ರಸ್ತೆಯಲ್ಲಿ ಶವ ಯಾತ್ರೆ ನೋಡೋದು ಶುಭವೋ? ಅಶುಭವೋ?

Published : May 07, 2025, 08:30 PM ISTUpdated : May 08, 2025, 09:52 AM IST

ರಸ್ತೆಯಲ್ಲಿ ಹೋಗುವಾಗ ಅಂತ್ಯಕ್ರಿಯೆಯ ಮೆರವಣಿಗೆಯನ್ನು ನೋಡುವುದು ಶುಭವೋ ಅಶುಭವೋ? ಶಾಸ್ತ್ರಗಳು ಏನು ಹೇಳುತ್ತವೆ ನೋಡೋಣ.  

PREV
17
ರಸ್ತೆಯಲ್ಲಿ ಶವ ಯಾತ್ರೆ ನೋಡೋದು ಶುಭವೋ? ಅಶುಭವೋ?

ಮನೆಯಿಂದ ಹೊರಡುವಾಗ ದೇವರ ಮುಂದೆ ಕೈಜೋಡಿಸಿ ಹಿರಿಯರ ಆಶೀರ್ವಾದ ಪಡೆಯಬೇಕು (blessings) ಎಂದು ಹೇಳಲಾಗುತ್ತದೆ. ಇದರಿಂದ ನಮ್ಮ ಪ್ರಯಾಣ ಶುಭವಾಗುತ್ತೆ, ನಾವು ಅಂದುಕೊಂಡ ಕೆಲಸ ನಿರ್ವಿಘ್ನವಾಗಿ ನೆರವೇರುತ್ತೆ ಎನ್ನುವ ನಂಬಿಕೆ ಇದೆ. 
 

27

ಆದರೆ ಕೆಲವೊಮ್ಮೆ ನಾವು ರಸ್ತೆಯಲ್ಲಿ ಹೋಗುವಾಗ, ನಡೆಯುವ ಒಂದೊಂದು ಘಟನೆಗಳು ನಮಗೆ ನಾವು ಮಾಡುವ ಕೆಲಸದಲ್ಲಿ ಶುಭವಾಗುತ್ತದೆಯೋ ಅಥವಾ ಅಶುಭವಾಗುತ್ತದೆಯೋ ಎನ್ನುವ ಸಂಶಯವನ್ನು ಹುಟ್ಟಿಸುತ್ತದೆ. 
 

37

ಹಲವು ಬಾರಿ ನಾವು ರಸ್ತೆಯಲ್ಲಿ ಅಂತ್ಯಕ್ರಿಯೆಯ ಮೆರವಣಿಗೆ (funeral procession) ಹೋಗುವುದನ್ನು ನೋಡುತ್ತೇವೆ. ಇದಾದ ನಂತರ ನಮ್ಮ ಮನಸ್ಸಿನಲ್ಲಿ ಈ ರೀತಿಯ ಅಂತ್ಯಕ್ರಿಯೆಯ ಮೆರವಣಿಗೆಯನ್ನು ನೋಡುವುದು ಶುಭವೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಥವಾ ಇದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
 

47

ಆದರೆ ನೀವು ಈ ಬಗ್ಗೆ ಭಯ ಪಡಬೇಕಾದ ಅವಶ್ಯಕತೆ ಇಲ್ಲ. ಯಾಕಂದ್ರೆ ಜ್ಯೋತಿಷ್ಯದ ಪ್ರಕಾರ, ರಸ್ತೆಯಲ್ಲಿ ಅಂತ್ಯಕ್ರಿಯೆಯ ಮೆರವಣಿಗೆ ಕಂಡುಬಂದರೆ, ಅದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ.
 

57

ನಂಬಿಕೆಗಳ ಪ್ರಕಾರ, ರಸ್ತೆಯಲ್ಲಿ ಶವ ಯಾತ್ರೆಯನ್ನು ನೋಡುವುದು ಎಂದರೆ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ ಎಂದರ್ಥ. ನೀವು ಅಂದುಕೊಂಡ ಕೆಲಸಗಳು ಸರಾಗವಾಗಿ ನಡೆಯಲಿದೆ ಅನ್ನೋದನ್ನು ಸಹ ಇದು ಸೂಚಿಸುತ್ತೆ. 
 

67

ಅಷ್ಟೇ ಅಲ್ಲ ರಸ್ತೆಯಲ್ಲಿ ಶವ ಯಾತೆಯನ್ನು ನೋಡುವುದು ನಿಮ್ಮ ಎಲ್ಲಾ ನಿಂತು ಹೋದ, ಕೆಟ್ಟು ಹೋದ ಕೆಲಸಗಳು ಮುಂಬರುವ ದಿನಗಳಲ್ಲಿ ಶೀಘ್ರವಾಗಿ ಮುಗಿಯುತ್ತೆ. ಇದರಿಂದ ನೀವು ನೆಮ್ಮದಿಯಾಗಿರಲು ಸಾಧ್ಯ ಆಗುತ್ತೆ. 
 

77

ಆದ್ದರಿಂದ, ಇನ್ನು ಮುಂದೆ ನೀವು ರಸ್ತೆಯಲ್ಲಿ ಅಂತ್ಯಕ್ರಿಯೆಯ ಮೆರವಣಿಗೆಯನ್ನು ನೋಡಿದಾಗಲೆಲ್ಲಾ, ನಿಮ್ಮ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ಬರುವ ಬದಲು, ಕೈಗಳನ್ನು ಜೋಡಿಸಿ ನಮಸ್ಕರಿಸಿ ಮುಂದೆ ಸಾಗಿ.

Read more Photos on
click me!

Recommended Stories