ಯಾರಿಗೂ ಮೋಸ ಮಾಡಬೇಡಿ, ಅಗೌರವ ತೋರಬೇಡಿ
ಒಬ್ಬ ವ್ಯಕ್ತಿ ಹೆಚ್ಚು ತಿನ್ನುತ್ತಿದ್ದರೆ, ಕೋಪಗೊಂಡರೆ, ಧರ್ಮ, ಬಡವರು ಮತ್ತು ನಿರ್ಗತಿಕರು ಮತ್ತು ಮಹಿಳೆಯರನ್ನು ಅಗೌರವಿಸಿದರೆ (disrespect), ಅಂತಹ ವ್ಯಕ್ತಿಯ ಜೊತೆ ಎಂದಿಗೂ ಸಂಪತ್ತು ನಿಲ್ಲೋದಿಲ್ಲ ಮತ್ತು ಅವನನ್ನು ನರಕದಿಂದ ಯಾರೂ ರಕ್ಷಿಸಲು ಸಾಧ್ಯವಿಲ್ಲ ಎನ್ನಲಾಗುವುದು. ಕಠಿಣ ಪರಿಶ್ರಮದಿಂದ ಗಳಿಸಿದ ಹಣವನ್ನು ಕದಿಯುವ ಮತ್ತು ಜವಾಬ್ದಾರಿಗಳನ್ನು ಪೂರೈಸದ ವ್ಯಕ್ತಿಯ ಮೇಲೆ ಲಕ್ಷ್ಮೀ ದೇವಿ ಕೋಪಗೊಳ್ಳುತ್ತಾಳೆ. ಹಾಗಾಗಿ ಯಾವತ್ತೂ ಯಾರನ್ನೂ ಅಗೌರವದಿಂದ ಕಾಣಬೇಡಿ.