ಕಾರ್ತಿಕ ಹುಣ್ಣಿಮೆಯಂದು ಈ ಕೆಲಸ ಮಾಡಿದ್ರೆ ನಿಮ್ಮನೆಗೆ ತಾಯಿ ಲಕ್ಷ್ಮೀ ಓಡಿ ಬರ್ತಾಳೆ!

Published : Nov 25, 2023, 05:47 PM IST

ಕಾರ್ತಿಕ ಹುಣ್ಣಿಮೆ ಹಿಂದೂ ಧರ್ಮದಲ್ಲಿ ಅತ್ಯಂತ ವಿಶೇಷವೆಂದು ಪರಿಗಣಿಸಲಾಗಿದೆ. ಶರದ್ ಪೂರ್ಣಿಮಾ ನಂತರ, ಕಾರ್ತಿಕ ಹುಣ್ಣಿಮೆ ದಿನ ತಾಯಿ ಲಕ್ಷ್ಮಿಗೆ ಅತ್ಯಂತ ಪ್ರಿಯ. ಕಾರ್ತಿಕ ಹುಣ್ಣಿಮೆ ನವೆಂಬರ್ 27 ರಂದು ಬರುತ್ತದೆ ಮತ್ತು ಈ ದಿನದಂದು ಗಂಗಾ ಸ್ನಾನ ಮಾಡುವುದು ವಿಶೇಷ ಪ್ರಾಮುಖ್ಯತೆ ಪಡೆದಿದೆ. ಈ ದಿನ ಲಕ್ಷ್ಮೀ ದೇವಿಯನ್ನು ಮೆಚ್ಚಿಸಲು ಏನೇನು ಮಾಡಬೇಕು ನೋಡೋಣ.   

PREV
16
ಕಾರ್ತಿಕ ಹುಣ್ಣಿಮೆಯಂದು ಈ ಕೆಲಸ ಮಾಡಿದ್ರೆ ನಿಮ್ಮನೆಗೆ ತಾಯಿ ಲಕ್ಷ್ಮೀ ಓಡಿ ಬರ್ತಾಳೆ!

ಕಾರ್ತಿಕ ಹುಣ್ಣಿಮೆಯಂದು (Kartik Purnima) ಸ್ನಾನ ಮಾಡುವುದರ ಜೊತೆಗೆ ತಾಯಿ ಲಕ್ಷ್ಮಿಯನ್ನು ಪೂಜಿಸುವುದು ವಿಶೇಷ ಮಹತ್ವ ಪಡೆದಿದೆ. ಇದರೊಂದಿಗೆ, ತಾಯಿ ಲಕ್ಷ್ಮಿ ನಿಮ್ಮ ಮನೆಗೆ ಬಂದು ನೆಲೆಸಲು ನೀವು ಕೆಲವೊಂದು ಕ್ರಮಗಳನ್ನು ಅನುಸರಿಸಬೇಕು. ಹುಣ್ಣಿಮೆ ತಿಥಿಯನ್ನು ತಾಯಿ ಲಕ್ಷ್ಮಿಯ ಆರಾಧನೆಗೆ ಅತ್ಯಂತ ಸೂಕ್ತವೆಂದು ಪರಿಗಣಿಸಲಾಗಿದೆ. ಈ ದಿನ ಲಕ್ಸ್ಮೀ (Goddess Lakshmi) ತುಂಬಾ ಸಂತೋಷವಾಗಿರುತ್ತಾಳೆ ಮತ್ತು ಭಕ್ತರಿಗೆ ಅಪೇಕ್ಷಿತ ಫಲ ನೀಡುತ್ತಾಳೆ ಎಂದು ನಂಬಲಾಗಿದೆ. ಈ ಕ್ರಮಗಳನ್ನು ಅನುಸರಿಸುವುದರಿಂದ, ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಮತ್ತು ನೀವು ಆರ್ಥಿಕ ತೊಂದರೆಗಳಿಂದ (financial problem) ಮುಕ್ತಿ ಪಡೆಯುವಿರಿ.
 

26

ಕಾರ್ತಿಕ ಹುಣ್ಣಿಮೆಯಂದು ಅರಳಿ ಮರದ ಪೂಜೆ
ಕಾರ್ತಿಕ ಹುಣ್ಣಿಮೆಯ ದಿನದಂದು, ಲಕ್ಷ್ಮಿ ದೇವಿಯು ಅರಳಿ ಮರದ ಮೇಲೆ ಸಂತೋಷದ ಭಂಗಿಯಲ್ಲಿ ವಾಸಿಸುತ್ತಾಳೆ ಎನ್ನಲಾಗುತ್ತೆ. ಹಾಗಾಗಿ ಆ ದಿನ ಬೆಳಿಗ್ಗೆ ಸ್ನಾನ ಮಾಡಿ ಮತ್ತು ಆಹಾರವನ್ನು ತೆಗೆದುಕೊಳ್ಳುವ ಮೊದಲು ಅರಳಿ ಮರದ (peepal tree) ಮೇಲೆ ಹಾಲಿನೊಂದಿಗೆ ಬೆರೆಸಿದ ಸಕ್ಕರೆಯನ್ನು ಅರ್ಪಿಸಿ. ಹೀಗೆ ಮಾಡುವುದರಿಂದ, ತಾಯಿ ಲಕ್ಷ್ಮಿ ನಿಮ್ಮ ನಡೆಗೆ ಸಂತೃಪ್ತಳಾಗುತ್ತಾಳೆ. ಅವಳ ಕೃಪೆಯಿಂದ ನಿಮ್ಮ ಜೀವನದ ಎಲ್ಲಾ ಆರ್ಥಿಕ ಬಿಕ್ಕಟ್ಟುಗಳು (Financial Crisis) ನಿವಾರಣೆಯಾಗುತ್ತವೆ.

36

ಪಾಯಸ ಅರ್ಪಿಸಿ
ಕಾರ್ತಿಕ ಹುಣ್ಣಿಮೆಯ ದಿನ, ಲಕ್ಷ್ಮಿ ದೇವಿಗೆ ಕೇಸರಿಯನ್ನು ಅರ್ಪಿಸಿ ಮತ್ತು ಸಂಭ್ರಮದಿಂದ ಲಕ್ಷ್ಮಿ ಮಾತೆಯನ್ನು ಪೂಜಿಸಿ. ಪೂಜೆಯಲ್ಲಿ ಹಳದಿ ಬಳೆಗಳನ್ನು ಅರ್ಪಿಸಿ ಮತ್ತು ಮರುದಿನ ಬೆಳಗ್ಗೆ ಅವುಗಳನ್ನು ದುಡ್ಡಿಡುವ ಲಾಕರ್‌ನಲ್ಲಿಡಿ. ಹೀಗೆ ಮಾಡುವುದರಿಂದ, ವರ್ಷವಿಡೀ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ ಮತ್ತು ತಾಯಿ ಲಕ್ಷ್ಮಿ ನಿಮಗೆ ದಯೆ ತೋರಿಸುತ್ತಾಳೆ.

46

ಚಂದ್ರನನ್ನು ಪೂಜಿಸಿ
ಹುಣ್ಣಿಮೆಯ ದಿನದಂದು ಚಂದ್ರನನ್ನು ಪೂಜಿಸುವುದು (worship moon) ವಿಶೇಷ ಪ್ರಯೋಜನಗಳನ್ನು ನೀಡುತ್ತದೆ. ಚಂದ್ರನಿಗೆ ಅರ್ಘ್ಯ ಅರ್ಪಿಸುವ ಮೂಲಕ, ತಾಯಿ ಲಕ್ಷ್ಮಿ ಕೃಪೆಯ ವಿಶೇಷ ಪ್ರಯೋಜನವನ್ನು ನೀವು ಪಡೆಯುವಿರಿ. ಈ ದಿನ, ರಾತ್ರಿ ಬೆಳ್ಳಿ ಲೋಟದಲ್ಲಿ ಹಾಲು, ನೀರು, ಸಕ್ಕರೆ ಬೆರೆಸಿ ಮತ್ತು ಬಿಳಿ ಹೂವುಗಳಿಂದ ಚಂದ್ರನಿಗೆ ಅರ್ಘ್ಯ ಅರ್ಪಿಸಿ ಪೂಜಿಸಿ. ಹೀಗೆ ಮಾಡುವುದರಿಂದ, ನಿಮ್ಮ ಜಾತಕದಲ್ಲಿ ಚಂದ್ರನ ಸ್ಥಾನವು ಬಲಗೊಳ್ಳುತ್ತದೆ ಮತ್ತು ತಾಯಿ ಲಕ್ಷ್ಮಿಯ ಕೃಪೆಯಿಂದ ನೀವು ಸಂಪತ್ತನ್ನು ಪಡೆಯುತ್ತೀರಿ.
 

56

ಕಾರ್ತಿಕ ಹುಣ್ಣಿಮೆಯಂದು ಇದನ್ನ ಮಾಡಿ
ಕಾರ್ತಿಕ ಹುಣ್ಣಿಮೆಯಂದು ನೀವು ನಿಮ್ಮ ಮನೆಯ ಮುಖ್ಯ ಬಾಗಿಲಿಗೆ ಮಾವಿನ ತೋರಣ ಹಾಕಿ ಮತ್ತು ಎರಡೂ ಬದಿಗಳಲ್ಲಿ ಅರಿಶಿನದೊಂದಿಗೆ ಸ್ವಸ್ತಿಕ ಗುರುತು ಮಾಡಬೇಕು. ಹೀಗೆ ಮಾಡುವುದರಿಂದ, ಸಕಾರಾತ್ಮಕ ಶಕ್ತಿಯು (positive energy) ನಿಮ್ಮ ಮನೆಯ ಕಡೆಗೆ ಆಕರ್ಷಿತವಾಗುತ್ತದೆ ಮತ್ತು ತಾಯಿ ಲಕ್ಷ್ಮಿ ನಿಮ್ಮ ಮನೆಗೆ ಬರುತ್ತಾಳೆ. ನಿಮ್ಮ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ, ನಿಮ್ಮ ಕುಟುಂಬದ ಜನರು ಪ್ರಗತಿ ಹೊಂದುತ್ತಾರೆ.

66

ಕಾರ್ತಿಕ ಹುಣ್ಣಿಮೆಯಂದು ನದಿಯಲ್ಲಿ ಹೀಗೆ ಮಾಡಿ
ಕಾರ್ತಿಕ ಹುಣ್ಣಿಮೆಯಂದು , ಪವಿತ್ರ ನದಿಗಳಿಗೆ ಹೋಗಿ ದೀಪಗಳನ್ನು ತೇಲಿ ಬಿಡುವುದು ತುಂಬಾನೆ ಮುಖ್ಯ ಎಂದು ಪರಿಗಣಿಸಲಾಗಿದೆ. ಇದನ್ನು ಮಾಡುವುದರಿಂದ, ನೀವು ಸಾಲದಿಂದ ಮುಕ್ತರಾಗುತ್ತೀರಿ ಮತ್ತು ವಿಷ್ಣುವಿನೊಂದಿಗೆ, ತಾಯಿ ಲಕ್ಷ್ಮಿ ಕೂಡ ನಿಮ್ಮೊಂದಿಗೆ ಸಂತೋಷವಾಗಿ ನೆಲೆಸುತ್ತಾಳೆ ಎಂದು ನಂಬಲಾಗಿದೆ. ನಿಮ್ಮ ಸುತ್ತಲೂ ನದಿ ಇಲ್ಲದಿದ್ದರೆ, ರಾತ್ರಿಯಿಡೀ ಮನೆಯ ಈಶಾನ್ಯ ಮೂಲೆಯಲ್ಲಿ ಹಸುವಿನ ತುಪ್ಪದ ದೀಪವನ್ನು ಇರಿಸಿ.
 

Read more Photos on
click me!

Recommended Stories