ಅಕ್ಷಯ ತೃತೀಯ ದಿನದಂದು ಕುಬೇರ ದೇವರು ಮತ್ತು ಲಕ್ಷ್ಮಿ ದೇವಿಯನ್ನು (Goddess Lakshmi) ಪೂಜಿಸಲಾಗುತ್ತದೆ. ಲಕ್ಷ್ಮಿ ದೇವಿಯು ತನ್ನ ಭಕ್ತರಿಂದ ಸಂತುಷ್ಟಳಾದರೆ, ಆಕೆ ಅವರಿಗೆ ಸಂತೋಷ ಮತ್ತು ಸಮೃದ್ಧಿಯನ್ನು ನೀಡಿ ಆಶೀರ್ವದಿಸುತ್ತಾಳೆ ಮತ್ತು ಸಂಪತ್ತನ್ನು ಪಡೆಯಲು ಹೊಸ ಮಾರ್ಗಗಳನ್ನು ತೆರೆಯುತ್ತಾಳೆ. ಆದ್ದರಿಂದ, ಅಕ್ಷಯ ತೃತೀಯ ದಿನದಂದು, ಲಕ್ಷ್ಮಿ ದೇವಿಯನ್ನು ವಿಧಿ ವಿಧಾನದ ಮೂಲಕ ಪೂಜಿಸಿ. ಇದಲ್ಲದೆ, ಈ ದಿನದಂದು ಕೆಲವು ವಿಶೇಷ ಕ್ರಮಗಳನ್ನು ಅಳವಡಿಸಿಕೊಂಡರೆ ಆರ್ಥಿಕ ಲಾಭ ಸಿಗುತ್ತದೆ.