ಶ್ರೀಮಂತರಲ್ಲಿ ಶ್ರೀಮಂತರೂ ಈ ಮೂರು ಕೆಲಸ ಮಾಡಿದ್ರೆ ಬಿಕಾರಿಗಳಾಗಬಹುದು!

First Published Feb 6, 2023, 5:17 PM IST

ಬಹಳಷ್ಟು ಹಣವನ್ನು ಹೊಂದಿದ್ದ ನಂತರವೂ ಕೆಲವು ಜನರು ಸ್ವಲ್ಪ ಸಮಯದ ನಂತರ ಬಡವರಾಗುವುದನ್ನು ನಾವು ನೋಡುತ್ತೇವೆ. ಇದು ಹೇಗೆ ಸಂಭವಿಸುತ್ತದೆ ಎಂಬುದರ ಬಗ್ಗೆ ಆಚಾರ್ಯ ಚಾಣಕ್ಯನು ತನ್ನ ನೀತಿಗಳಲ್ಲಿ ವಿವರಿಸಿದ್ದಾನೆ. ನಾವು ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಮತ್ತು ಮರೆತೂ ಕೂಡ ಈ ಕೆಲಸವನ್ನು ಮಾಡಬಾರದು.
 

ಆಚಾರ್ಯ ಚಾಣಕ್ಯನ (Chanakya Niti) ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿದೆ. ಅವರು ಒಬ್ಬ ಮಹಾನ್ ರಾಜಕಾರಣಿ ಮತ್ತು ಅರ್ಥಶಾಸ್ತ್ರಜ್ಞ. ಅವರು ತಮ್ಮ ನೀತಿಗಳಲ್ಲಿ ಹಣಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹೇಳಿದ್ದಾರೆ, ಅದು ಇಂದಿನ ಸಮಯದಲ್ಲೂ ಪ್ರಸ್ತುತ. ಆಚಾರ್ಯ ಚಾಣಕ್ಯನು ಬರೆದ ನೀತಿಶಾಸ್ತ್ರದಲ್ಲಿ, ಜೀವನ, ಹಣ, ಸಮಾಜ (society), ಸಂಬಂಧಗಳು (Relationship), ವೈಯಕ್ತಿಕ ಜೀವನ (Personal Life), ಕೆಲಸದ ಸ್ಥಳ ಇತ್ಯಾದಿಗಳಿಗೆ ಸಂಬಂಧಿಸಿದ ವಿವಿಧ ಅಂಶಗಳ ಬಗ್ಗೆ ಪ್ರಮುಖ ವಿಷಯಗಳನ್ನು ಹೇಳಲಾಗಿದೆ. 

ಆಚಾರ್ಯ ಚಾಣಕ್ಯನು ತನ್ನ ನೀತಿಯೊಂದರಲ್ಲಿನ ವಿಷಯಗಳ ಬಗ್ಗೆ ಹೇಳಿದ್ದಾನೆ, ಅದನ್ನು ಮಾಡೋದ್ರಿಂದ ಶ್ರೀಮಂತರು ಬೇಗ ಬಡವರಾಗುತ್ತಾರೆ. ನಾವು ಅಂತಹ ತಪ್ಪುಗಳನ್ನು ಮಾಡಬಾರದು. ಯಾವ ಕೆಲಸ ಮಾಡೋದ್ರಿಂದ ಶ್ರೀಮಂತರನ್ನು ಬಡವರನ್ನಾಗಿ (rich to poor) ಮಾಡುವ ವಿಷಯಗಳು ಯಾವುವು ಅನ್ನೋದನ್ನು ತಿಳಿಯೋಣ.

Latest Videos


ಹಣವನ್ನು ತಪ್ಪು ಸ್ಥಳದಲ್ಲಿ ಹಾಕುವವರು

ಆಚಾರ್ಯ ಚಾಣಕ್ಯನ ಪ್ರಕಾರ, ಸ್ವಲ್ಪ ಹಣವನ್ನು ತಮ್ಮ ಕುಟುಂಬದ ಪಾಲನೆಗಾಗಿ ಮತ್ತು ಇತರರ ಯೋಗಕ್ಷೇಮಕ್ಕಾಗಿ ಬಳಸಬೇಕು. ಇದರ ನಂತರ, ಉಳಿದ ಹಣವನ್ನು ಹೂಡಿಕೆ ಮಾಡಬೇಕು ಇದರಿಂದ ಕೆಟ್ಟ ಸಮಯದಲ್ಲಿ ನಮಗೆ ಉಪಯುಕ್ತವಾಗಬಹುದು. ಆದರೆ ಜೂಜಾಟ, ಬೆಟ್ಟಿಂಗ್ (betting) ಇತ್ಯಾದಿಗಳಲ್ಲಿ ಮರೆತು ಕೂಡ ಹಣ ಇನ್ವೆಸ್ಟ್ ಮಾಡಬಾರದು. ಈ ಕ್ರಿಯೆಗಳಿಗೆ ವ್ಯಸನಿಯಾಗುವ ಜನರು, ಎಷ್ಟೇ ಶ್ರೀಮಂತರಾಗಿದ್ದರೂ, ಬಹಳ ಬೇಗ ಬಡವರಾಗುತ್ತಾರೆ.

ಹಣವನ್ನು ದುರುಪಯೋಗಪಡಿಸಿಕೊಳ್ಳುವವರು

ಹಣವನ್ನು ಯಾವಾಗಲೂ ಇತರರ ಒಳಿತಿಗಾಗಿ ಬಳಸಬೇಕು ಮತ್ತು ಅವರಿಗೆ ಹಾನಿ ಮಾಡಬಾರದು. ಕೆಲವರ ಬಳಿ ಎಷ್ಟು ಹಣವಿರುತ್ತೆ ಅಂದ್ರೆ ಅವರು ಅದನ್ನು ಇತರರಿಗೆ ಹಾನಿ ಮಾಡಲು ಬಳಸಲು ಪ್ರಾರಂಭಿಸುತ್ತಾರೆ. ಲಕ್ಷ್ಮಿ ದೇವಿಯು (Lakshmi Devi) ಅಂತಹ ಜನರ ಮೇಲೆ ಕೋಪಗೊಳ್ಳುತ್ತಾಳೆ ಮತ್ತು ಬಹು ಬೇಗ ಅಲ್ಲಿಂದ ಹೊರಡುತ್ತಾಳೆ. ಅಂತಹ ಜನರು ಬಡತನದ ಅಂಚನ್ನು ತಲುಪುತ್ತಾರೆ. ಜನರಿಗೆ ಅವರ ಬಗ್ಗೆ ಯಾವುದೇ ಸಹಾನುಭೂತಿ ಇರೋದಿಲ್ಲ.

ಹಣವನ್ನು ಉಳಿಸದವರು
ಕೆಲವು ಜನರು ತುಂಬಾ ಐಷರಾಮಿ ಜೀವನ (luxry life) ನಡೆಸುವ ಸ್ವಭಾವವನ್ನು ಹೊಂದಿರುತ್ತಾರೆ, ಅವರು ಗಳಿಸುವಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಉಳಿತಾಯದ ಹೆಸರಿನಲ್ಲಿ ಅವರ ಬಳಿ ಏನೂ ಉಳಿಯೋದಿಲ್ಲ. ವ್ಯಕ್ತಿಯು ತನ್ನ ಭವಿಷ್ಯ ಮತ್ತು ಕೆಟ್ಟ ಸಮಯಗಳಿಗಾಗಿ ಹಣವನ್ನು ಉಳಿಸಬೇಕು. ಯೋಚಿಸದೆ ತಮ್ಮ ಹವ್ಯಾಸಗಳನ್ನು, ಅಸೆಗಳನ್ನು ಪೂರೈಸಲು ಹಣವನ್ನು ಖರ್ಚು ಮಾಡುವ ಜನರ ಬಳಿ ಹಣವೇ ಉಳಿಯೋದಿಲ್ಲ.

click me!