ಮಹಿಳಾ ದಿನ, ಶಿವರಾತ್ರಿಯಂದು, ಮಹಿಳಾ ಶಕ್ತಿ ಸ್ಫೂರ್ತಿಯಾದ ಪಾರ್ವತಿ ದೇವಿ ಬಗ್ಗೆ ತಿಳಿಯೋಣ!

First Published Mar 8, 2024, 3:15 PM IST

ಇಂದು ಶಿವರಾತ್ರಿ, ಜೊತೆಗೆ ಮಹಿಳಾ ದಿನವೂ ಆಗಿದೆ. ಈ ದಿನ ಶಿವನನ್ನು ಪೂಜಿಸಲಾಗುತ್ತದೆ, ಆದರೆ ಪಾರ್ವತಿ ದೇವಿಯಿಲ್ಲದೆ ಶಿವ ಅಪೂರ್ಣನಾಗಿದ್ದಾನೆ ಏಕೆಂದರೆ ಮಾತಾ ಪಾರ್ವತಿಯನ್ನು ಶಕ್ತಿ ಸ್ವರೂಪ ಎಂದು ಕರೆಯಲಾಗುತ್ತದೆ. ಪಾರ್ವತಿ ದೇವಿಯನ್ನು ಶಕ್ತಿಯ ಸಂಕೇತ ಎಂದು ಏಕೆ ಕರೆಯಲಾಗುತ್ತದೆ ಅನ್ನೋದನ್ನು ತಿಳಿಯೋಣ. 
 

ಇಂದು, ಮಾರ್ಚ್ 8, ಮಹಾಶಿವರಾತ್ರಿಯೂ (Mahashivaratri) ಹೌದು, ಮಹಿಳಾ ದಿನವೂ (Womens Day) ಹೌದು. ಇವೆರಡು ಸೇರಿ ಈ ದಿನ ತುಂಬಾನೆ ವಿಶೇಷದೆ. ಇಂದು ಇಡೀ ವಾತಾವರಣವು ಶಿವಮಯವಾಗಿ ಮಾರ್ಪಟ್ಟಿದೆ. ಮತ್ತೊಂದೆಡೆ, ಇಡೀ ಜಗತ್ತು ಮಹಿಳಾ ಶಕ್ತಿಯನ್ನು ಶ್ಲಾಘಿಸುತ್ತಿದೆ. ನೀವು ಮಹಿಳಾ ಶಕ್ತಿಯನ್ನು ಶಿವರಾತ್ರಿಯೊಂದಿಗೆ ಕನೆಕ್ಟ್ ಮಾಡಬಹುದು, ಯಾಕಂದ್ರೆ ಈ ದಿನದಂದು ಶಿವ ಮತ್ತು ಪಾರ್ವತಿ ದೇವಿಯು ವಿವಾಹವಾದರು. 
 

ಶಿವನಂತೆ, ಪಾರ್ವತಿ ದೇವಿಯೂ (Goddess Parvati)  ಶಕ್ತಿ, ದೈವೀಕತೆಯ ರೂಪವಾಗಿದ್ದಾಳೆ. ಪಾರ್ವತಿ ದೇವಿಯು ಸ್ವತಃ ಶಕ್ತಿಯ ಅವತಾರ. ಹಾಗಾಗಿ ಇಂದು ಮಹಿಳಾ ದಿನದಂದು, ಶಕ್ತಿಯ ಸಂಕೇತವಾದ ಪಾರ್ವತಿ ದೇವಿಯ ಶಕ್ತಿಯ ಬಗ್ಗೆ ತಿಳಿದುಕೊಳ್ಳುವ ಮೂಲಕ ನಾವು ಅವರಿಂದ ಸ್ಫೂರ್ತಿ ಪಡೆಯಬಹುದು. ಬನ್ನಿ, ಪಾರ್ವತಿ ದೇವಿಯನ್ನು ಶಕ್ತಿಯ ಅವತಾರವೆಂದು ಏಕೆ ಪರಿಗಣಿಸಲಾಗುತ್ತದೆ ಎಂದು ತಿಳಿಯಿರಿ.
 

Latest Videos


ಪ್ರತಿಕೂಲ ಸಂದರ್ಭಗಳಲ್ಲಿ ಪಾರ್ವತಿ ದೇವಿ ಕಪ್ಪು ಬಣ್ಣಕ್ಕೆ ತಿರುಗುತ್ತಾಳೆ
ಶಿವನ ಅರ್ಧನಾರೀಶ್ವರ ರೂಪದಲ್ಲಿ ಮತ್ತೊಂದು ಅರ್ಧ ರೂಪ ಪಾರ್ವತಿ ದೇವಿಯದ್ದಾಗಿರುತ್ತೆ. ಇದರರ್ಥ ಮಹಿಳೆ ಮಾತ್ರ ಈ ಜಗತ್ತನ್ನು ಪೂರ್ಣಗೊಳಿಸಬಹುದು. ಮಾತಾ ಪಾರ್ವತಿಯನ್ನು ಶಾಂತ ಮತ್ತು ತಾಳ್ಮೆಯ ರೂಪ ಎಂದು ಪರಿಗಣಿಸಲಾಗುತ್ತದೆ ಆದರೆ ಸವಾಲನ್ನು ಎದುರಿಸಬೇಕಾಗಿ ಬಂದ ತಕ್ಷಣ, ಪಾರ್ವತಿ ದೇವಿ ತನ್ನ ಕಾಳಿ (Kaali Devi) ಅವತಾರವನ್ನು ಧರಿಸುವ ಮೂಲಕ ದುಷ್ಟರನ್ನು ಎದುರಿಸುತ್ತಾಳೆ. 
 

ಪಾರ್ವತಿ ದೇವಿಯು ಯಾವುದೇ ಪರಿಸ್ಥಿತಿಗೆ ಹೆದರುವುದಿಲ್ಲ. ಪಾರ್ವತಿ ದೇವಿಯಿಂದ, ಒಬ್ಬ ವ್ಯಕ್ತಿಯು ಕಷ್ಟದ ಸಂದರ್ಭಗಳಲ್ಲಿ ಸಹ ಭಯವನ್ನು ಬಿಟ್ಟು ತನ್ನ ಎಲ್ಲಾ ಶಕ್ತಿಯಿಂದ ತಪ್ಪುಗಳ (mistakes) ವಿರುದ್ಧ ಹೋರಾಡಬೇಕು ಎಂದು ನಾವು ಕಲಿಯಬಹುದು. ವಿಶೇಷವಾಗಿ ಮಹಿಳೆಯರು ಪಾರ್ವತಿ ದೇವಿಯ ಕಾಳಿ ರೂಪದಿಂದ ಸ್ಫೂರ್ತಿ ಪಡೆಯಬೇಕು.
 

ಶಿವನಿಗೂ ತಪ್ಪಿನ ಅರಿವು ಮೂಡಿಸಿದ್ದ ತಾಯಿ ಪಾರ್ವತಿ
ಈ ಜಗತ್ತಿನಲ್ಲಿ ಎಂದಿಗೂ ತಪ್ಪು ಮಾಡದೇ ಇರುವವರು ಯಾರೂ ಇಲ್ಲ. ಕಾರಣ ಏನೇ ಇರಲಿ, ಆದರೆ ಪ್ರತಿಯೊಬ್ಬ ವ್ಯಕ್ತಿಯು ಒಂದಲ್ಲ ಒಂದು ತಪ್ಪು ಮಾಡಿರುತ್ತಾನೆ, ತಪ್ಪು ಮಾಡಿದ ನಂತರ ಅದನ್ನು ಅರಿತುಕೊಳ್ಳುತ್ತಾನೆ. ಮನುಷ್ಯರು ಮಾತ್ರವಲ್ಲ, ದೇವರೂ ಸಹ ತಪ್ಪು ಮಾಡಿದ್ದಾರೆ. ದೇವಾದಿದೇವ ಶಿವನು ಸಹ ತಪ್ಪು ಮಾಡಿದ್ದಾನೆ. 
 

ಗಣೇಶ ತನ್ನ ಮಗನೆಂದು ಅರಿಯದೆ ಶಿವನು ಆತನ ತಲೆಯನ್ನು ಕತ್ತರಿಸಿದಾಗ, ಪಾರ್ವತಿ ದೇವಿಯು ಕಾಳಿ ರೂಪವನ್ನು ಪಡೆದು ಮಗುವಿನೊಂದಿಗೆ ಈ ರೀತಿ ವರ್ತಿಸಬಾರದಿತ್ತು ಎಂದು ಶಿವನಿಗೆ ತನ್ನ ತಪ್ಪನ್ನು ಅರ್ಥೈಸಿದಳು. ಮೋಹ ಮಾಯೆಯನ್ನು ಮೀರಿ ಹೋದ ಶಿವನು ಕೋಪವನ್ನು ನಿಯಂತ್ರಿಸುವ ಮೂಲಕ ಮಗುವನ್ನು ಕ್ಷಮಿಸಬೇಕಾಗಿತ್ತು ಎಂದು ಪಾರ್ವತಿ ದೇವಿ ಶಿವನಿಗೆ ಹೇಳಿದ್ದಳು. ಆದರೆ ಶಿವನಿಗೆ ಸಿಕ್ಕ ಶಾಪದಿಂದ ಇದು ನಡೆದಿತ್ತು. ಈ ಸಂದರ್ಭದಲ್ಲಿ ನಾವು ತಿಳಿದುಕೊಳ್ಳಬೇಕಾದ್ದು ಏನಂದ್ರೆ ಪಾರ್ವತಿ ದೇವಿಯ ಈ ಗುಣಲಕ್ಷಣದಿಂದ, ನಮ್ಮ ಪ್ರೀತಿಪಾತ್ರರಲ್ಲಿ ಯಾರಾದರೂ ತಪ್ಪು ಮಾಡಿದರೆ, ತಪ್ಪನ್ನು ಅವರಿಗೆ ಹೇಳುವ ಮೂಲಕ ಅದನ್ನು ಸರಿ ಮಾಡಲು ಸಹ ನಮಗೆ ತಿಳಿದಿರಬೇಕು. 
 

ತ್ಯಾಗ ಮತ್ತು ವಾತ್ಸಲ್ಯದ ಸಂಕೇತ
ಒಮ್ಮೆ ಲಕ್ಷ್ಮಿ ದೇವಿಯು (Lakshmi Devi) ತನಗೆ ವೈಭವ, ಸಂಪತ್ತು ಇದೆ ಆದರೆ ಮಕ್ಕಳಿಲ್ಲದೇ ತಾನು ಅಪೂರ್ಣಳಾಗಿದ್ದೇನೆ ಎಂದು ನೊಂದುಕೊಂಡಿದ್ದಳು.  ಮಾತೆ ಪಾರ್ವತಿಗೆ ಈ ವಿಷಯ ತಿಳಿದಾಗ, ಅವಳು ಮಗು ಗಣೇಶನನ್ನು ಲಕ್ಷ್ಮಿ ದೇವಿಯ ತೊಡೆಯ ಮೇಲೆ ಕೂರಿಸಿದಳು ಮತ್ತು ಇಂದಿನಿಂದ ಅವನು ನಿಮ್ಮ ಮಗ ಎಂದು ಹೇಳಿದಳು. ಮಾತಾ ಪಾರ್ವತಿಯ ಈ ಗುಣವನ್ನು ನೋಡಿ ಲಕ್ಷ್ಮೀ ದೇವಿಯು ತುಂಬಾ ಸಂತೋಷಪಟ್ಟಳು. ಈ ಕಾರಣಕ್ಕಾಗಿ, ಲಕ್ಷ್ಮಿ ದೇವಿಯೊಂದಿಗೆ ಗಣೇಶನನ್ನು ಸಹ ಪೂಜಿಸಲಾಗುತ್ತದೆ.

click me!