ಪ್ರೀತಿ(Love) ಒಂದು ಸುಂದರ ಭಾವನೆ. ಯಾವುದೇ ಸಂಬಂಧವು ದೀರ್ಘಕಾಲ ಉಳಿಯಬೇಕಾದರೆ, ಅದನ್ನು ಸರಿಯಾಗಿ ನಡೆಸಲು ಪ್ರೀತಿ ಬೇಕು. ಪ್ರೀತಿಯು ಜೀವನವನ್ನು ಇನ್ನಷ್ಟು ಸುಂದರಗೊಳಿಸುತ್ತೆ. ಪ್ರೀತಿಯಿಲ್ಲದೆ, ಯಾವುದೇ ಸಂಬಂಧವು ಸುಂದರವಾಗಿರಲು ಸಾಧ್ಯವಿಲ್ಲ. ಆದರೆ ಈ ಪ್ರೀತಿಯ ವಿಷಯದಲ್ಲಿ ಕೆಲವರು ತುಂಬಾ ಅದೃಷ್ಟವಂತರಾಗಿರ್ತಾರೆ. ಅವರು ಪ್ರೀತಿಗೆ ಬದಲಾಗಿ ತಮ್ಮ ಸಂಗಾತಿಯಿಂದ ಪ್ರೀತಿಯನ್ನು ಪಡೆಯುತ್ತಾರೆ. ಅವರು ಪ್ರೀತಿಗಾಗಿ ಜೀವಿಸುತ್ತಾನೆ ಮತ್ತು ತನ್ನ ಪ್ರೀತಿಯನ್ನು ತನ್ನ ಎಲ್ಲಾ ಶಕ್ತಿಯೊಂದಿಗೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾನೆ.