ್ಲದೆ, ಗರ್ಭಾವಸ್ಥೆಯಲ್ಲಿ (pregnant) ನನ್ನ ಪತಿಯ ವಿರಹದ ನೋವನ್ನು ನಾನು ಸಹಿಸಬೇಕಾಗಿ ಬಂದಂತೆ, ಗರ್ಭಾವಸ್ಥೆಯಲ್ಲಿ ಪತಿಯಿಂದ ನೀವು ಸಹ ದೂರ ಇರಬೇಕು ಎಂದು ಶಪಿಸಿತು.

ಇದರ ನಂತರ, ಗಿಳಿಗಳು ತಮ್ಮ ಪ್ರಾಣ ತ್ಯಾಗ ಮಾಡಿದವು. ಮುಂದಿನ ಜನ್ಮದಲ್ಲಿ, ಅದೇ ಗಿಳಿ ಬಟ್ಟೆ ತೊಳೆಯುವವನಾಗಿ ಜನ್ಮ ತಾಳಿತು ಎಂದೂ ನಂಬಲಾಗಿದೆ. ಅದುವೇ ಅಗಸ ಸೀತೆ ಲಂಕೆಯಿಂದ ವಾಪಾಸ್ ಬಂದ ಬಳಿಕ ಸೀತೆಯ ಬಗ್ಗೆ ಬೆರಳು ತೋರಿಸಿ ಮಾತನಾಡಿದ್ದನು, ರಾಜಧರ್ಮದಿಂದಾಗಿ ರಾಮನು ಈ ಸಮಯದಲ್ಲಿ ಸೀತಾ ಮಾತೆಯನ್ನು ತ್ಯಜಿಸಬೇಕಾಗಿ ಬಂದಿತ್ತು.  

click me!