ಕೇರಳದಲ್ಲಿ ಓಣಂ ಸಂಭ್ರಮ; ಹತ್ತು ದಿನಗಳ ಉತ್ಸವದಲ್ಲಿ ವಿಶೇಷತೆ ಏನು?
First Published | Aug 21, 2023, 4:02 PM ISTಕೇರಳದ ಜನರ ಪ್ರೀತಿಯ ಹಬ್ಬ ಓಣಂ. ಇದನ್ನು ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತದೆ. ಇದನ್ನು ಸುಗ್ಗಿಯ ಹಬ್ಬ ಎಂದು ಕರೆಯಲಾಗುತ್ತದೆ.ಇದು ಕೇರಳದ ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಏಕೈಕ ಹಬ್ಬ. ಹತ್ತು ದಿನಗಳ ಕಾಲ ಓಣಂ ಆಚರಣೆ ನಡೆಯಲಿದೆ. ಉತ್ತರ ಭಾರತದಲ್ಲಿ ದೀಪಾವಳಿ ಹಬ್ಬವನ್ನು ಹೇಗೆ ಆಚರಿಸಲಾಗುತ್ತದೆಯೋ ಅದೇ ರೀತಿ ದಕ್ಷಿಣ ಭಾರತದಲ್ಲಿ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ಪ್ರಮುಖವಾಗಿ ಕೇರಳದಲ್ಲಿ ಇದನ್ನು ಹೆಚ್ಚಾಗಿ ಆಚರಿಸುತ್ತಾರೆ. ಇದನ್ನು ತಿರುವೋಣಂ ಎಂದು ಸಹ ಕರೆಯುತ್ತಾರೆ. 10 ದಿನಗಳ ಓಣಂ ಉತ್ಸವದಲ್ಲಿ ಯಾವ ರೀತಿ ಆಚರಣೆ ಮಾಡುತ್ತಾರೆ ಎಂಬ ಮಾಹಿತಿ ಇಲ್ಲಿದೆ.