ಕನಸಲ್ಲಿ ಇವನ್ನು ಕಂಡ್ರೆ ಸಾವು ಸನ್ನಿಹಿತ! ಅದೇನು ಕಾಣಬಾರದ್ದು?

First Published | Mar 29, 2024, 5:07 PM IST

ಕೆಲವೊಂದು ಕನಸುಗಳು ಸಾವಿನ ಸೂಚನೆ ನೀಡುತ್ತವೆ. ಅವು ನಮ್ಮ ಸಾವೇ ಆಗಿರಬಹುದು ಅಥವಾ ಆಪ್ತರ ಸಾವು ಆಗಿರಬಹುದು. ಹಾಗಾಗಿ ಇಲ್ಲಿ ತಿಳಿಸಿದ ಕೆಲವು ರೀತಿಯ ಕನಸುಗಳು ಬಿದ್ರೆ ತುಂಬಾನೆ ಕೇರ್ ಫುಲ್ ಆಗಿರಿ. 
 

ಸಾವು (death) ಒಂದು ಬದಲಾಯಿಸಲಾಗದ ವಾಸ್ತವ, ಅದನ್ನು ಇಡೀ ಬ್ರಹ್ಮಾಂಡದ ಯಾವುದೇ ಶಕ್ತಿಯು ತಪ್ಪಿಸಲು ಸಾಧ್ಯವಿಲ್ಲ. ಈ ಅಂತಿಮ ಸತ್ಯವನ್ನು ಜಗತ್ತಿನಲ್ಲಿ ಯಾವ ವ್ಯಕ್ತಿಯೂ ಅಲ್ಲಗಳೆಯಲಾರ. ಆದರೆ, ಸಾವು ಬರುವ ಮೊದಲು ಕೆಲವು ಚಿಹ್ನೆಗಳನ್ನು ನೀಡುತ್ತದೆ. ಈ ಚಿಹ್ನೆಗಳು ಯಾವುದೇ ರೀತಿಯದ್ದಾಗಿರಬಹುದು ಎಂದು ಗರುಡ ಪುರಾಣದಲ್ಲಿ (Garuda Purana) ಹೇಳಲಾಗಿದೆ. ಅದು ಕನಸುಗಳ ಮೂಲಕ ಅಥವಾ ಅವರ ಸುತ್ತಲೂ ನಡೆಯುತ್ತಿರುವ ಘಟನೆಗಳ ಮೂಲಕ ಸೂಚನೆ ನೀಡುತ್ತೆ. ಇಂದು ನಾವು ಸಾವನ್ನು ಸೂಚಿಸುವ ಅಂತಹ 5 ಕನಸುಗಳ ಬಗ್ಗೆ ತಿಳಿಯೋಣ.

ಡೋಲು ಬಾರಿಸೋದು ಅಪಶಕುನ
ಕನಸಿನಲ್ಲಿ ಡೋಲು ಬಾರಿಸೋದನ್ನು ನೋಡುವುದು ಶುಭವಲ್ಲ. ಅಂತಹ ಕನಸನ್ನು ಕಾಣುವ ವ್ಯಕ್ತಿಯು ಅಥವಾ ಅವನ ಆಪ್ತರು ಮಾನಸಿಕ ಒತ್ತಡದಿಂದ (Mental Stress) ಬಳಲಬೇಕಾಗುತ್ತದೆ. 

Tap to resize

ಕೂದಲು ಬೋಳಿಸೋದು ಅಶುಭ
ಕನಸಿನಲ್ಲಿ ಯಾರಾದರೂ ಕೇಶ ಮುಂಡನ (head shave) ಮಾಡೋದನ್ನು ನೋಡುವುದು ಒಳ್ಳೆಯದಲ್ಲ. ಇದು ಸಂಭವಿಸಿದಲ್ಲಿ, ಕುಟುಂಬದಲ್ಲಿ ಯಾರದೋ ಸಾವಿನ ಸುದ್ದಿಯನ್ನು ಕೇಳಬಹುದು.
 

ನಗ್ನ ಮಹಿಳೆ
ಬಟ್ಟೆಯಿಲ್ಲದ ನಗ್ನ ಮಹಿಳೆಯನ್ನು (nude women) ನೋಡುವ ಕನಸು ಕಾಣುವುದು ತುಂಬಾ ಅಶುಭ. ಕನಸಿನಲ್ಲಿ ನಗ್ನ ಮಹಿಳೆ ಲೈಂಗಿಕ ಕ್ರಿಯೆ (Secual Intercourse) ನಡೆಸುವುದನ್ನು ನೋಡುವುದು ಸಾವಿನ ಸೂಚಕವೆಂದು ಪರಿಗಣಿಸಲಾಗುತ್ತದೆ.
 

ಮುರಿದ ವಿಗ್ರಹ ನೋಡುವುದು
ಕನಸಿನಲ್ಲಿ ದೇವರನ್ನು ನೋಡುವುದು ಶುಭ ಫಲಿತಾಂಶಗಳನ್ನು ನೀಡುತ್ತದೆ, ಜೊತೆಗೆ ವ್ಯಕ್ತಿಯ ಜೀವನದಲ್ಲಿ ಸಂತೋಷ ತರುತ್ತದೆ. ಅದೇ ಸಮಯದಲ್ಲಿ, ನಿಮ್ಮ ಕನಸಿನಲ್ಲಿ ದೇವರ ವಿಗ್ರಹವು ಮುರಿದಿರುವುದನ್ನು (broken statue)ನೀವು ನೋಡಿದರೆ, ಅದನ್ನು ಒಳ್ಳೆಯದು ಎಂದು ಪರಿಗಣಿಸಲಾಗುವುದಿಲ್ಲ. ಇದು ಸಂಭವಿಸಿದರೆ, ಕೆಟ್ಟ ಸುದ್ದಿ ಎಲ್ಲಿಂದಲೋ ಕೇಳಬಹುದು ಅನ್ನೋದನ್ನು ಸೂಚಿಸುತ್ತೆ.

ಕನಸಿನಲ್ಲಿ ಮರ ಬೀಳುವುದು
ಕನಸಿನಲ್ಲಿ ಮರವು ಹಠಾತ್ ಬೀಳುವುದು ಬಹಳ ಅಶುಭದ ಸಂಕೇತ. ಅಲ್ಲದೆ, ನೀವು ಎತ್ತರದಿಂದ ಬೀಳುವುದನ್ನು ನೋಡುವುದು ಸಹ ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗುವುದಿಲ್ಲ. ಇದು ನಿಮ್ಮ ಸ್ವಂತ ಸಾವನ್ನು ಸೂಚಿಸುತ್ತದೆ.

ಯಾರಾದರೂ ಸಾಯುವುದನ್ನು ನೋಡುವ ಕನಸುಗಳು
ಕನಸಿನಲ್ಲಿ ಯಾರಾದರೂ ಸಾಯುವುದನ್ನು ನೋಡುವುದು ಅಥವಾ ಶವಸಂಸ್ಕಾರದ ಕನಸು ಕಾಣುವುದು ಸಹ ಸಾವಿಗೆ ಹತ್ತಿರವಿರುವ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂತಹ ಕನಸುಗಳು ಮತ್ತೆ ಮತ್ತೆ ಬಂದರೆ, ಅದು ಕುಟುಂಬದಲ್ಲಿಯೇ ಯಾರದೋ ಸಾವಿನ ಸಂಕೇತ ಎಂದು ಅರ್ಥಮಾಡಿಕೊಳ್ಳಬೇಕು ಎಂದು ಹೇಳಲಾಗುತ್ತದೆ.

Latest Videos

click me!