ಮಹಿಳಾ ದೌರ್ಜನ್ಯದ ವಿರುದ್ಧ ಬೀದಿಗಿಳಿದ ನವದುರ್ಗೆಯರು...!

First Published | Oct 16, 2023, 3:13 PM IST

ವರದಿ: ಭರತ್ ರಾಜ್ ಏಷ್ಯಾನೆಟ್

ಫೋಟೋ: ದಯಾನಂದ ಕುಕ್ಕಾಜೆ

ಅವರೆಲ್ಲಾ ಮಾಡೆಲಿಂಗ್ ಜೊತೆಗೆ ನೃತ್ಯದಲ್ಲಿ ಆಸಕ್ತಿ ಹೊಂದಿದ ಮಹಿಳೆಯರ ತಂಡ ಕಟ್ಟಿಕೊಂಡಿದ್ದವರು. ಹತ್ತಾರು ಕಾರ್ಯಕ್ರಮಗಳಲ್ಲಿ ಜೊತೆಯಾಗಿಯೇ ಭಾಗವಹಿಸ್ತಿದ್ದ ಆ ಮಹಿಳೆಯರು ಈ ಬಾರಿಯ ನವರಾತ್ರಿಗೆ ಹೊಸ ಕಾನ್ಸೆಪ್ಟ್ ಒಂದನ್ನು ರೂಪಿಸೋ ಯೋಜನೆ ಹಾಕಿದ್ರು. ಅದರಂತೆ ಆ ಒಂಬತ್ತು ಮಹಿಳೆಯರು ನವದುರ್ಗೆಯರ ಅವತಾರ ತಾಳಿ ಅಸುರ ಸಂಹಾರದ ಕಲ್ಪನೆ ಮೂಲಕ ಅತ್ಯಾಚಾರ, ಮಹಿಳಾ ದೌರ್ಜನ್ಯದ ವಿರುದ್ದ ಹೊಸ ಸಂದೇಶ ಸಾರಿದ್ದಾರೆ.

 ನವರಾತ್ರಿ ಒಂಭತ್ತು ದಿನಗಳ ಕಾಲ ದೇವಿಯನ್ನ ಅತೀವ ಭಕ್ತಿಯಿಂದ ಪೂಜಿಸೋ ಹಬ್ಬ. ಒಂಭತ್ತು ದಿನಗಳ ಕಾಲ ನಡೆದ ಯುದ್ಧದಲ್ಲಿ ಮಹಿಷಾಸುರನನ್ನು ದೇವಿಯು ತನ್ನ ಸಿಂಹ ಹಾಗೂ ಆಯುಧಗಳ ಸಹಾಯದಿಂದ ಸಂಹರಿಸಿದ ಕಥೆಯನ್ನ ನವರಾತ್ರಿ ಪ್ರತಿನಿಧಿಸುತ್ತದೆ. ದುಷ್ಟರ ಸಂಹಾರಕ್ಕಾಗಿ, ಶಿಷ್ಟರ ರಕ್ಷಣೆಗಾಗಿ ನವ ಅವತಾರಗಳನ್ನು ಎತ್ತಿ, ಅಸುರರನ್ನು ಸಂಹರಿಸಿದ ಶಕ್ತಿ ರೂಪಿಣಿಯೇ ದುರ್ಗಾದೇವಿ. 

ನವರಾತ್ರಿಯ ಒಂಭತ್ತೂ ದಿನಗಳಲ್ಲಿ ನವದುರ್ಗೆಇಟ್ಟು ಪೂಜಿಸಲಾಗುತ್ತದೆ. ರಾಜ್ಯದಲ್ಲಿ ದಸರಾ ಎಂದು ಕರೆಯಲ್ಪಡೋ ಈ ನವರಾತ್ರಿ ಸಂಭ್ರಮದಲ್ಲಿ ಮಂಗಳೂರು ದಸರಾ ಮತ್ತಷ್ಟು ಖ್ಯಾತಿ ಪಡೆದಿದೆ. ಈ ಹೊತ್ತಲ್ಲಿ ಮಂಗಳೂರಿನ ಮಹಿಳೆಯರ ತಂಡವೊಂದು ವಿಭಿನ್ನ ಪ್ರಯತ್ನ ಮಾಡಿದ್ದು, ಅಸುರ ಸಂಹಾರದ ಕಲ್ಪನೆ ಇಟ್ಟುಕೊಂಡು ದೇಶದಲ್ಲಿ ನಡೀತಿರೋ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರದ ವಿರುದ್ದ ಸಂದೇಶ ಸಾರಿದ್ದಾರೆ.  

Tap to resize

ಮಂಗಳೂರು ದಸರಾ ಸಂಭ್ರಮಕ್ಕೆ ಮಹಿಳೆಯರ ನವದುರ್ಗೆ ಕಾನ್ಸೆಪ್ಟ್ ಮತ್ತಷ್ಟು ಮೆರಗು ನೀಡಿದೆ. ಬಣ್ಣ ಹಚ್ಚಿ ಥೇಟ್ ನವದುರ್ಗೆಯರ ಅವತಾರ ತಾಳಿದ ಮಂಗಳೂರಿನ ಮಹಿಳೆಯರು, ಅಸುರ ಸಂಹಾರದ ಕಲ್ಪನೆಯಡಿ ನವರಾತ್ರಿಗೆ ನವದುರ್ಗೆಯರ ಅವತಾರ ತಾಳಿ ವಿಭಿನ್ನ ಸಂದೇಶ ಸಾರಿದ್ದಾರೆ. ಮಿಸೆಸ್ ಇಂಡಿಯಾ ಮಂಗಳೂರು ವಿಜೇತೆ ಸವಿತಾ ಚೇತನ್ ನೇತೃತ್ವದ ಟೀಂ, ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಖಂಡಿಸಿ ವಿಭಿನ್ನ ಸಂದೇಶದ ಕಲ್ಪನೆಯನ್ನ ಜನರಿಗೆ ತಲುಪಿಸಿದೆ.

 ಮಂಗಳೂರಿನ ‌ಮಠದಕಣಿಯಲ್ಲಿ ನವದುರ್ಗೆಯರ ವೇಷ ಧರಿಸಿ ಅಸುರ ಸಂಹಾರ ಕಥೆಯನ್ನ ಮರು ಸೃಷ್ಟಿ ಮಾಡಲಾಗಿದೆ. ಶೈಲಾಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕುಷ್ಮಾಂಡಾ, ಸ್ಕಂದಮಾತಾ, ಕಾಳರಾತ್ರಿ, ಕಾತ್ಯಾಯನಿ, ಮಹಾಗೌರಿ ಮತ್ತು ಸಿಧ್ಧಿಧಾತ್ರಿಯ ಅವತಾರ ದಲ್ಲಿ ಮಾಡೆಲಿಂಗ್ ಕ್ಷೇತ್ರದ ಮೂವರು ಹಾಗೂ ಡ್ಯಾನ್ಸ್ ಟೀಂನ ಆರು ಮಹಿಳೆಯರ ತಂಡ ಭಾಗಿಯಾಗಿದೆ.  ನವದುರ್ಗೆಯರಿಗೆ ಮಂಗಳೂರಿನ ಪ್ರಿಯಾ ಬಾಳಿಗಾ ಮೇಕಪ್ ಟೀಂ ಬಣ್ಣ ಹಚ್ಚಿದ್ದು, ಸವಿತಾ‌ ಚೇತನ್, ಸಪ್ನಾ, ಮಮತಾ, ಕೀರ್ತಿ,  ಶ್ರದ್ದ, ಸೌಮ್ಯಲತಾ, ಶಾರ್ಲೆಟ್, ರಕ್ಷಾ, ಸೌಮ್ಯ ನವದುರ್ಗೆಯರಾಗಿ ಬದಲಾಗಿದ್ದರು. 

ಇದಕ್ಕೆ ಪೂರಕ ಎನ್ನುವಂತೆ ಸರಸ್ವತಿ ಅರ್ಟ್ಸ್ ಮತ್ತು ಲಲಿತಾ ಕಲಾ ಆರ್ಟ್ಸ್ ವಸ್ತುಗಳನ್ನು ಬಳಸಿ ಅಸುರ ಸಂಹಾರ ಕಲ್ಪನೆ ಮರುಸೃಷ್ಟಿ ಮಾಡಲಾಗಿತ್ತು. ಮಂಗಳೂರು ದಸರಾ ಸಂಭ್ರಮದಲ್ಲಿ ವಿಭಿನ್ನ ‌ಪ್ರಯತ್ನ ಮಾಡಿದ ಗೆಳತಿಯರ ತಂಡ, ಬಣ್ಣ ಹಚ್ಚಿ ನವದುರ್ಗೆಯರ ಅವತಾರದ ಮೂಲಕ ನವರಾತ್ರಿ ಆಚರಣೆಗೆ ಸಾಕ್ಷಿಯಾಗಿದೆ.
 

Latest Videos

click me!