ತಿರುಚಿ ಹತ್ರ ಇರೋ ಮಣಚನಲ್ಲೂರಿನ ಭೂಮಿನಾಥರ್ ದೇವಸ್ಥಾನ, ಮನೆ-ಜಾಗ ಕೊಡಿಸೋ ದೇವಸ್ಥಾನ. ಇಲ್ಲಿರೋ ಶಿವನ ಹಣೆಯಿಂದ ಬಿದ್ದ ಬೆವರಿನ ಹನಿಯಿಂದ ಹುಟ್ಟಿದ ಶಿವಗಣ, ಶಿವನ ಆಜ್ಞೆಯಂತೆ, ಜನ ಮನೆ ಕಟ್ಟೋಕೆ ಸಹಾಯ ಮಾಡ್ತಾನಂತೆ. ವಾಸ್ತು ಪುರುಷ ಅಂತ ಕರೆಯೋ ಈ ಶಿವಗಣಕ್ಕೆ ಶಿವನ ಅನುಗ್ರಹ ಸಿಕ್ಕಿದ್ದು ಇಲ್ಲೇ. ಮನೆ-ಜಾಗ ತಗೋಬೇಕು ಅಂತ ಅನ್ಕೋರು ಇಲ್ಲಿಗೆ ಬಂದು ವಿಶೇಷ ಪೂಜೆ ಮಾಡ್ಕೊಂಡು, ಅಮ್ಮನವರಿಗೂ, ಸ್ವಾಮಿಗೂ ಬೇಡ್ಕೊಂಡ್ರೆ, ಬೇಗನೆ ಮನೆ-ಜಾಗ ಸಿಗುತ್ತೆ.