ಹೆಂಡ್ತಿಯ ಈ 8 ಅಭ್ಯಾಸಗಳಿಂದ ಗಂಡ ಬಡವನಾಗ್ತಾನೆ; ಹಣಕ್ಕಾಗಿ ಹೆಣಗಾಡಬೇಕು, ಇಂದೇ ಸುಧಾರಿಸಿಕೊಳ್ಳಿ

Published : Jan 27, 2025, 03:51 PM ISTUpdated : Jan 27, 2025, 05:44 PM IST

Wife Bad Habits Effects: ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯದ ಪ್ರಕಾರ, ಹೆಂಡತಿಯ ಕೆಲವು ಅಭ್ಯಾಸಗಳು ಕುಟುಂಬದ ಆರ್ಥಿಕ ಯೋಗಕ್ಷೇಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಪತ್ನಿಯ ಈ ಅಭ್ಯಾಸಗಳಿಂದ ಲಕ್ಷ್ಮಿ ದೇವಿಯನ್ನು ಕೋಪಗೊಳುತ್ತಾಳೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

PREV
111
ಹೆಂಡ್ತಿಯ ಈ 8  ಅಭ್ಯಾಸಗಳಿಂದ ಗಂಡ ಬಡವನಾಗ್ತಾನೆ; ಹಣಕ್ಕಾಗಿ ಹೆಣಗಾಡಬೇಕು, ಇಂದೇ ಸುಧಾರಿಸಿಕೊಳ್ಳಿ

ಪತಿ-ಪತ್ನಿ  ಸಂಬಂಧ ತುಂಬಾ ಭದ್ರ ಮತ್ತು ಈ ಅನುಬಂಧ ತುಂಬಾ ಪವಿತ್ರವಾದದ್ದು ಎಂದು ಹೇಳಲಾಗುತ್ತದೆ. ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂಬ ಮಾತಿದೆ. ಪತಿಯ ಬೆಳವಣಿಗೆಗಾಗಿ ಪತ್ನಿಯೂ ಶ್ರಮವಹಿಸುತ್ತಾಳೆ. 

211

ಗಂಡ-ಹೆಂಡತಿ ಸಂಬಂಧ ಜನ್ಮ ಜನ್ಮಾಂತರದಿಂದ ಬಂದಿರುತ್ತೆ ಎಂದು ನಂಬಲಾಗಿದೆ. ಆದ್ರೆ ಪತ್ನಿಯ ಕೆಲ ಕೆಟ್ಟ ಅಭ್ಯಾಸಗಳು ಗಂಡನನ್ನು ಬಡವನನ್ನಾಗಿ ಮಾಡುತ್ತವೆ ಎಂದು ಮನೆಯಲ್ಲಿ ಹಿರಿಯರು ಹೇಳುತ್ತಿರುತ್ತಾರೆ.

311

ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಮದುವೆಯಾದ ಮಹಿಳೆ ಹೇಗಿರಬೇಕೆಂದು ಉಲ್ಲೇಖಿಸಲಾಗಿದೆ. ಮಹಿಳೆಯನ್ನು ಮನೆಯ ಲಕ್ಷ್ಮೀ ಎಂದು ಕರೆಯಲಾಗುತ್ತದೆ. ಆದ್ರೆ  ಮನೆ ಲಕ್ಷ್ಮೀಯೇ ಕೆಲವೊಂದು ತಪ್ಪುಗಳನ್ನ ಮಾಡಿದ್ರೆ ಕುಟುಂಬದ ಆರ್ಥಿಕ ಪರಿಸ್ಥಿತಿ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆ ಎಂಟು ಕೆಟ್ಟ ಅಭ್ಯಾಸಗಳು ಏನೆಂದು ಈ ಲೇಖನದಲ್ಲಿ ನೋಡೋಣ.

411

1.ಸಂಜೆ ಬೇರೆಯವರ ಮನೆಯಿಂದ ಮೊಸರನ್ನು ಸಾಲವಾಗಿ ತೆಗೆದುಕೊಂಡುಬಾರದು. ಈ ರೀತಿ ಮಹಿಳೆಯರು ಮಾಡುತ್ತಿದ್ದರೆ ಇಂದೇ ಬದಲಿಸಿಕೊಳ್ಳುವುದು ಉತ್ತಮವಾಗಿದೆ.

511

2.ಬೆಳಗ್ಗೆ ಅಥವಾ ಸಂಜೆ ಉಳಿದಿರುವ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಸ್ಟೋರ್ ಮಾಡೋದರಿಂದ ಮಹಾಲಕ್ಷ್ಮೀ ಕುಪಿತಗೊಳ್ಳುತ್ತಾಳೆ. ಆ ಸಮಯಕ್ಕೆ ಎಷ್ಟು ಬೇಕು ಅಷ್ಟನ್ನು ಮಾತ್ರ ಸಿದ್ಧಪಡಿಸಿಕೊಳ್ಳಬೇಕು. 

611

3.ರಾತ್ರಿ ಊಟವಾದ ಬಳಿಕ ಪಾತ್ರೆಗಳನ್ನು ಸಿಂಕ್‌ನಲ್ಲಿಯೇ ಬಿಟ್ಟು ಮಲಗುತ್ತಾರೆ. ಇದರಿಂದ ಲಕ್ಷ್ಮೀ ದೇವಿ ಕೋಪಗೊಳ್ಳುತ್ತಾಳೆ. ಆದ್ದರಿಂದ ರಾತ್ರಿ ಅಥವಾ ತುಂಬಾ ಸಮಯದವರೆಗೆ ಸಿಂಕ್‌ನಲ್ಲಿ ಪಾತ್ರೆಗಳನ್ನು ಇರಿಸಬೇಡಿ. 

711

4.ಸಾಮಾನ್ಯವಾಗಿ ಅಡುಗೆ ಮಾಡುವ ಗಡಿಬಿಡಿಯುಲ್ಲಿ ತವೆ/ಕಾವಲಿಯನ್ನು ಒಲೆ ಮೇಲೆಯೇ ಬಿಡುತ್ತಾರೆ. ಇದರಿಂದ ಮನೆಯಲ್ಲಿನ ಮಹಿಳಾ ಸದಸ್ಯರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಇದಕ್ಕಾಗಿ ಆಸ್ಪತ್ರೆಗೆ ಹಣ ಹಾಕುವಂತಾಗುತ್ತದೆ. 

811

5.ಅಡುಗೆ ಮಾಡಿದ ಬಳಿಕ ಮಹಿಳೆಯರು ತತ್‌ಕ್ಷಣವೇ ಬಿಸಿ ಒಲೆಯನ್ನು ಕ್ಲೀನ್ ಮಾಡುತ್ತಾರೆ. ಒಲೆ ಸಂಪೂರ್ಣವಾಗಿ ತಣ್ಣಗಾದ ನಂತರವೇ ಶುಚಿಗೊಳಿಸಬೇಕು. ಬಿಸಿ ಒಲೆ ಆರಿಸೋದರಿಂದ ಲಕ್ಷ್ಮೀದೇವಿ ಕೋಪಕ್ಕೆ ತುತ್ತಾಗಬೇಕಾಗುತ್ತದೆ. 

911

6.ಪತಿ ಅಥವಾ ಮನೆಯ ಯಾವುದೇ ಸದಸ್ಯರು ಊಟಕ್ಕೆ ಕುಳಿತಾಗ ಒಮ್ಮೆಗೆ 3 ರೊಟ್ಟಿ/ಚಪಾತಿ/ಇಡ್ಲಿ/ದೋಸೆ ಹಾಕಬಾರದು. ಮೂರರ ಬದಲಾಗಿ ಎರಡು ಅಥವಾ ನಾಲ್ಕು ಹಾಕಬೇಕು. ಪಿಂಡ ಪ್ರದಾನ ಸಂದರ್ಭದಲ್ಲಿ ಮೂರು ಪಿಂಡಗಳನ್ನು ಬಳಕೆ ಮಾಡಲಾಗುತ್ತದೆ. 

1011

7.ಮನೆಯನ್ನು ಸ್ವಚ್ಛಗೊಳಿಸಿದ ಬಳಿಕ ಪೊರಕೆಯನ್ನು ಮೂಲೆಯಲ್ಲಿಯೇ ಇರಿಸುತ್ತಾರೆ. ಮನೆಯಲ್ಲಿರುವ ಪೊರಕೆ ಹೊರಗಿನವರಿಗೆ ಕಾಣಿಸಬಾರದು. ಆ ರೀತಿ ಪೊರಕೆಯನ್ನು ಇರಿಸಬೇಕಾಗುತ್ತದೆ. 

1111


8.ಪತಿ-ಪತ್ನಿಯರ ನಡುವೆ ಪದೇ ಪದೇ ಕಲಹಗಳು ಉಂಟಾದಾಗ ಪತಿ ಕೋಪಗೊಂಡು ಮನೆಯಿಂದ ಹೊರಗೆ ಹೋದರೂ ಲಕ್ಷ್ಮಿ ದೇವಿ ಕೋಪಗೊಳ್ಳುತ್ತಾಳೆ.

Read more Photos on
click me!

Recommended Stories