Birth Date: ಈ ದಿನಾಂಕಗಳಲ್ಲಿ ಹುಟ್ಟಿದವರ ಜೊತೆ ಬಾಳೋದು ನರಕಕ್ಕೆ ಸಮಾನ!

Published : Feb 08, 2026, 08:07 AM IST

ಮದುವೆಯಾಗಲಿ, ಪ್ರೀತಿಯ ಸಂಬಂಧವೇ ಆಗಲಿ, ಇಬ್ಬರು ಸಂಗಾತಿಗಳ ನಡುವಿನ ತಿಳುವಳಿಕೆ, ಪ್ರೀತಿ ಮತ್ತು ನಂಬಿಕೆಯ ಮೇಲೆ ನಿಂತಿರುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ದಿನಾಂಕಗಳಲ್ಲಿ ಜನಿಸಿದವರು ಕ್ರೂರ ಸ್ವಭಾವವನ್ನು ಹೊಂದಿರುತ್ತಾರೆ. ಅಂತಹವರನ್ನು ಜೀವನ ಸಂಗಾತಿಯಾಗಿ ಸಹಿಸಿಕೊಳ್ಳುವುದು ತುಂಬಾ ಕಷ್ಟ.

PREV
14
ಒಳ್ಳೆಯ ಜೀವನ ಸಂಗಾತಿ
ಒಳ್ಳೆಯ ಜೀವನ ಸಂಗಾತಿ ಸಿಗುವುದು ನಿಜಕ್ಕೂ ಅದೃಷ್ಟ. ಆದರೆ ಕೆಲವೇ ಕೆಲವರು ಈ ವಿಚಾರದಲ್ಲಿ ಅದೃಷ್ಟವಂತರು. ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ಸಂಖ್ಯೆಗಳಲ್ಲಿ ಜನಿಸಿದವರು ಉತ್ತಮ ಸಂಗಾತಿಯಾಗಲಾರರು. ಇವರು ತಮ್ಮ ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ಕೆಲವೊಮ್ಮೆ ಕ್ರೂರವಾಗಿ ವರ್ತಿಸಿ, ದೈಹಿಕ ಹಿಂಸೆಗೂ ಮುಂದಾಗಬಹುದು.
24
4, 13, 22, 31
4, 13, 22, 31ನೇ ತಾರೀಖಿನಂದು ಜನಿಸಿದವರ ಮೂಲಾಂಕ (Radix) 4 ಆಗಿರುತ್ತದೆ. ಇವರು ರಾಹುವಿನ ಪ್ರಭಾವಕ್ಕೆ ಒಳಗಾಗಿರುತ್ತಾರೆ. ಇದರಿಂದಾಗಿ ಕೆಲವೊಮ್ಮೆ ಕ್ರೂರವಾಗಿ ವರ್ತಿಸುತ್ತಾರೆ. ಇವರಿಗೆ ಕೋಪ ಮತ್ತು ಹಠಮಾರಿತನ ಹೆಚ್ಚು. ತಮ್ಮ ಸಂಗಾತಿಯ ಮಾತನ್ನು ಕೇಳದೆ, ಮನಸ್ಸಿಗೆ ಬಂದಂತೆ ವರ್ತಿಸಿ ನೋವು ಕೊಡುತ್ತಾರೆ.
34
ಮೂಲಾಂಕ 8
8, 17, 26ನೇ ತಾರೀಖಿನಂದು ಜನಿಸಿದವರ ಮೂಲಾಂಕ 8 ಆಗಿರುತ್ತದೆ. ಇವರನ್ನು ಆಳುವ ಗ್ರಹ ಶನಿ. ಶನಿ ಗ್ರಹವು ಸಂಗಾತಿಯನ್ನು ಅತಿಯಾಗಿ ಪ್ರೀತಿಸುವಂತೆ ಮಾಡುತ್ತದೆ. ಆದರೆ, ಕೆಲವೊಮ್ಮೆ ಹಠಮಾರಿಗಳನ್ನಾಗಿಯೂ ಮಾಡುತ್ತದೆ. ಇದರಿಂದಾಗಿ ಕೆಲವೊಮ್ಮೆ ಸಂಗಾತಿಯನ್ನು ನಿರ್ಲಕ್ಷಿಸುತ್ತಾರೆ. ಮತ್ತೆ ಕೆಲವು ಬಾರಿ ಅವರ ಕನಸು, ಗುರಿಗಳನ್ನು ತಲುಪಲು ಸಹಾಯ ಮಾಡುತ್ತಾರೆ.
44
ಮೂಲಾಂಕ 9

ಯಾವುದೇ ತಿಂಗಳ 9, 18, 27ನೇ ತಾರೀಖಿನಂದು ಜನಿಸಿದವರ ಮೂಲಾಂಕ 9 ಆಗಿರುತ್ತದೆ. ಈ ಸಂಖ್ಯೆಯನ್ನು ಮಂಗಳ ಗ್ರಹವು ಆಳುತ್ತದೆ. ಹಾಗಾಗಿಯೇ ಈ ದಿನಾಂಕಗಳಲ್ಲಿ ಜನಿಸಿದವರು ಇತರರನ್ನು ಕೀಳಾಗಿ ಕಾಣುತ್ತಾರೆ. ತುಂಬಾ ಆಕ್ರಮಣಕಾರಿಯಾಗಿ ವರ್ತಿಸುತ್ತಾರೆ. ಸಂಗಾತಿಯ ಮೇಲೆ ಹಿಂಸಾತ್ಮಕ ನಡವಳಿಕೆಯನ್ನೂ ತೋರಬಹುದು. ಪ್ರೀತಿ ತೋರಿಸದೆ ನೋವು ಕೊಡುತ್ತಾರೆ. ಇಂತಹ ಸಂಗಾತಿಯನ್ನು ಪಡೆದವರು ಜಾಗರೂಕರಾಗಿರಬೇಕು.

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.

Read more Photos on
click me!

Recommended Stories