ಸೆಪ್ಟೆಂಬರಲ್ಲಿ ಈ ಅದೃಷ್ಟ ಸಂಖ್ಯೆಯ ಜನರಿಗೆ ಸಂಗಾತಿ ಜೊತೆ ಜಗಳವಾಗೋದು ಗ್ಯಾರಂಟಿ

First Published | Sep 4, 2023, 5:45 PM IST

ಸಂಖ್ಯಾಶಾಸ್ತ್ರದಲ್ಲಿ ಜೀವನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು  ನೀಡುತ್ತದೆ. ಸಮಯವು ನಿಮಗೆ ಅನುಕೂಲಕರವಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆಯೂ ಇದು ಮಾಹಿತಿಯನ್ನು ನೀಡುತ್ತದೆ. ಸಂಖ್ಯಾಶಾಸ್ತ್ರದ ಮುನ್ಸೂಚನೆಗಳ ಪ್ರಕಾರ ನಿಮ್ಮ ಜೀವನ ಸೆಪ್ಟೆಂಬರ್ ನಲ್ಲಿ ಹೇಗಿರಲಿದೆ ತಿಳಿಯಿರಿ.
 

ಸಂಖ್ಯಾಶಾಸ್ತ್ರವು (Numerology) ಒಂದು ಪ್ರಾಚೀನ ಅಧ್ಯಯನ. ಇದರಲ್ಲಿ ನಿಮ್ಮ ಹುಟ್ಟಿದ ದಿನಾಂಕದ ಸಂಖ್ಯೆಗಳನ್ನು ಬಳಸಿಕೊಂಡು ಭವಿಷ್ಯದ ಬಗ್ಗೆ ಹೇಳಬಹುದು. ಅದೃಷ್ಟ ಸಂಖ್ಯೆಗಳ ವಿಷಯಕ್ಕೆ ಬಂದಾಗ, ಇದು ನಿಮ್ಮ ಹುಟ್ಟಿದ ದಿನಾಂಕದ ಒಟ್ಟು ಮೊತ್ತದಿಂದ ಪಡೆದ ಏಕೈಕ ಅಂಕಿ. ಸಂಖ್ಯಾಶಾಸ್ತ್ರವು ನಿಮ್ಮ ಮುಂಬರುವ ಸಮಯದ ಬಗ್ಗೆ ಮಾಹಿತಿ ನೀಡುತ್ತದೆ. ಇದು ನಿಮ್ಮ ವರ್ತಮಾನ ಮತ್ತು ಭವಿಷ್ಯದಲ್ಲಿನ ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ.
 

ಸಮಯ ಯಾವಾಗಲೂ ನಿಮಗೆ ಅನುಕೂಲಕರವಾಗಿರುವುದಿಲ್ಲ, ಆದರೆ ಸಂಖ್ಯಾಶಾಸ್ತ್ರದ ಮುನ್ಸೂಚನೆಯಿಂದ ಭವಿಷ್ಯದ ಬಗ್ಗೆ ಮಾಹಿತಿ ಪಡೆಯಲು ನಿಮಗೆ ಸಾಧ್ಯ. ಇದರಿಂದ ಮುಂಬರುವ ಸಮಯದಲ್ಲಿ ಬದಲಾವಣೆಗಳನ್ನು ತರಬಹುದು ಮತ್ತು ಸಮಯಕ್ಕೆ ಅನುಗುಣವಾಗಿ ಎಲ್ಲವನ್ನು ಸರಿ ಮಾಡಬಹುದು.
 

Tap to resize

ಸೆಪ್ಟೆಂಬರ್ ತಿಂಗಳು (September Month) ಕೆಲವು ಅದೃಷ್ಟಶಾಲಿಗಳಿಗೆ ಸಮಸ್ಯೆಗಳಿಂದ ತುಂಬಿರಬಹುದು, ವಿಶೇಷವಾಗಿ ಕೆಲವು ಜನರು ವೈವಾಹಿಕ ಜೀವನದಲ್ಲಿ (Married LIfe) ಸಮಸ್ಯೆಗಳನ್ನು ಎದುರಿಸಬಹುದು ಮತ್ತು ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಇರಬಹುದು. ಈ ತಿಂಗಳು ಹೇಗಿರಲಿದೆ ನೋಡೋಣ. .
 

ನಿಮ್ಮ ಅದೃಷ್ಟ ಸಂಖ್ಯೆಯನ್ನು ಕಂಡುಹಿಡಿಯುವುದು ಹೇಗೆ?
ನಿಮ್ಮ ಹುಟ್ಟಿದ (date of birth) ಪೂರ್ಣ ದಿನಾಂಕದ ಮೊತ್ತದ ಏಕ ಅಂಕಿಯನ್ನು ಅದೃಷ್ಟ ಸಂಖ್ಯೆ ಎಂದು ಕರೆಯಲಾಗುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಭವಿಷ್ಯವನ್ನು ನೀವು ಕಂಡುಹಿಡಿಯಬಹುದು. ನಿಮ್ಮ ಜನ್ಮದಿನವು 03 ಮಾರ್ಚ್ 1998 ಆಗಿದ್ದರೆ, ನಿಮ್ಮ ಅದೃಷ್ಟ ಸಂಖ್ಯೆ: 3 + 3 + 1 + 9 + 9 + 8 = 33 = 3 + 3 = 6

ಅದೃಷ್ಟ ಸಂಖ್ಯೆ 3 
ಭಾಗ್ಯಂಕ 3 (Lucky number 3) ಯಾವಾಗಲೂ ಸೃಜನಶೀಲತೆ, ಸ್ವಯಂ ಅಭಿವ್ಯಕ್ತಿ ಮತ್ತು ಸಾಮಾಜಿಕ ಸಂವಹನಕ್ಕೆ ಹೆಸರುವಾಸಿಯಾಗಿದೆ. ಸೆಪ್ಟೆಂಬರ್ 2023 ವ್ಯಕ್ತಿಗಳು ತಮ್ಮ ಕಲಾತ್ಮಕ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಆಲೋಚನೆಗಳನ್ನು ಉತ್ಸಾಹದಿಂದ ಮುಂದುವರೆಸಲು ಪ್ರೇರೇಪಿಸುವ ತಿಂಗಳು. ಆದರೆ ಈ ತಿಂಗಳು ನೀವು ಸಂಸಾರದಲ್ಲಿ ಕೆಲವು  ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಯಾವುದೇ ಕ್ಷೇತ್ರದಲ್ಲಿ, ಪ್ರಗತಿಯನ್ನು ಸಾಧಿಸಲು ನೀವು ತುಂಬಾ ಶ್ರಮಿಸಬೇಕಾಗಬಹುದು ಮತ್ತು ಫಲಿತಾಂಶಗಳು ಕಡಿಮೆ ಇರುತ್ತದೆ. 

ಅದೃಷ್ಟ ಸಂಖ್ಯೆ 4 
ಸಂಖ್ಯೆ 4 ಸ್ಥಿರತೆ, ಕಠಿಣ ಪರಿಶ್ರಮ ಮತ್ತು ಪ್ರಾಯೋಗಿಕತೆಗೆ ಸಂಬಂಧಿಸಿದೆ. ಸೆಪ್ಟೆಂಬರ್ ತಿಂಗಳು ನಿಮ್ಮ ವೃತ್ತಿಜೀವನಕ್ಕೆ ತುಂಬಾ ಒಳ್ಳೆಯದು. ನೀವು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯುತ್ತೀರಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸಿನ ಅವಕಾಶಗಳು ಇರುತ್ತವೆ. ನೀವು ಈ ತಿಂಗಳು ಕುಟುಂಬದ ಅತ್ತೆ ಮಾವಂದಿರನ್ನು ಭೇಟಿಯಾಗಬಹುದು ಮತ್ತು ಅವರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ವೃತ್ತಿಜೀವನ (career life) ಮತ್ತು ಕುಟುಂಬದೊಂದಿಗೆ ಸಮಯವು ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತಿದ್ದರೂ, ಈ ತಿಂಗಳು ಸಂಗಾತಿಯೊಂದಿಗೆ ಹೊಂದಿಕೊಳ್ಳುವುದು ಕಷ್ಟವಾಗಬಹುದು. 

ಅದೃಷ್ಟ ಸಂಖ್ಯೆ 5
ಅದೃಷ್ಟ ಸಂಖ್ಯೆ 5 ಯಾವಾಗಲೂ ಬದಲಾವಣೆ ಮತ್ತು ಸ್ವಾತಂತ್ರ್ಯವನ್ನು ಪ್ರತಿನಿಧಿಸುತ್ತದೆ. ನಿಮ್ಮ ಅದೃಷ್ಟ ಸಂಖ್ಯೆಯೂ ಇದೇ ಆಗಿದ್ದರೆ, ಸೆಪ್ಟೆಂಬರ್ ತಿಂಗಳಲ್ಲಿ ನೀವು ನಿಮ್ಮ ಸಂಗಾತಿಯಿಂದ ದೂರ ಆಗುವ ಸಾಧ್ಯತೆ ಇದೆ. ಕೆಲವು ಸಣ್ಣ ವಿಷಯಗಳಿಗೆ ನಿಮ್ಮ ಸಂಗಾತಿಯೊಂದಿಗೆ ವಿವಾದ (couple fight) ಉಂಟಾಗಬಹುದು. ನಿಮ್ಮ ನಿರ್ಧಾರವನ್ನು ಇತರ ವ್ಯಕ್ತಿಯ ಮೇಲೆ ಹೇರಲು ನೀವು ಪ್ರಯತ್ನಿಸುತ್ತೀರಿ, ಇದು ಒಳ್ಳೆಯದಲ್ಲ. ಆದರೆ, ಶಿಕ್ಷಣಕ್ಕೆ ಸಮಯ ಉತ್ತಮವಾಗಿದೆ ಮತ್ತು ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ನೀಡಿದ್ದರೆ ಅದರಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ.   
 

ಅದೃಷ್ಟ ಸಂಖ್ಯೆ 9 
ಈ ತಿಂಗಳು, ಲಕ್ಕಿ ಸಂಖ್ಯೆ 9 ಕೆಲಸದ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ, ಆದರೆ ನಿಮ್ಮ ಕಠಿಣ ಪರಿಶ್ರಮದ ಪೂರ್ಣ ಫಲಿತಾಂಶವನ್ನು ನೀವು ಪಡೆಯುವುದಿಲ್ಲ. ನೀವು ಸಮಯವನ್ನು ಉಳಿಸಬೇಕು ಮತ್ತು ಯಾವುದೇ ತಪ್ಪು ನಿರ್ಧಾರಗಳನ್ನು ತಪ್ಪಿಸಬೇಕು. ಈ ತಿಂಗಳು ನೀವು ನಿಜವಾಗಿಯೂ ಅರ್ಹವಾದ ಕಾರ್ಯಗಳ ಪೂರ್ಣ ಪ್ರಯೋಜನವನ್ನು ಪಡೆಯುವುದಿಲ್ಲ. ಪ್ರೀತಿಯ ವಿಷಯದಲ್ಲಿ, ಸಮಯವು ಉತ್ತಮವಾಗಿದೆ ಮತ್ತು ನೀವು ಹೊಸ ಸಂಬಂಧವನ್ನು ರೂಪಿಸಬಹುದು, ಆದರೆ ವಿವಾಹಿತರು ಹೊಂದಿಕೊಳ್ಳುವಲ್ಲಿ ಸಮಸ್ಯೆಗಳನ್ನು ಹೊಂದಿರಬಹುದು. ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಮತ್ತು ಎಲ್ಲಾದರೂ ಪ್ರವಾಸಕ್ಕೆ ಹೋಗಲು ಯೋಜಿಸಲು ನಿಮಗೆ ಸೂಚಿಸಲಾಗಿದೆ. 
 

Latest Videos

click me!