ಕೇರಳದಲ್ಲಿ ಓಣಂ ಆಚರಣೆಯ ವೇಳೆ ಶ್ವೇತ ಬಣ್ಣದ ಸೀರೆ, ವಸ್ತ್ರಗಳು ಹಾಗೂ ಚಿನ್ನಾಭರಣಗಳನ್ನು ಮಹಿಳೆಯರು ಧರಿಸುತ್ತಾರೆ. ಈ ಧಿರಿಸಿನಲ್ಲಿ ಹೂವುಗಳಿಂದ ಅಲಂಕೃತಗೊಂಡ ರಂಗೋಲಿ ಇಡುತ್ತಾರೆ.
ಓಣಂ ಹಬ್ಬದ ಪ್ರಯುಕ್ತ ಮಹಿಳೆಯರು ಬಿಳಿ ಮತ್ತು ಚಿನ್ನದ ಬಣ್ಣದ ಅಂಚಿರುವ ಸೀರೆಯನ್ನುಟ್ಟು ಸಂಭ್ರಮಿಸುತ್ತಾರೆ. ಹಾಗೆಯೇ ಸಾಂಪ್ರದಾಯಿಕ ಜಾನಪದ ನೃತ್ಯವನ್ನು ಕೂಡ ಮಹಿಳೆಯರು ಪ್ರದರ್ಶಿಸುತ್ತಾರೆ.
ಓಣಂ ಕೇರಳದ ನಾಡ ಹಬ್ಬವಾಗಿದೆ. ಆದ್ದರಿಂದ ಕೇರಳದ ಮಹಿಳೆಯರ ಸಾಂಪ್ರದಾಯಿಕ ಉಡುಪಾದ ಬಿಳಿ ಮತ್ತು ಚಿನ್ನದ ಬಣ್ಣದ ಅಂಚಿನ ಸೀರೆಯನ್ನು ಅವರು ಧರಿಸುತ್ತಾರೆ. ಗೋಲ್ಡನ್ ಜರಿ ಬಾರ್ಡರ್ ಸೀರೆಗಳು ತುಂಬಾ ಫೇಮಸ್.
ಮಹಿಳೆಯರು ಕಸುವ ಸೀರೆ ಎಂದು ಕರೆಯಲ್ಪಡುವ ಬಿಳಿ ಮತ್ತು ಚಿನ್ನದ ಜರಿಯ ಸೀರೆಯನ್ನು ಧರಿಸುತ್ತಾರೆ. ಇದು ಓಣಂ ಸೀರೆ ಎಂದೇ ಹೆಸರುವಾಸಿಯಾಗಿದೆ.
ಜರಿ ಎಂದೂ ಕರೆಯಲ್ಪಡುವ ಚಿನ್ನದ ದಾರದ ಬಳಕೆಯು ಈ ಸೀರೆಗಳಿಗೆ ಸುಂದರವಾದ ಹೊಳಪನ್ನು ನೀಡುತ್ತದೆ. ಓಣಂ ಆಚರಣೆಯ ಸಮಯದಲ್ಲಿ ಅನೇಕರು ಸೂಕ್ಷ್ಮವಾದ ಮತ್ತು ಕಡಿಮೆ ಬಾರ್ಡರ್ ಇರುವ ಸೀರೆಗಳನ್ನು ಧರಿಸಲು ಇಷ್ಟಪಡುತ್ತಾರೆ.