ಈ 3 ರಾಶಿಗಳಿಗೆ ಮುಂದೆ ಏನಾಗುತ್ತದೆ ಎನ್ನುವ ಬಗ್ಗೆ ಮೊದಲೆ ಸಿಗುತ್ತೆ ಸೂಚನೆ!

Published : Jun 18, 2026, 10:22 PM IST

Zodiac Signs: ಜ್ಯೋತಿಷ್ಯದ ಪ್ರಕಾರ, ಕೆಲವರು ಅಸಾಧಾರಣವಾದ ಅಂತಃಪ್ರಜ್ಞೆಯನ್ನು ಹೊಂದಿರುತ್ತಾರೆ. ಅವರು ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಭವಿಷ್ಯದ ಘಟನೆಗಳನ್ನು ಗ್ರಹಿಸಬಹುದು ಮತ್ತು ಇನ್ನೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸಹ ಸುಲಭವಾಗಿ ಗ್ರಹಿಸಬಹುದು. 

PREV
15
ಈ ರಾಶಿಗಳ ಸಿಕ್ಸ್ತ್ ಸೆನ್ಸ್ ತುಂಬಾನೆ ಸ್ಟ್ರಾಂಗ್

ಪ್ರತಿಯೊಬ್ಬರೂ ಇನ್ನರ್ ವಾಯ್ಸ್ ಹೊಂದಿದ್ದೇವೆ, ಆದರೆ ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಗೆ ಸೇರಿದ ವ್ಯಕ್ತಿಗಳು ಅದ್ಭುತವಾದ ಅಂತಃಪ್ರಜ್ಞೆಯ ಶಕ್ತಿಯನ್ನು ಹೊಂದಿರುತ್ತಾರೆ, ಅವರು ಭವಿಷ್ಯದ ಘಟನೆಗಳು ಸಂಭವಿಸುವ ಮೊದಲೇ ಅವುಗಳನ್ನು ಗ್ರಹಿಸುತ್ತಾರೆ. ಅವರು ತಮ್ಮ ಸುತ್ತಲಿನವರ ನಿಜವಾದ ಸ್ವಭಾವವನ್ನು ಸಹ ಅರ್ಥಮಾಡಿಕೊಳ್ಳುವರು, ನಿಜವಾದ ಸ್ನೇಹಿತರು ಮತ್ತು ಶತ್ರುಗಳ ನಡುವೆ ಸುಲಭವಾಗಿ ವ್ಯತ್ಯಾಸವನ್ನು ಗುರುತಿಸಬಲ್ಲರು. ಅವರ ಬಳಿ ಸುಳ್ಳು ಹೇಳುವುದು ಅಸಾಧ್ಯ, ಏಕೆಂದರೆ ಅವರು ಒಂದು ಕ್ಷಣದಲ್ಲಿ ಸುಳ್ಳನ್ನು ಗುರುತಿಸಬಹುದು. ಯಾವ ರಾಶಿಯವರಿಗೆ ಸಿಕ್ಸ್ತ್ ಸೆನ್ಸ್ ಅದ್ಭುತವಾಗಿದೆ ಎನ್ನುವುದನ್ನು ನೋಡೋಣ.

25
ಮೀನ: ಕನಸುಗಳು ಮತ್ತು ಸೂಚನೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಪರಿಣಿತರು

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮೀನ ರಾಶಿಯನ್ನು ಆಳುವ ಗ್ರಹ ಗುರು ಮತ್ತು ಇದನ್ನು ನೀರಿನ ಅಂಶದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ರಾಶಿಯವರು ಸ್ವಭಾವತಃ ಬಹಳ ಸೂಕ್ಷ್ಮ ಮತ್ತು ಕಾಲ್ಪನಿಕವಾಗಿದೆ. ಅವರ ಮನಸ್ಸಿನಲ್ಲಿ ಇದ್ದಕ್ಕಿದ್ದಂತೆ ಬರುವ ಆಲೋಚನೆಗಳು ಅಥವಾ ಕನಸುಗಳು ಹೆಚ್ಚಾಗಿ ನಿಜವಾಗುತ್ತದೆ. ಈ ಜನರು ಇತರರ ಆಲೋಚನೆಗಳು ಮತ್ತು ಭಾವನೆಗಳನ್ನು ಸುಲಭವಾಗಿ ಓದುತ್ತಾರೆ. ಆದ್ದರಿಂದಲೇ ಅವರ ಮುಂದೆ ಯಾವ ಸುಳ್ಳು ಕೆಲಸ ಮಾಡುವುದಿಲ್ಲ.

35
ಕರ್ಕಾಟಕ: ಭಾವನೆಗಳ ಮೂಲಕ ಭವಿಷ್ಯದ ಸೂಚನೆಯನ್ನು ಗ್ರಹಿಸುವುದು

ಕರ್ಕಾಟಕವು ಚಂದ್ರನೊಂದಿಗೆ ಸಂಬಂಧಿಸಿದೆ, ಇದನ್ನು ಮನಸ್ಸು ಮತ್ತು ಭಾವನೆಗಳ ಆಳುವ ಗ್ರಹ ಎನ್ನಲಾಗುವುದು. ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ತಮ್ಮ ಸುತ್ತಮುತ್ತಲಿನ ಸಣ್ಣದೊಂದು ಬದಲಾವಣೆಗಳನ್ನು ಸಹ ತ್ವರಿತವಾಗಿ ಗ್ರಹಿಸುತ್ತಾರೆ. ಅದು ಯಾರೊಬ್ಬರ ನಡವಳಿಕೆಯಲ್ಲಿನ ಬದಲಾವಣೆಯಾಗಿರಲಿ ಅಥವಾ ಮುಂಬರುವ ಪ್ರಮುಖ ಕೌಟುಂಬಿಕ ಘಟನೆಯಾಗಿರಲಿ, ಕರ್ಕಾಟಕ ರಾಶಿಯವರು ಅದನ್ನು ಮೊದಲೇ ಗ್ರಹಿಸುತ್ತಾರೆ. ಅವರು ಸ್ಟ್ರಾಂಗ್ ಆಗಿರುವ ಸಿಕ್ತ್ಸ್ ಸೆನ್ಸ್ ಹೊಂದಿರುತ್ತಾರೆ.

45
ವೃಶ್ಚಿಕ: ರಹಸ್ಯಗಳು ಮತ್ತು ಗುಪ್ತ ವಿಷಯಗಳನ್ನು ಹಿಡಿಯುವ ಸಾಮರ್ಥ್ಯ

ವೃಶ್ಚಿಕ ಜ್ಯೋತಿಷ್ಯದಲ್ಲಿ ಅತ್ಯಂತ ನಿಗೂಢ ರಾಶಿಗಳಲ್ಲಿ ಒಂದಾಗಿದೆ. ಈ ರಾಶಿಯ ಆಡಳಿತ ಗ್ರಹ ಮಂಗಳ ಮತ್ತು ಈ ರಾಶಿಯ ಜನರು ಆಳವಾದ ಚಿಂತಕರು. ಈ ಜನರು ಇತರರ ಆಲೋಚನೆಗಳನ್ನು ಅರ್ಥಮಾಡಿಕೊಳ್ಳುವ ಅದ್ಭುತ ಕಲೆಯನ್ನು ಹೊಂದಿದ್ದಾರೆ. ಅವರ ಆರನೇ ಇಂದ್ರಿಯವನ್ನು ಬಹಳ ಪ್ರಬಲವೆಂದು ಪರಿಗಣಿಸಲಾಗಿದೆ. ಅನೇಕ ಬಾರಿ ಅವರು ಯಾವುದೇ ಪುರಾವೆಗಳಿಲ್ಲದೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಬಳಿಕ ಅವರ ನಿರ್ಧಾರ ಸರಿಯಾಗಿರುತ್ತದೆ.

55
ಈ ರಾಶಿಗಳ ಅಂತಃಪ್ರಜ್ಞೆ ಏಕೆ ಪ್ರಬಲವಾಗಿದೆ?

ಜ್ಯೋತಿಷ್ಯದ ಪ್ರಕಾರ, ಮೀನ, ಕರ್ಕ ಮತ್ತು ವೃಶ್ಚಿಕ ರಾಶಿಯವರು ನೀರಿನ ರಾಶಿಯವರು. ನೀರಿನ ಅಂಶವು ಭಾವನೆಗಳು, ಸೂಕ್ಷ್ಮತೆ ಮತ್ತು ಆಧ್ಯಾತ್ಮಿಕ ಶಕ್ತಿಯೊಂದಿಗೆ ಸಂಬಂಧ ಹೊಂದಿದೆ. ಅದಕ್ಕಾಗಿಯೇ ಈ ರಾಶಿಗಳಿಗೆ ಸೇರಿದ ವ್ಯಕ್ತಿಗಳು ಸೂಕ್ಷ್ಮ ಸೂಚನೆಗಳನ್ನು ಸುಲಭವಾಗಿ ಗ್ರಹಿಸಬಹುದು ಮತ್ತು ಭವಿಷ್ಯದ ಘಟನೆಗಳನ್ನು ಇತರರಿಗಿಂತ ಉತ್ತಮವಾಗಿ ನಿರೀಕ್ಷಿಸಬಹುದು.

Read more Photos on
click me!

Recommended Stories