ದೀರ್ಘಾಯಸ್ಸು ಬೇಕಾ? ಹಾಗಿದ್ರೆ ಪ್ರತಿದಿನ ಈ ಕೆಲಸ ಮಾಡಿ ನೂರು ವರ್ಷ ಬಾಳಿ

Published : Mar 01, 2024, 05:23 PM IST

ನಿಮಗೂ ಕೂಡ ದೀರ್ಘಕಾಲ ಬದುಕಬೇಕೆಂಬ ಆಸೆ ಇದೆಯೇ? ಹಾಗಿದ್ರೆ ನೀವು ಇವತ್ತಿನಿಂದಲೇ ಈ ಎರಡು ಅಭ್ಯಾಸಗಳನ್ನು  ರೂಢಿ ಮಾಡಿಕೊಳ್ಳೋದು ಮುಖ್ಯ. ಇದರಿಂದ ಆಯಸ್ಸು ಹೆಚ್ಚುತ್ತದೆ, ಹಣವೂ ನಿಮ್ಮ ಬಳಿ ಬರುತ್ತದೆ.   

PREV
17
ದೀರ್ಘಾಯಸ್ಸು ಬೇಕಾ? ಹಾಗಿದ್ರೆ ಪ್ರತಿದಿನ ಈ ಕೆಲಸ ಮಾಡಿ ನೂರು ವರ್ಷ ಬಾಳಿ

ಆಚಾರ್ಯ ಚಾಣಕ್ಯ (Acharya Chanakya) ಎರಡು ಕಾರ್ಯಗಳ ಬಗ್ಗೆ ವರ್ಣನೆ ಮಾಡಿದ್ದಾರೆ, ಅವುಗಳನ್ನು ಪ್ರತಿದಿನ ಮಾಡೋದರಿಂದ ನೀವು ದೀರ್ಘ ಕಾಲ ಬಾಳಬಹುದು ಎನ್ನಲಾಗಿದೆ. ಹಾಗಿದ್ರೆ ಆ ಎರಡು ವಿಷಯಗಳು ಯಾವುವು? 
 

27

ಆಚಾರ್ಯ ಚಾಣಕ್ಯನ ಅನುಸಾರ ಮನುಷ್ಯರು ಊಟ ಮಾಡುವ ಸಮಯದಲ್ಲಿ ಯಾವತ್ತೂ ಮಾತನಾಡಲೇ ಬಾರದು ಎಂದು ಹೇಳುತ್ತಾರೆ. ಯಾವ ಮನುಷ್ಯ ಊಟ ಮಾಡುವ ಸಮಯದಲ್ಲಿ ಒಂದು ಮಾತು ಆಡುವುದಿಲ್ಲವೋ, ಆತ ಈ ಭೂಮಿ ಮೇಲೆ ದೀರ್ಘಕಾಲ ಬದುಕುತ್ತಾನೆ. 

37

ಜೀವನ ಪರ್ಯಂತ ಈ ಕೆಲಸವನ್ನು ನಿಷ್ಠೆಯಿಂದ ಮಾಡುವ ಜನರು ಸತ್ತ ಬಳಿಕ ಸ್ವರ್ಗ (heaven) ಸೇರುತ್ತಾರೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಸ್ವರ್ಗದಲ್ಲೂ ಸಹ ಇಂತಹ ಜನರಿಗೆ ಪೂಜನೀಯ ಸ್ಥಾನವನ್ನೇ ನೀಡಲಾಗುತ್ತದೆಯಂತೆ. 
 

47

ಹಲವು ಧರ್ಮಗ್ರಂಥಗಳಲ್ಲೂ ಈ ಬಗ್ಗೆ ಉಲ್ಲೇಖನ ಮಾಡಲಾಗಿದೆ, ಅದೇನೆಂದರೆ ಶಾಂತ ಭಾವದಿಂದ ಅಂದರೆ ಮಾತನಾಡದೇ ಊಟ (eating) ಮಾಡಿದರೆ, ಅದು ದೇವರಿಗೆ ಮತ್ತು ಪಿತೃಗಳಿಗೆ ಸಲ್ಲುತ್ತದೆ ಎಂದು ಹೇಳಿದೆ. 
 

57

ಅಷ್ಟೇ ಅಲ್ಲ ಚಾಣಕ್ಯರು ಹೇಳುವಂತೆ ಮನುಷ್ಯರು ದೀರ್ಘಕಾಲದವರೆಗೆ ಬದುಕಬೇಕೆಂಬ ಆಸೆ ಇದ್ದರೆ, ಅವರು ಪ್ರತಿದಿನ ಗಾಯತ್ರಿ ಮಂತ್ರವನ್ನು (Gayatri Mantra) ಸಹ ಪಠಿಸಬೇಕು. 

67

ಗಾಯತ್ರಿ ಮಂತ್ರ ಅತ್ಯಂತ ಶಕ್ತಿಶಾಲಿ ಮತ್ತು  ಪ್ರಭಾವಶಾಲಿ ಮಂತ್ರವಾಗಿದ್ದು, ಅದನ್ನು ಪಠಿಸೋದರಿಂದ ಹಲವಾರು ರೀತಿಯಲ್ಲಿ ಲಾಭಗಳು ಸಿಗಲಿವೆ ಎಂದು ಸಹ ಆಚಾರ್ಯ ಚಾಣಕ್ಯ ತಿಳಿಸಿದ್ದಾರೆ. 
 

77

ಪ್ರತಿದಿನ ಗಾಯತ್ರಿ ಮಂತ್ರವನ್ನು ಪಠಿಸೋದರಿಂದ ಮನುಷ್ಯರ ಆಯಸ್ಸು ಹೆಚ್ಚುತ್ತದೆ ನಿಜ. ಇದರ ಜೊತೆ ಜೊತೆಗೆ ಮನುಷ್ಯರ ಶಕ್ತಿಯೂ ಹೆಚ್ಚುತ್ತದೆ, ಪಾಸಿಟಿವಿಟಿ ಹೆಚ್ಚುತ್ತದೆ, ಜೊತೆಗೆ ನಿಮ್ಮ ಬಳಿ ಅಪಾರ ಹಣವೂ ಬರುತ್ತದೆ ಎಂದು ಹೇಳಿದ್ದಾರೆ ಚಾಣಕ್ಯ. 
 

Read more Photos on
click me!

Recommended Stories