ಜ್ಯೋತಿಷ್ಯದಲ್ಲಿ ಹೇಳಿರುವಂತೆ ಮನುಷ್ಯನ ಗುಣ, ಲಕ್ಷಣಗಳು ಮತ್ತು ವ್ಯಕ್ತಿತ್ವವನ್ನು ಅರಿಯಬಹುದು. ಹಿಂದೆ ಘಟಿಸಿದ, ಮುಂದೆ ಘಟಿಸುವ ವಿಚಾರಗಳ ಬಗ್ಗೆಯೂ ಸೂಚನೆ ನೀಡುತ್ತದೆ ಈ ಶಾಸ್ತ್ರ. ರಾಶಿ ಮತ್ತು ನಕ್ಷತ್ರಗಳನ್ನು ತಿಳಿದು ವ್ಯಕ್ತಿಯ ಸ್ವಭಾವವನ್ನು ಅರ್ಥ ಮಾಡಿಕೊಳ್ಳಬಹುದು. ಜಾತಕದಿಂದ ಜೀವನದಲ್ಲಾಗುವ ಏರು-ಪೇರು ಮತ್ತು ಇನ್ನಿತರೆ ಕುತೂಹಲಕಾರಿ ಸಂಗತಿಗಳನ್ನು ಅರಿಯುವುದು ಸುಲಭ| ಕೆಲವೊಮ್ಮೆ ಗ್ರಹ ಹಾಗೂ ನಕ್ಷತ್ರಗಳ ಪರಿವರ್ತನೆಗಳೂ ರಾಶಿ-ನಕ್ಷತ್ರಗಳ ಪರಿಸ್ಥಿತಿಯನ್ನು ಬದಲಾಯಿಸುತ್ತದೆ. ಬೇಕಾದರೆ ಅದೃಷ್ಟ ಖುಲಾಯಿಸುವಂತೆ ಮಾಡಬಹುದು, ಬೀದಿಗೆ ಬೀಳುವಂತೆಯೂ ಮಾಡುವಲ್ಲಿ ಯಶಸ್ವಿಯಾಗಬಹುದು.