ಪಂಚತಂತ್ರದ (Panchatantra) ಲೇಖಕ ವಿಷ್ಣು ಗುಪ್ತ. ಪಂಚತಂತ್ರದಲ್ಲಿ ಹಲವಾರು ವಿಷಗಳನ್ನು ತಿಳಿಸಲಾಗಿದೆ. ಇದರಲ್ಲಿ ಜೀವನದ ಬಗ್ಗೆ ಸಹ ತಿಳಿಸಲಾಗಿದೆ. ಪಂಚತಂತ್ರದ ಅನುಸಾರ ಕೆಲವು ವಿಷಯಗಳು ತಾಯಿಯ ಗರ್ಭದಲ್ಲೆ ನಿರ್ಧಾರವಾಗುತ್ತದೆ. ಅದನ್ನು ನಾವು ನಿರ್ಧರಿಸೋಕೆ ಸಾಧ್ಯವಾಗೋದಿಲ್ಲ.
ಪಂಚತಂತ್ರದ ಶ್ಲೋಕ
ಆಯುಃ ಕರ್ಮ ಚ ವಿತ್ತಂಚ ವಿದ್ಯಾ ನಿಧನಮೇವ ಚ |
ಪಂಚೈತಾನಿ ಹಿ ಸೃಜ್ಯಂತೆ
ಗರ್ಭಸ್ಥಸ್ಯೈವ ದೇಹಿನಃ॥.
ಒಬ್ಬ ವ್ಯಕ್ತಿಯ ಆಯುಷ್ಯ, ಹಿಂದಿನ ಜನ್ಮದಿಂದ ಬರುವ ಕರ್ಮಫಲ, ಹಣ, ಗಳಿಸಬಹುದಾದ ವಿದ್ಯೆ, ಮರಣ.ಈ ಐದು ವಿಷಯಗಳು ಶಿಶು ತಾಯಿಯ ಗರ್ಭದಲ್ಲಿರುವಾಗಲೇ ನಿರ್ಣಯವಾಗಿರುತ್ತದೆ.
ಆಯಸ್ಸು ನಿಮ್ಮ ಕೈಯಲ್ಲಿ ಇಲ್ಲ
ಪಂಚತಂತ್ರದ ಅನುಸಾರ ನಿಮ್ಮ ಆಯಸ್ಸು (lifespan) ಎಷ್ಟು ಇರುತ್ತೆ, ಅನ್ನೋದನ್ನು ನೀವಾಗಿ ನಿರ್ಧರಿಸೋಕೆ ಸಾಧ್ಯವೇ ಇಲ್ಲ. ಮಗು ತಾಯಿಯ ಗರ್ಭದಲ್ಲಿರುವ ಸಂದರ್ಭದಲ್ಲೇ ಮಗುವಿನ ಆಯಸ್ಸಿನ ಬಗ್ಗೆ ದೇವರು ನಿರ್ಧರಿಸಿರುತ್ತಾರೆ.
ಕರ್ಮದ ನಿರ್ಧಾರ ಮಾಡಲು ಸಾಧ್ಯವಿಲ್ಲ
ನೀವು ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮದ ಫಲವನ್ನು ನೀವು ಈ ಜನ್ಮದಲ್ಲಿ ಅನುಭವಿಸುತ್ತೀರಿ. ಹಾಗಾಗಿ, ಹಿಂದಿನ ಜನ್ಮದಲ್ಲಿ ನೀವೇನು ಮಾಡಿರುವಿರಿ, ಮತ್ತು ಈ ಜನ್ಮದಲ್ಲಿ ಕರ್ಮದ ಫಲ ಏನು ಸಿಗಬಹುದು ಅನ್ನೋದು ನಮಗೆ ತಿಳಿದಿರೋದಿಲ್ಲ.
ನಿಮ್ಮ ಬಳಿ ಎಷ್ಟು ಸಂಪತ್ತು ಇದೆ ಅನ್ನೋದು ತಿಳಿಯೋದಿಲ್ಲ
ನಿಮ್ಮ ಬಳಿ ಎಷ್ಟು ಹಣ ಅಂದರೆ ಧನ ಸಂಪತ್ತು (money) ಇರುತ್ತೆ ಅನ್ನೋದನ್ನು ಸಹ ನೀವಾಗಿ ನಿರ್ಧರಿಸೋಕೆ ಸಾಧ್ಯಾನೆ ಇಲ್ಲ. ಇದು ಸಹ ತಾಯಿಯ ಗರ್ಭದಲ್ಲಿರೋವಾಗಲೇ ದೇವರಿಂದ ನಿರ್ಧರಿಸಲ್ಪಡುತ್ತದೆ.
ಕಲಿಯುವ ವಿದ್ಯೆ
ಒಬ್ಬ ವ್ಯಕ್ತಿ ದೊಡ್ಡವರಾಗಿ ಎಷ್ಟು ವಿದ್ಯಾಭ್ಯಾಸ ಮಾಡಬಹುದು? ಯಾವೆಲ್ಲಾ ಜ್ಞಾನ (education) ಸಂಗ್ರಹಿಸಬಹುದು ಅನ್ನೋದೆಲ್ಲಾ ತಾಯಿಯ ಗರ್ಭದಲ್ಲೇ ನಿರ್ಧರಿತವಾಗುತ್ತದೆ.
ಸಾವಿನ ಬಗ್ಗೆ ನಿಮಗೆ ನಿರ್ಧರಿಸೋಕೆ ಸಾಧ್ಯವಿಲ್ಲ
ಈ ನಾಲ್ಕು ವಿಷಯಗಳು ಅಲ್ಲದೇ ನೀವು ಯಾವಾಗ ಮತ್ತು ಹೇಗೆ ಸಾಯುತ್ತೀರಿ (death) ಅನ್ನೋದು ಸಹ ದೇವರು ಮೊದಲೇ ನಿರ್ಧರಿಸುತ್ತಾರೆ. ಮೃತ್ಯುವಿನ ಬಗ್ಗೆ ಯಾರಿಗೂ ನಿರ್ಧರಿಸಲು ಸಾಧ್ಯವಿಲ್ಲ. ಇದನ್ನು ಎಲ್ಲಾ ಧರ್ಮದ ಗ್ರಂಥಗಳಲ್ಲೂ ತಿಳಿಸಲಾಗಿದೆ.