ದ್ರೌಪದಿ ಮಾಡಿದ ಆ ತಪ್ಪಿನಿಂದಲೇ ಪುನರ್ಜನ್ಮದಲ್ಲಿ ಐವರು ಗಂಡಂದಿರ ಪತ್ನಿಯಾಗಿದ್ದು!

First Published | Jul 30, 2024, 9:50 PM IST

ಮಹಾಭಾರತದಲ್ಲಿ, ದ್ರೌಪದಿಯ ಹೆಸರನ್ನು ಅತ್ಯಂತ ಶಕ್ತಿಶಾಲಿ ಮಹಿಳೆಯರ ಸಾಲಿನಲ್ಲಿ ಸೇರಿಸಲಾಗಿದೆ. ಮಹಾಭಾರತದ ಕಥೆಯ ಪ್ರಕಾರ, ದ್ರೌಪದಿ ತನ್ನ ಹಿಂದಿನ ಜನ್ಮದಲ್ಲಿ ಬಡ ವಿಧವೆ ಬ್ರಾಹ್ಮಣರಾಗಿದ್ದಳು, ಅವರ ಪತಿ ಗಂಭೀರ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದ. ದ್ರೌಪದಿಯ ಈಡೇರದ ಆಸೆಗಳಿಂದಾಗಿಯೇ ಆಕೆ ಐವರು ಗಂಡನನ್ನು ತನ್ನ ಪುನರ್ಜನ್ಮದಲ್ಲಿ ಪಡೆದರು ಎನ್ನಲಾಗುತ್ತೆ. 
 

ಮಹಾಭಾರತದಲ್ಲಿ, ದ್ರೌಪದಿಯ ಪಾತ್ರವನ್ನು ಬಹಳ ಶಕ್ತಿಶಾಲಿ ಮಹಿಳೆ (powerful women) ಎಂದು ಪರಿಗಣಿಸಲಾಗಿದೆ. ದ್ರೌಪದಿ ರಾಜ ದ್ರುಪದನ ಯಜ್ಞ ಕುಂಡದಿಂದ ಬಂದವಳು, ಆದ್ದರಿಂದ ದ್ರೌಪದಿಯನ್ನು ಯಜ್ಞಸೇನಿ ಎಂದೂ ಕರೆಯಲಾಗುತ್ತದೆ. ಪೌರಾಣಿಕ ಕಥೆಗಳ ಪ್ರಕಾರ, ದ್ರೌಪದಿ ಪಾಂಡವರ ಪತ್ನಿ ಅಥವಾ ಪಾಂಚಾಲ ದೇಶದ ರಾಜಕುಮಾರಿ ಮಾತ್ರವಲ್ಲ, ದ್ರೌಪದಿಯನ್ನು ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳದಿದ್ದರೂ, ತಪ್ಪುಗಳ ವಿರುದ್ಧ ಧ್ವನಿ ಎತ್ತುವುದು ಮತ್ತು ನ್ಯಾಯಕ್ಕೆ ಬದ್ಧರಾಗಿರುವುದರಿಂದ ದ್ರೌಪದಿಯನ್ನು ಯೋಧ ಎನ್ನುತ್ತಾರೆ. ದ್ರೌಪದಿಯ ಹಿಂದಿನ ಜನ್ಮದ ಬಗ್ಗೆ ಮಾತನಾಡೋದಾದರೆ, ಹಿಂದಿನ ಜನ್ಮದಲ್ಲಿ ಬಡ ಬ್ರಾಹ್ಮಣ ಮಹಿಳೆಯಾಗಿದ್ದ ದ್ರೌಪದಿ ಹೆಚ್ಚಿನದನ್ನು ಪಡೆಯುವ ಹಂಬಲ ಅಥವಾ ದುರಾಸೆಯಿಂದ ಮಾಡಿದ ತಪ್ಪಿನಿಂದ, ಆಕೆ ತನ್ನ ಪುನರ್ಜನ್ಮದಲ್ಲಿ ಐವರು ಗಂಡಂದಿರನ್ನು ಪಡೆದಳು. ಈ ಕಥೆಯ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ. 
 

ಹಿಂದಿನ ಜನ್ಮದಲ್ಲಿ ಏನಾಗಿದ್ದಳು?
ಮಹಾಭಾರತದ ಆದಿಪರ್ವದಲ್ಲಿ ದ್ರೌಪದಿಯ ಜನನದ ಕಥೆಯಲ್ಲಿ, ದ್ರುಪದನ ಯಜ್ಞ ಕುಂಡದಲ್ಲಿ ಜನಿಸಿದ ದ್ರೌಪದಿ (Draupadi) ಹಿಂದಿನ ಜನ್ಮದಲ್ಲಿ ಬಡ ಬ್ರಾಹ್ಮಣಳಾಗಿದ್ದಳು ಎಂದು ವ್ಯಾಸ ಮಹರ್ಷಿಗಳು ಬರೆದಿದ್ದಾರೆ. ಅವಳ ಪತಿ ಯಾವಾಗಲೂ ಅನಾರೋಗ್ಯದಿಂದ ಬಳಲುತ್ತಿದ್ದನು, ಇದರಿಂದಾಗಿ ಬ್ರಾಹ್ಮಣ ಮಹಿಳೆ ತನ್ನ ಗಂಡನಿಂದ ಯಾವುದೇ ಸಂತೋಷವನ್ನು ಪಡೆಯಲು ಸಾಧ್ಯವಾಗಲಿಲ್ಲ. ಒಂದು ದಿನ ಈ ಮಹಿಳೆಯ ಪತಿ ಅನಾರೋಗ್ಯದಿಂದ ನಿಧನರಾದರು.ಇದರಿಂದ ಬಡ ಬ್ರಾಹ್ಮಣ ಮಹಿಳೆ ವಿಧವೆಯಾದಳು.  ಈ ಸಂದರ್ಭದಲ್ಲಿ ಆಕೆ ಅಯ್ಯೋ! ನನ್ನ ಪತಿ ಆರೋಗ್ಯವಾಗಿದ್ದರೆ ಮತ್ತು ಎಲ್ಲಾ ಸದ್ಗುಣಗಳಿಂದ ತುಂಬಿದ್ದರೆ, ತನ್ನ ಪ್ರತಿಯೊಂದು ಆಸೆಯೂ ಈಡೇರುತ್ತಿತ್ತು ಎಂದು ಪ್ರತಿದಿನವೂ ತನ್ನ ಈಡೇರದ ಆಸೆಗಳಿಗಾಗಿ ಪರಿತಪಿಸುತ್ತಿದ್ದಳು. 

Tap to resize

ಮುಂದಿನ ಜನ್ಮದ ಕುರಿತು ಹೆದರಿ ಮಹಾದೇವನ ತಪಸ್ಸು ಮಾಡಿದ ಮಹಿಳೆ
ಬ್ರಾಹ್ಮಣ ವಿಧವೆ (bramhin widow)ತನ್ನ ಗಂಡನ ಮರಣದ ನಂತರ, ಸಮಾಜದಿಂದ ಸಾಕಷ್ಟು ಚಿತ್ರಹಿಂಸೆ ಅನುಭವಿಸಬೇಕಾಯಿತು. ಅಲ್ಲದೆ, ಮನೆಯಲ್ಲಿ ಸಂಪಾದಿಸುವ ವ್ಯಕ್ತಿಯೂ ಇರಲಿಲ್ಲ, ಆದ್ದರಿಂದ ಈ ಮಹಿಳೆ ಯಾವಾಗಲೂ ಹಸಿವಿನಿಂದ ದಿನಗಳನ್ನು ಕಳೆಯಬೇಕಾಗಿತ್ತು. ಒಂದು ರಾತ್ರಿ ಮಲಗಿದ್ದಾಗ, ಈ ಮಹಿಳೆ ಮುಂದಿನ ಜನ್ಮದಲ್ಲಿ ತನಗೆ ಇದೇ ರೀತಿಯ ಏನಾದರೂ ಸಂಭವಿಸಿದರೆ, ತಾನು ಮತ್ತೊಮ್ಮೆ ಈಡೇರದ ಆಸೆಗಳ ಹೊರೆಯನ್ನು ಹೊರಬೇಕಾಗುತ್ತದೆ ಎಂದು ಭಾವಿಸಿದಳು, ಆದ್ದರಿಂದ ಬಡ ಮಹಿಳೆ ಶಿವನನ್ನ ನೆನೆದು ತಪಸ್ಸು ಮಾಡಿದಳು. 

ಸಂತೋಷಪಟ್ಟು ವರ ನೀಡಿದ ಶಿವ
ಬಡ ವಿಧವೆ ಮಹಿಳೆ ಮಹಾದೇವನನ್ನು (Lord Shiva) ನೆನೆದು ಕಟ್ಟುನಿಟ್ಟಾದ ತಪಸ್ಸು ಮಾಡಲು ಪ್ರಾರಂಭಿಸಿದಳು. ಅನೇಕ ವರ್ಷಗಳ ತಪಸ್ಸು ಮಾಡಿದ ನಂತರ, ಮಹಾದೇವನು ಪ್ರತ್ಯಕ್ಷನಾದ. ಮಹಾದೇವನು ತನ್ನ ಮುಂದೆ ನಿಂತಿರುವುದನ್ನು ನೋಡಿ, ಬಡ ವಿಧವೆ ತುಂಬಾ ಉತ್ಸುಕಳಾದಳು ಮತ್ತು ಮುಂದಿನ ಜನ್ಮದಲ್ಲಿ ಎಲ್ಲಾ ಸದ್ಗುಣಗಳಿಂದ ತುಂಬಿದ ಗಂಡ ತನಗೆ ಸಿಗಬೇಕೆಂದು, ಆತನಿಗೆ ಯಾವೆಲ್ಲಾ  ಗುಣಲಕ್ಷಣಗಳು ಇರಬೇಕು ಅನ್ನೋದನ್ನ ಹೇಳಲು ಪ್ರಾರಂಭಿಸಿದಳು. ದ್ರೌಪದಿ ಹೇಳಿದ ಗುಣಲಕ್ಷಣಗಳು ಒಬ್ಬ ಮನುಷ್ಯನಲ್ಲಿ ಇರೋದಕ್ಕೆ ಸಾಧ್ಯವೇ ಇರಲಿಲ್ಲ,  ಆದರೆ ಮಹಿಳೆ ತನ್ನ ಇಚ್ಛೆಯಲ್ಲಿ ದೃಢವಾಗಿದ್ದಳು ಮತ್ತು ವಿಭಿನ್ನ ಗುಣಲಕ್ಷಣಗಳನ್ನು ಹೊಂದಿರುವ ಗಂಡನ ವರವನ್ನು ಕೇಳಿದಳು. ಆಕೆ ಶಿವನನ್ನು ಕುರಿತು 'ಓ ಮಹಾದೇವ! ಮುಂದಿನ ಜನ್ಮದಲ್ಲಿ ಈ ಎಲ್ಲ ಗುಣಲಕ್ಷಣಗಳನ್ನು ಹೊಂದಿರುವ ಗಂಡನನ್ನು ನನಗೆ ಕರುಣಿಸು ಎಂದು ಉತ್ಸಾಹದಿಂದ ಐದು ಬಾರಿ ಅದೇ ವರವನ್ನು ಕೇಳಿದಳು.  ಮಹಾದೇವನು ತನ್ನ ಭಕ್ತರ ಪ್ರತಿಯೊಂದು ಆಸೆಯನ್ನು ಪೂರೈಸುತ್ತಾನೆ, ಆದ್ದರಿಂದ ಅವನು ಮಹಿಳೆ ಐದು ಬಾರಿ ಹೇಳಿದಂತೆ ವರ ನೀಡಿದನು. 

ದುರಾಸೆಯಿಂದಾಗಿ ಐವರ ಪತ್ನಿಯಾದ ದ್ರೌಪದಿ
ಹಿಂದಿನ ಜನ್ಮದ ಈಡೇರದ ಆಸೆಗಳಿಂದಾಗಿ, ಮತ್ತು ಹಿಂದಿನ ಜನ್ಮದಲ್ಲಿ ಹಂಬಲದಿಂದಾಗಿ ದ್ರೌಪದಿ ತನ್ನ ಮರು ಹುಟ್ಟಿನಲ್ಲಿ ಐವರು ಗಂಡಂದಿರನ್ನು  ಪಡೆದಳು. ನೀವು ಅದನ್ನು ಮಾನವ ದೌರ್ಬಲ್ಯ ಅಥವಾ ಅತಿಯಾದ ಹಂಬಲ ಎಂದು ಕರೆಯಬಹುದು. ಈ ಅತಿಯಾದ ಹಂಬಲವೇ ಆಕೆಗೆ ಐವರ ಗಂಡಂದಿರನ್ನು ನೀಡಿತು. 

ಮಹಾಭಾರತದಲ್ಲಿ (Mahabharat), ಪಾಂಚಾಲ ದೇಶದ ರಾಜ ದ್ರುಪದ ತನ್ನ ಮಗಳು ದ್ರೌಪದಿಯನ್ನು ಸ್ವತಃ ಸೃಷ್ಟಿಸಿದನು. ನಂತರ ತನ್ನ ಮಗಳಿಗಾಗಿ ಸ್ವಯಂವರ ಏರ್ಪಡಿಸಿದನು. ಈ ಸ್ವಯಂವರದ ಷರತ್ತು ಏನೆಂದರೆ, ನೀರಿನಲ್ಲಿ ಮೀನಿನ ಪ್ರತಿಬಿಂಬವನ್ನು ಯಾವುದೇ ರಾಜ ಅಥವಾ ರಾಜಕುಮಾರ ನೋಡಿ, ಮೇಲಿರುವ ಮೀಲಿನ ಕಣ್ಣಿಗೆ ಸರಿಯಾಗಿ ಬಿಲ್ಲು ಬಾಣ ಹೂಡಿದರೆ ದ್ರೌಪದಿ ಅವನನ್ನು ತನ್ನ ವರನಾಗಿ ಆಯ್ಕೆ ಮಾಡುತ್ತಾಳೆ. ದ್ರೌಪದಿಯ ಸ್ವಯಂವರದಲ್ಲಿ ಅನೇಕ ರಾಜರು ಮತ್ತು ಮಹಾರಾಜರು ದೂರದೂರದಿಂದ ಬಂದರು. ಅವರಲ್ಲಿ ಅರ್ಜುನನೂ ಒಬ್ಬನಾಗಿದ್ದ. ಅರ್ಜುನನು ಈ ಷರತ್ತನ್ನು ಪೂರೈಸಿ ಮೀನಿನ ಕಣ್ಣನ್ನು ಗುರಿಯಾಗಿಸಿಕೊಂಡು ಬಿಲ್ಲು ಹೊಡೆದು ಶರತ್ತು ಗೆದ್ದನು. ಹಾಗಾಗಿ ದ್ರೌಪದಿಯನ್ನು ಮದುವೆಯಾದನು ಅರ್ಜುನ. 
 

ಕುಂತಿಯ ಆಜ್ಞೆಯ ಮೇರೆಗೆ, ದ್ರೌಪದಿ ಐದು ಪಾಂಡವರನ್ನು ಮದುವೆಯಾದಳು
ಅರ್ಜುನನು ಎಲ್ಲ ಸಹೋದರರು ಮತ್ತು ದ್ರೌಪದಿಯೊಂದಿಗೆ ಕಾಡಲ್ಲಿ ತಮ್ಮ ಕುಠೀರವನ್ನು  ತಲುಪಿದಾಗ, ಪಾಂಡವರ ತಾಯಿ ಕುಂತಿ ಕೆಲವು ಕೆಲಸಗಳಲ್ಲಿ ತುಂಬಾ ಬ್ಯುಸಿಯಾಗಿದ್ದಳು. ಅರ್ಜುನ ಹೊರಗಿನಿಂದ 'ಅಮ್ಮಾ! ನಾನು ನಿನಗಾಗಿ ಏನನ್ನು ತೆಗೆದುಕೊಂಡು ಬಂದಿರುವೆ ನೋಡು ಎಂದನು. ಆದರೆ ಅರ್ಜುನನ ಮಾತನ್ನು ಕೇಳದೆ ಕುಂತಿ ಒಳಗಿನಿಂದಲೇ ನೀವು ಏನನ್ನು ತಂದಿರುವೆಯೋ ಅದನ್ನ ಐವರು ಸಹೋದರರೊಂದಿಗೆ ಹಂಚಿಕೋ (share with your brothers) ಎಂದಳು. ಆವಾಗ ಅರ್ಜುನನಿಗೆ ತಾನು ಹೇಳಿದ ಮಾತಿನ ತಪ್ಪಿನ ಅರಿವಾಯಿತು. 

ಕುಂತಿಗೆ ದ್ರೌಪದಿಯ ಬಗ್ಗೆ ತಿಳಿದಾಗ, ಆಕೆ ಕೂಡ ತುಂಬಾ ಕೋಪಗೊಂಡು, ಮಹಿಳೆಯನ್ನು ವಸ್ತುವಿನಂತೆ ಮಾತನಾಡಿದ್ದು ತುಂಬಾ ತಪ್ಪು ಎಂದಳು. ಅಲ್ಲದೇ ನಾನೀನ ಹೇಳಿಯಾಗಿದೆ, ಈಗ ಐವರು ದ್ರೌಪದಿಯನ್ನು ಮದುವೆಯಾಗಬೇಕು ಎಂದು ಕೇಳಿಕೊಂಡಳು. ಈ ಮಾತಿ ಕೇಳಿ ದ್ರೌಪದಿ ಕೋಪಗೊಂಡಳು. ಆವಾಗ  ಶ್ರೀ ಕೃಷ್ಣ ಮತ್ತು ವ್ಯಾಸರು ದ್ರೌಪದಿಗೆ ಹಿಂದಿನ ಜನ್ಮದ ರಹಸ್ಯವನ್ನು ಹೇಳಿದರು, ಈ ಆಸೆ ಅವಳದೇ, ಅದು ಈ ಜನ್ಮದಲ್ಲಿ ಈಡೇರಿದೆ ಎಂದಳು. ಈ ರೀತಿಯಾಗಿ, ದ್ರೌಪದಿ ಐದು ಪಾಂಡವರಾದ ಯುಧಿಷ್ಠಿರ, ಅರ್ಜುನ, ಭೀಮ, ನಕುಲ ಮತ್ತು ಸಹದೇವರನ್ನು ಮದುವೆಯಾದಳು 
 

Latest Videos

click me!