ಯುಗಾದಿ ವರ್ಷ ಭವಿಷ್ಯ: ಕ್ರೋಧಿನಾಮ ಸಂವತ್ಸರದಲ್ಲಿ ಯಾರಿಗೆ ಬೇವು, ಯಾರಿಗೆ ಬೆಲ್ಲ

First Published | Apr 8, 2024, 3:20 PM IST

ಯುಗಾದಿ ಎಂದರೆ ಹೊಸ ಯುಗದ ಆದಿ. ಇದೀಗ ಕ್ರೋಧಿ ಸಂವತ್ಸರ ಆದಿಯಲ್ಲಿದ್ದೇವೆ ಈ ವರ್ಷ ಯಾರಿಗೆ ಬೇವು, ಯಾರಿಗೆ ಬೆಲ್ಲ ನೋಡಿ. ಖ್ಯಾತ ಜ್ಯೋತಿಷಿ ಹರೀಶ್ ಕಶ್ಯಪ್ ವರ್ಷ ಭವಿಷ್ಯ ಹೇಳಿದ್ದಾರೆ. ನಿಮ್ಮ ರಾಶಿ ಫಲ ಹೇಗಿದೆ ಅಂತ ಚೆಕ್ ಮಾಡಿಕೊಳ್ಳಿ. 

ವ್ಯಾವಹಾರಿಕವಾಗಿ ಉತ್ತಮ ವರ್ಷ. ವಿದ್ಯಾರ್ಥಿಗಳು, ವೈದ್ಯರು, ಮಂತ್ರಿಗಳು, ಲೆಕ್ಕಿಗರು, ಕಲಾವಿದರಿಗೆ ವಿಪುಲ ಅವಕಾಶ. ಉತ್ತಮ ಗುರುಬಲ. ಧನಾದಾಯ, ಮಾನಸಮ್ಮಾನ ದೊರೆಯುವುದು. ಏಕಾದಶ ಶನಿಯ ಫಲ ಇದೆ! ಧರ್ಮ ಕರ್ಮಗಳಲ್ಲಿ, ಗುರು ಸೇವೆಯಲ್ಲಿ ಹೆಚ್ಚು ತೊಡಗಿ.

ಜನ್ಮಗುರು, ಕರ್ಮದ ಶನಿಯೋಗ ಪ್ರತಿಷ್ಠೆ ಹೆಚ್ಚಿಸುತ್ತೆ, ಒತ್ತಡ ಆತಂಕಗಳೂ ಹೆಚ್ಚುವ ವರ್ಷವಿದು  ಜಾಗ್ರತೆ ಬೇಕು. ವಿವಾಹಾದಿ ಶುಭಕಾರ್ಯ ವೃದ್ಧಿ, ಸಂಬಂಧಗಳಲ್ಲಿ ಬಿರುಕು ಸಾಧ್ಯತೆ. ಆರ್ಥಿಕ ಆದಾಯ ಮಧ್ಯಮ. ಶ್ರೀಗುರು ಸೇವೆ ಮಾಡಿ .

Tap to resize

ಇದು ಸವಾಲಿನ ವರ್ಷ. ಭಾವನಾತ್ಮಕವಾಗಿ ಬಳಲಬೇಡಿ.  ನೈಜ ಪರಿಸ್ಥಿತಿಯ ಅವಲೋಕನ ಮಾಡಿ ವ್ಯವಹರಿಸಿ.  ಪಿತೃಶಾಂತಿಗಳ ಬಗ್ಗೆ ಜಾತಕ ತೋರಿಸಿ, ಪರಿಹಾರ ಮಾಡಿಸಿಕೊಳ್ಳಿ. ವ್ಯವಹಾರದಲ್ಲಿ ಆದಾಯ ಮಧ್ಯಮ.  ಪರಿಶ್ರಮ ಹೆಚ್ಚಿರಲಿ. ಶ್ರೀ ಸೀತಾರಾಮ, ಆಂಜನೇಯ ಸೇವೆ ಮಾಡಿ.

ಸಾಹಸ ಮಾಡಿ ಸಿದ್ದಿ ಪಡೆಯಬೇಕಾದ ವರ್ಷ. ಸ್ತ್ರೀಯರಿಗೆ ಅಧಿಕ ಬಾಧೆ . ರಾಜಕೀಯ ಅಧಿಕಾರಿ ವರ್ಗದವರಿಗೆ ಹಿನ್ನಡೆ. ಬಂಧು- ಮಿತ್ರರ ಸಹಾಯ ಮೋಸವಾದೀತು, ಜಾಗ್ರತೆ. ಖರ್ಚು ಅಧಿಕ, ಆದಾಯ ಸರಿದೂಗುವುದು ಕಷ್ಟ. ರೋಗ, ಕಷ್ಟ ನಿವಾರಣೆಗೆ ಶ್ರೀನಾರಸಿಂಹ ದೇವರ ಮೊರೆಹೋಗಿ.

ಉತ್ತಮ ಗುರುಬಲದ ವರ್ಷ. ಆದಾಯ ಉತ್ತಮ, ಶುಭಕಾರ್ಯ.  ಬಂಧು- ಮಿತ್ರರು ಹತ್ತಿರವಾಗುವರು. ದೇಶ-ವಿದೇಶ ವ್ಯವಹಾರ ಕುದುರುವುದು. ನ್ಯಾಯಾಲಯ ವ್ಯಾಜ್ಯಗಳ ಶ್ರಮ ಅಧಿಕ. ಶ್ರೀ ಗುರು ದೇವರ ಆರಾಧನೆ ವಿಶೇಷವಿರಲಿ.

ಪೂರ್ವಾರ್ಜಿತ ಪುಣ್ಯದ ವರ್ಷ. ಅನೇಕ ಅವಕಾಶಗಳು ದೊರೆಯಲಿವೆ. ಆದಾಯ ಅಭಿವೃದ್ಧಿಗಳ ಪಡೆಯುವಿರಿ. ಆರೋಗ್ಯದ ಬಗ್ಗೆ ಗಮನವಿರಲಿ. ಕೆಲಸದಲ್ಲಿ ಬದಲಾವಣೆ, ಜಾಗ ಖರೀದಿ, ವಿವಾಹಾದಿ ಸಂಬಂಧ ಏರ್ಪಡುವುದು, ಶ್ರೀಗಣಪತಿ ನಾಗದೇವರ ಪೂಜೆ ಮಾಡಿರಿ.

ಗುರು ಬಲವಿಲ್ಲ, ಪಂಚಮ ಶನಿಯ ಬಾಧೆಯೂ ಇದೆ. ಅವಸರ ಪಡದೇ ತಾಳ್ಮೆಯಿಂದ  ತೂಗಿಸಿಕೊಂಡು ಹೋಗಬೇಕಾದ ವರ್ಷ. ಕೌಟುಂಬಿಕ, ಮಿತ್ರ ವ್ಯಾಜ್ಯಗಳು, ಅಲೆದಾಟ, ಆಯಾಸ  ಹೆಚ್ಚು.  ಗಟ್ಟಿಗರಾದರೆ ಮೆಟ್ಟಿ ನಿಲ್ಲಬಹುದು! ಶ್ರೀ ರುದ್ರಾಭಿಷೇಕ ಮಾಡಿಸಿ

ಶನಿ, ಗುರುಗಳ ಕೇಂದ್ರ ಬಲದ ವರ್ಷ.ಎಲ್ಲ ವಿಷಯ ಕಾರ್ಯಗಳಲ್ಲೂ ಪ್ರಗತಿ, ಯಶಸ್ಸು. ವಿದ್ಯಾರ್ಥಿಗಳು, ರಾಜಕಾರಣಿಗಳು ಬಹು ಅವಕಾಶ  ಪಡೆವರು. ಧನಾದಾಯ ಉತ್ತಮ. ಆಹಾರ, ಆರೋಗ್ಯದ ಕಡೆ ಗಮನವಿರಲಿ. ಶ್ರೀ ಆಂಜನೇಯ ಸೇವೆ ನಡೆಯಲಿ.

ಕೆಲಸ ಹೆಚ್ಚು, ಆದಾಯ ಕಡಿಮೆ. ಮನಃಶಾಂತಿಗೆ ಕೊರತೆ!  ತಾಳ್ಮೆ, ಗಮನವಿರಲಿ. ಬಂಧು ಮಿತ್ರರು ದೂರವಾಗಬಹುದು.  ಹಾಗಾಗದಂತೆ ಎಚ್ಚರವಹಿಸಬೇಕು. ಶ್ರೀನಿವಾಸ, ಕುಲದೇವರ ಪೂಜಿಸುತ್ತಿರಿ.

ಜನ್ಮ ಶನಿಯ ಬಾಧೆ ಕಡಿಮೆಯಾಗುವ ವರ್ಷ. ಹೊಸ ಕೆಲಸ, ಹೊಸ ವಾಸ, ಹೊಸ ಚಿಂತನೆಗಳು ಗರಿಗೆದರುವುದು. ಮಧ್ಯಮ ಪ್ರಗತಿ. ವಿಹಾರ, ಪ್ರವಾಸ ನಡೆಯುವುದು. ಖರ್ಚು, ವೆಚ್ಚದ ಮೇಲೆ ಗಮನವಿರಲಿ. ಶ್ರೀ ವೆಂಕಟೇಶ, ಕುಲದೇವರ ಸೇವೆ ನಡೆಯಲಿ.

ಕರ್ಮಪತಿಯೇ ಜನ್ಮದಲ್ಲಿ ಇದ್ದಾನೆ.  ಅಧಿಕಾರ, ಅವಕಾಶಗಳು ನಿಧಾನ ಪ್ರಗತಿಗೆ ಬರುವುದು. ಮೀನ ರಾಹು ಅವಸರ ತಂದಾನು! ಜಾಗ್ರತೆಯಿರಲಿ. ಆರೋಗ್ಯ ಸುಧಾರಣೆ, ಅಧಿಕಾರ ಲಾಭ, ವಿದೇಶಕ್ಕೆ ವ್ಯವಹಾರಿಕ ಪ್ರಯಾಣ. ಸರ್ಕಾರಿ ಅಧಿಕಾರ ವೃದ್ಧಿ. ಶ್ರೀ ನರಸಿಂಹ, ಗುರುರಾಯರ ಸೇವೆಗಳಾಗಲಿ.

ಎತ್ತ ಹೋದರೂ ಮನಸ್ಸಿಗೆ ನೆಮ್ಮದಿ ಇಲ್ಲ. ಮೌನ, ದೇವರ ಧ್ಯಾನ ಒಂದೇ ನಿಮ್ಮನ್ನು ಕಾಪಾಡುವುದು. ಸ್ತ್ರೀಯರಿಗೆ ಅಧಿಕ ಬಾಧೆ. ಭಿನ್ನ ಮತಿಯಿದ್ದರೆ ಸಂಬಂಧಗಳೂ ಭಿನ್ನವಾಗುತ್ತದೆ. ಎಚ್ಚರಿಕೆ ಬೇಕು. ಶ್ರೀ ನವಗ್ರಹ ಶಾಂತಿ ಮಾಡಿರಿ.

Latest Videos

click me!