ಭಾನುವಾರ ಈ ಕೆಲಸಗಳನ್ನ ಮಾಡೋದು ತಪ್ಪಂತೆ

First Published Feb 19, 2023, 12:30 PM IST

ಹಿಂದೂ ಧರ್ಮದಲ್ಲಿ ಪ್ರತಿಯೊಂದು ದಿನವೂ ಒಂದೊಂದು ದೇವರಿಗೆ ಸಮರ್ಪಿತವಾಗಿದೆ. ಸೋಮವಾರ ಶಿವನಿಗೆ, ಶುಕ್ರವಾರ ಲಕ್ಷ್ಮಿಗೆ ಹೀಗೆ ಒಂದೊಂದು ದಿನಕ್ಕೂ ಒಂದೊಂದು ಮಹತ್ವ ಇದೆ. ಆದಾರೆ ಭಾನುವಾರದ ಮಹತ್ವದ ಬಗ್ಗೆ ನಿಮಗೆ ತಿಳಿದಿದೆಯೇ? ಇಲ್ಲಾ ಅಂದ್ರೆ ಇಲ್ಲಿದೆ ನೋಡಿ ಮಾಹಿತಿ. 

ಹಿಂದೂ ಧರ್ಮದಲ್ಲಿ ಭಾನುವಾರಕ್ಕೆ (Sunday) ಯಾವ ರೀತಿಯ ಮಹತ್ವ ಇದೆ. ಈ ದಿನ ಯಾವ ದೇವರಿಗೆ ಸಮರ್ಪಿತವಾಗಿದೆ ಮತ್ತು ಈ ದಿನ ಯಾವ ಕೆಲಸವನ್ನು ಮಾಡುವುದು ಉಚಿತವಲ್ಲ ಅನ್ನೋದು ನಿಮಗೆ ತಿಳಿದಿದೆಯೇ? ಹಿಂದೂ ಧರ್ಮದಲ್ಲಿ ಭಾನುವಾರವನ್ನು ವಿಷ್ಣು ಮತ್ತು ಸೂರ್ಯ ದೇವನ ದಿನವಾಗಿ ಆಚರಿಸಲಾಗುತ್ತೆ. ಹಿಂದೂ ಧರ್ಮದ ನಂಬಿಕೆಯಂತೆ ಸೂರ್ಯ ದೇವನ ಪೂಜೆ ಮಾಡಿದ್ರೆ ಜೀವನದಲ್ಲಿ ಸಮೃದ್ಧಿ, ವೈಭೋಗ, ಗೌರವ ಎಲ್ಲವೂ ದೊರೆಯುತ್ತದೆ. 
 

ಹಿಂದೂ ಧರ್ಮದಲ್ಲಿ (Hindu Dharma) ಭಾನುವಾರಕ್ಕೆ ವಿಶೇಷವಾದ ಮಹತ್ವವಿದೆ. ಭಾನುವಾರವನ್ನು ಎಲ್ಲಾ ವಾರಕ್ಕಿಂತಲೂ ಶ್ರೇಷ್ಟವಾದ ವಾರ ಎಂದು ಹೇಳಲಾಗುತ್ತದೆ. ಈ ದಿನ ನೀವು ಸೂರ್ಯ ಅಥವಾ ವಿಷ್ಣುವನ್ನು ಪೂಜಿಸಿದರೆ ಜೀವನದಲ್ಲಿ ಎಲ್ಲವೂ ಒಳ್ಳೆಯ ರೀತಿಯಲ್ಲಿ ನಡೆಯುತ್ತದೆ. ಆದ್ರೆ ಭಾನುವಾರ ನೀವು ಮಾಡುವ ಕೆಲವು ಕೆಲಸಗಳು ಸಮಸ್ಯೆಯನ್ನುಂಟು ಮಾಡಬಹುದು. ಬನ್ನಿ ಅವುಗಳ ಬಗ್ಗೆ ತಿಳಿಯೋಣ. 

Latest Videos


ಪ್ರಯಾಣ: ನೀವು ಯಾತ್ರೆ ಅಥವಾ ಪ್ರಯಾಣ (travel) ಮಾಡಲು ಇಷ್ಟಪಡುವವರು ಆಗಿದ್ರೆ, ಇದನ್ನು ನೀವು ತಿಳಿದಿರಲೇಬೆಕು. ಅದೇನಂದ್ರೆ ಯಾವುದೇ ಕಾರಣಕ್ಕೂ ಭಾನುವಾರದಂದು ಪಶ್ಚಿಮ ದಿಕ್ಕಿನಲ್ಲಿ ಪ್ರಯಾಣ ಮಾಡೋದನ್ನು ತಪ್ಪಿಸಬೇಕು. ಯಾಕಂದ್ರೆ ಆ ದಿನ, ಆ ದಿಕ್ಕಿನಲ್ಲಿ ಪ್ರಯಾಣ ಮಾಡೋದು ಶ್ರೇಯಸ್ಕರ ಅಲ್ಲ. 
 

ಕೂದಲು ಕತ್ತರಿಸುವುದು (Hair Cut): ಸಾಮಾನ್ಯವಾಗಿ ಹೆಚ್ಚಿನ ಜನರು ತಮಗೆ ಬಿಡುವ ಇರುವ ಸಮಯದಲ್ಲಿ ಹೇರ್ ಕಟ್ಟಿಂಗ್ ಮಾಡಿಸುತ್ತಾರೆ. ಹೆಚ್ಚಾಗಿ ಜನರು ಭಾನುವಾರ ಬಿಡುವು ಇರೋದ್ರಿಂದ ಅದೇ ದಿನ ಕೂದಲು ಕತ್ತರಿಸುತ್ತಾರೆ. ಆದರೆ ಹೀಗೆ ಮಾಡೋದರಿಂದ ನಿಮ್ಮ ಮೇಲಿನ ಸೂರ್ಯನ ಶಕ್ತಿ ಕಡಿಮೆಯಾಗುತ್ತೆ. 

ಉಪ್ಪು (Salt): ಭಾನುವಾರ ಹೆಚ್ಚು ಉಪ್ಪು ತಿನ್ನಬಾರದಂತೆ… ಇದನ್ನು ನಾವು ಹೇಳ್ತಾ ಇಲ್ಲಪ್ಪ. ಭಾನುವಾರ ಉಪ್ಪು ತಿನ್ನೋದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಂತೆ. ಆದುದರಿಂದ ಸಾಧ್ಯವಾದಷ್ಟು ಇದನ್ನು ಅವಾಯ್ಡ್ ಮಾಡಿ.ಇಲ್ಲಾಂದ್ರೆ ಅನಾರೋಗ್ಯ ಗ್ಯಾರಂಟಿ. 
 

ತಾಮ್ರ  (Copper): ಅಪ್ಪಿ ತಪ್ಪಿ ಕೂಡ ಭಾನುವಾರದಂದು ನೀವು ತಾಮ್ರದ ಯಾವುದೇ ರೀತಿಯ ವಸ್ತುಗಳನ್ನು ಖರೀದಿಸಬೇಕು ಅಥವಾ ಅದ್ದನ್ನು ಮಾರುವ ಯೊಚನೆ ಮಾಡಬೇಡಿ. ಇದರಿಂದ ಕೆಟ್ಟದಾಗುತ್ತದೆ ಎಂದು ನಂಬಲಾಗಿದೆ. 

click me!