ರಾಡಿಕ್ಸ್ ನಂಬರ್ 4:
4, 13, 22 ಈ ದಿನಾಂಕಗಳಲ್ಲಿ ಹುಟ್ಟಿದವರು ರಾಡಿಕ್ಸ್ ನಂಬರ್ 4 ಕೆಳಗೆ ಬರುತ್ತಾರೆ. ಇವರ ಮೇಲೆ ರಾಹು ಗ್ರಹದ ಪ್ರಭಾವ ಹೆಚ್ಚಾಗಿ ಇರುತ್ತದೆ. ಇವರು ವೈಯಕ್ತಿಕವಾಗಿ ಉನ್ನತ ಸ್ಥಾನಕ್ಕೆ ತಲುಪುತ್ತಾರೆ. ಇವರಲ್ಲಿ ನಾಯಕತ್ವದ ಗುಣಗಳು ಹೆಚ್ಚಾಗಿ ಇರುತ್ತವೆ. ಒಳ್ಳೆಯ ವ್ಯಾಪಾರಸ್ಥರಾಗಿ ಉನ್ನತ ಸ್ಥಾನಕ್ಕೆ ತಲುಪುತ್ತಾರೆ. ಆದರೆ ಇವರಲ್ಲಿ ಕೆಟ್ಟ ಗುಣಗಳು ಹೆಚ್ಚಾಗಿ ಇರುತ್ತವೆ. ಬೇಗನೆ ಕೆಟ್ಟ ಚಟಗಳಿಗೆ ದಾಸರಾಗುವ ಸಾಧ್ಯತೆ ಇರುತ್ತದೆ.
ಮುಖ್ಯವಾಗಿ ಗ್ಯಾಂಬ್ಲಿಂಗ್, ಡ್ರಗ್ಸ್ ಗೆ ದಾಸರಾಗುತ್ತಾರೆ. ಹಾಗೇ ಇವರು ತಮ್ಮ ಪಾರ್ಟನರ್ ಜೊತೆ ಕೂಡ ನಿಜವಾಗಿ ಇರಲ್ಲ. ಒಂದಕ್ಕಿಂತ ಹೆಚ್ಚು ಜನರ ಜೊತೆ ರಿಲೇಷನ್ ಶಿಪ್ ನಲ್ಲಿ ಇರುತ್ತಾರೆ. ಈ ದಿನಾಂಕಗಳಲ್ಲಿ ಹುಟ್ಟಿದವರು ಡಿವೋರ್ಸ್ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ.