ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀಕೃಷ್ಣ ಪೂಜೆ ಮಾಡಿದ್ರೆ…ಸಂಪತ್ತಿನ ಸುರಿಮಳೆಯಾಗುತ್ತೆ

Published : Dec 01, 2023, 04:26 PM IST

ಶ್ರೀಕೃಷ್ಣ ದೇವರನ್ನು ಭಕ್ತಿಯಿಂದ ಪೂಜಿಸಿದರೆ ನಮ್ಮ ಬೇಡಿಕೆಗಳೆಲ್ಲಾ ಈಡೆರುತ್ತಂತೆ. ಅದಕ್ಕಾಗಿ ನಾವು ಪ್ರತಿನಿತ್ಯ ಕೆಲವೊಂದು ಕೆಲಸಗಳನ್ನು ಮಾಡಬೇಕು. ಕೃಷ್ಣನನ್ನು ಯಾವ ರೀತಿ ಪೂಜಿಸಬೇಕು ಅನ್ನೋದನ್ನು ತಿಳಿಯೋಣ.   

PREV
18
ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀಕೃಷ್ಣ ಪೂಜೆ ಮಾಡಿದ್ರೆ…ಸಂಪತ್ತಿನ ಸುರಿಮಳೆಯಾಗುತ್ತೆ

ಹಿಂದೂ ಧರ್ಮದಲ್ಲಿ, ಶ್ರೀ ಕೃಷ್ಣನನ್ನು (Shri Krishna) ವಿಷ್ಣುವಿನ 8ನೇ ಅವತಾರ ಎಂದು ಕರೆಯಲಾಗುತ್ತದೆ. ವಿಷ್ಣುವಿನ ಮಾಧವ ರೂಪವನ್ನು ಪೂಜಿಸುವುದರಿಂದ ವಿಶೇಷ ಪ್ರಯೋಜನಗಳಿವೆ. ಪ್ರತಿದಿನ ಬೆಳಿಗ್ಗೆ ಕೆಲವು ವಿಶೇಷ ಕೆಲಸಗಳನ್ನು ಮಾಡುವ ಮೂಲಕವೂ, ಶ್ರೀ ಕೃಷ್ಣನು ಸಂತೋಷಪಡುತ್ತಾನೆ ಮತ್ತು ಸಂಪತ್ತನ್ನು ಸುರಿಸುತ್ತಾನೆ. ಯಾವ ರೀತಿ ಕೃಷ್ಣನನ್ನು ಸಂತೋಷಪಡಿಸಬಹುದು ನೋಡೋಣ. 
 

28

ಪೂಜೆ
ಧರ್ಮಗ್ರಂಥಗಳ ಪ್ರಕಾರ, ಬ್ರಹ್ಮ ಮುಹೂರ್ತದಲ್ಲಿ (Brahmi Muhurat) ಪ್ರತಿದಿನ ಶ್ರೀ ಕೃಷ್ಣನನ್ನು ಪೂಜಿಸಿದರೆ ಕೃಷ್ಣ ಸಂತೋಷಪಡುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾಗೀ ನೀವು ಸಹ ಕೃಷ್ಣನನ್ನು ಮುಂಜಾನೆಯೇ ಪೂಜಿಸಬೇಕು. ಆವಾಗ ಮಾತ್ರ ಪೂಜೆ ಫಲ ಸಿಗುತ್ತದೆ.

38

ಶ್ರೀ ಕೃಷ್ಣ ಮಂತ್ರ 
ಬೆಳಗ್ಗೆ ಎದ್ದು ದೈನಂದಿನ ಕಾರ್ಯಗಳನ್ನು ಮುಗಿಸಿದ ನಂತರ, ಗಂಗಾಜಲಯುಕ್ತವಾದ ನೀರಿನಿಂದ ಸ್ನಾನ- ಧ್ಯಾನ ಮಾಡಿ. ನಂತರ, ಅಂಗೈಯಲ್ಲಿ ನೀರನ್ನು ಇರಿಸುವ ಮೂಲಕ ಶ್ರೀ ಕೃಷ್ಣ ಮಂತ್ರಗಳನ್ನು ಪಠಿಸಿ.  

48

ಸೂರ್ಯ ದೇವರಿಗೆ ಅರ್ಘ್ಯ ನೀಡಿ
ಶ್ರೀಕೃಷ್ಣ ಮಂತ್ರ ಪಠಿಸಿದ ಬಳಿಕ ನೀವು ಸೂರ್ಯ ದೇವರಿಗೆ ನೀರನ್ನು ಅರ್ಪಿಸಬೇಕು ಮತ್ತು ಮತ್ತೆ ಶ್ರೀ ಕೃಷ್ಣನ ಮಂತ್ರಗಳನ್ನು ಪಠಿಸಿ, ಇದರಿಂದ ಕೃಷ್ಣನು ಸಂತೋಷಗೊಂಡು ನಿಮಗೆ ಆಶೀರ್ವದಿಸುವನು. 

58

ಶ್ರೀ ಕೃಷ್ಣನನ್ನು ಪೂಜಿಸಿ  
ಈಗ, ನೀವು ಶ್ರೀ ಕೃಷ್ಣನಿಗೆ ತುಳಸಿ ಎಲೆಗಳ ಮಾಲೆ ಹಾಕಿ, ದೀಪ, ಧೂಪದ್ರವ್ಯ ಬೆಳಗಿಸಿ, ಹಣ್ಣುಗಳು, ಕುಂಕುಮ, ಅಕ್ಷತೆ, ಅರಿಶಿನ ಮತ್ತು ಶ್ರೀಗಂಧವನ್ನು ಶ್ರೀಕೃಷ್ಣನಿಗೆ ಅರ್ಪಿಸಿ ಪೂಜಿಸಬೇಕು.  

68

ಶೃಂಗಾರ
ಕೃಷ್ಣನಿಗೆ ಶೃಂಗಾರ ಎಂದರೆ ಪ್ರಿಯ. ನೀವು ಶ್ರೀ ಕೃಷ್ಣನನ್ನು ಸ್ನಾನ ಮಾಡಿಸಿ ಧ್ಯಾನ ಮಾಡಿದ ಬಳಿಕ ಕೃಷ್ಣನನ್ನು ಅಲಂಕರಿಸಬೇಕು. ಶ್ರೀ ಕೃಷ್ಣನನ್ನು ಅಲಂಕರಿಸಿ, ಕೃಷ್ಣನ ಮುಂದೆ ಕನ್ನಡಿ ಹಿಡಿದರೆ ಕೃಷ್ಣ ಸಂತೋಷಗೊಂಡು ಹರಸುತ್ತಾನೆ. 
 

78

ಆರತಿ ಮಾಡಿ  
ಇದರ ನಂತರ, ನೀವು ಕೊನೆಯಲ್ಲಿ ಭಗವಾನ್ ಶ್ರೀ ಕೃಷ್ಣನ ಆರತಿಯನ್ನು ಮಾಡಬೇಕು. ಇದು ಸಂತೋಷ, ಸಮೃದ್ಧಿ, ಸಂಪತ್ತು, ಗೌರವ, ಧನ ಎಲ್ಲವನ್ನೂ ಲಭಿಸುವಂತೆ ಮಾಡುತ್ತೆ. 
 

88

ಹಳದಿ ಬಟ್ಟೆ ಧರಿಸಿ 
ಶ್ರೀ ಕೃಷ್ಣನು ಹಳದಿ ಬಟ್ಟೆಗಳನ್ನು (yellow dress) ಇಷ್ಟಪಡುತ್ತಾನೆ. ಹಾಗಾಗಿ ನೀವು ಪೂಜೆಯ ಸಮಯದಲ್ಲಿ ಹಳದಿ ಬಟ್ಟೆಗಳನ್ನು ಧರಿಸುವ ಮೂಲಕ ನೀವು ಕೃಷ್ಣನನ್ನು ಮೆಚ್ಚಿಸಬಹುದು.

Read more Photos on
click me!

Recommended Stories