ವಯಸ್ಸಾದಂತೆ ಎಲ್ಲರೂ ವೃದ್ಧಾಪ್ಯಕ್ಕೆ ಕಾಲಿಡುತ್ತಾರೆ. ಆದರೆ ಕೆಲವರಲ್ಲಿ ವಯಸ್ಸಾದರೂ ಚಟುವಟಿಕೆ, ಉತ್ಸಾಹ ಕಡಿಮೆಯಾಗುವುದಿಲ್ಲ. ವಯಸ್ಸು ಕೇವಲ ಸಂಖ್ಯೆ ಅಷ್ಟೇ. ಯೌವ್ವನದಿಂದ ಕೂಡಿರುತ್ತಾರೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ, ಅವರ ಮನಸ್ಸು ಯೌವ್ವನದಿಂದ ಮಿಂಚುತ್ತಿರುತ್ತದೆ.
ಇವರು ವೈನ್‌ನಂತೆ. ಅಂದರೆ... ವೈನ್ ಎಷ್ಟು ಹಳೆಯದಾದಷ್ಟೂ ಅದರ ಮೌಲ್ಯ ಹೆಚ್ಚಾಗುವಂತೆ, ಇವರು ವಯಸ್ಸಾದಂತೆ ಯೌವ್ವನದಿಂದ ಕೂಡಿರುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ಹುಟ್ಟಿದವರಲ್ಲಿ ಈ ಗುಣಗಳು ಕಂಡುಬರುತ್ತವೆ. ನಾಲ್ಕು ದಿನಾಂಕಗಳಲ್ಲಿ ಹುಟ್ಟಿದವರು ಕಾಲಾನಂತರದಲ್ಲಿ ಉತ್ತಮಗೊಳ್ಳುವ ಗುಣಗಳನ್ನು ಹೊಂದಿರುತ್ತಾರೆ.